Monday, December 23, 2024

ಗಣಿ ರೈಡ್, ರೇಮೊಗೆ ಸ್ಪೂಕಿ ದಾರಿ.. ಫಿಲ್ಮ್ ಪೋಸ್ಟ್​ಪೋನ್

ರಂಗಿತರಂಗ ಮತ್ತು ಅವನೇ ಶ್ರೀಮನ್ನಾರಾಯಣ ಮೇಕರ್ಸ್​ನಿಂದ ಬರ್ತಿರೋ ಸ್ಪೂಕಿ ಕಾಲೇಜ್ ಇದೇ ನವೆಂಬರ್ 25ಕ್ಕೆ ತೆರೆಗೆ ಬರಬೇಕಿತ್ತು. ಆದ್ರೆ ಕಾರಣಾಂತರಗಳಿಂದ ರಿಲೀಸ್ ಡೇಟ್ ಪೋಸ್ಟ್​ಪೋನ್ ಆಗಿದೆ. ಇದು ಗೋಲ್ಡನ್ ಸ್ಟಾರ್ ಗಣಿಯ ತ್ರಿಬಲ್ ರೈಡ್ ಹಾಗೂ ಇಶಾನ್ ಮ್ಯೂಸಿಕಲ್ ಪ್ರೇಮ್ ಕಹಾನಿ ರೇಮೊಗೆ ಪೂರಕವಾಗಿದೆ.

  • ಡಿಸೆಂಬರ್​ನಲ್ಲಿ ಬರಲಿದೆ ಖುಷಿ- ವಿವೇಕ್​ರ ಸ್ಪೂಕಿ ಕಾಲೇಜ್

ಸಿಂಗಲ್ ಟೀಸರ್ ಹಾಗೂ ಕಲರ್​ಫುಲ್ ರೆಟ್ರೋ ರೀಮಿಕ್ಸ್ ಸಾಂಗ್​ನಿಂದ ಸದ್ದು ಮಾಡ್ತಿರೋ ಸಿನಿಮಾ ಸ್ಪೂಕಿ ಕಾಲೇಜ್. ದಿಯಾ ಖ್ಯಾತಿಯ ನಟಿ ಖುಷಿ ರವಿ ಹಾಗೂ ಅಪ್​ಕಮಿಂಗ್ ಹೀರೋ ವಿವೇಕ್ ಸಿಂಹ ಜೋಡಿಯ ಸೈಕಲಾಜಿಕಲ್ ಹಾರರ್​ ಥ್ರಿಲ್ಲರ್ ಚಿತ್ರವಿದು. ಭರತ್ ನಿರ್ದೇಶನವಿರೋ ಈ ಚಿತ್ರಕ್ಕೆ ಪ್ಯಾಷನೇಟ್ ಪ್ರೊಡ್ಯೂಸರ್ ಹೆಚ್​.ಕೆ ಪ್ರಕಾಶ್ ಬಂಡವಾಳ ಹಾಕಿದ್ದಾರೆ.

ರೀಸೆಂಟ್ ಆಗಿ ಮೆಲ್ಲುಸಿರೆ ಸವಿಗಾನ ರೀಮಿಕ್ಸ್ ವರ್ಷನ್​ನ ಸಾಂಗ್ ಲಾಂಚ್ ಆಯ್ತು. ಅಣ್ಣಾವ್ರ ವೀರ ಕೇಸರಿ ಚಿತ್ರದ ಆ ಎವರ್​ಗ್ರೀನ್ ಸಾಂಗ್​ಗೆ ಟ್ರೆಂಡಿಂಗ್ ಕಂಪೋಸರ್ ಅಜನೀಶ್ ಲೋಕನಾಥ್ ನ್ಯೂ ಟಚ್ ನೀಡಿದ್ರು. ಅಲ್ಲದೆ, ರೀಷ್ಮಾ ಗ್ಲಾಮರ್ ಸಿನಿಪ್ರಿಯರಿಗೆ ಮಸ್ತ್ ಕಿಕ್ ಕೊಟ್ಟಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ರೆ ಇದೇ ಶುಕ್ರವಾರ ಅಂದ್ರೆ ನವೆಂಬರ್ 25ಕ್ಕೆ ಸಿನಿಮಾ ತೆರೆಗೆ ಬರಬೇಕಿತ್ತು. ಆದ್ರೆ ಕಾರಣಾಂತರಗಳಿಂದ ರಿಲೀಸ್ ಡೇಟ್ ಮುಂದೂಡಿದೆ ಟೀಂ.

ಗೋಲ್ಡನ್ ಸ್ಟಾರ್ ಗಣೇಶ್​ರ ತ್ರಿಬಲ್ ರೈಡಿಂಗ್ ಹಾಗೂ ಸಿಆರ್ ಮನೋಹರ್ ನಿರ್ಮಾಣದ ರೇಮೊ ಚಿತ್ರಗಳು ಇದೇ ಶುಕ್ರವಾರ ಒಟ್ಟೊಟ್ಟಿಗೆ ರಿಲೀಸ್ ಆಗ್ತಿವೆ. ಸ್ಪೂಕಿ ಕೂಡ ಅದೇ ಡೇಟ್​ಗೆ ಬಂದ್ರೆ ಥಿಯೇಟರ್ ಕ್ಲ್ಯಾಶ್ ಆಗಲಿದೆ. ಹಾಗಾಗಿ ಮತ್ತೊಬ್ಬ ನಿರ್ಮಾಪಕರ ಸಮಸ್ಯೆಗಳನ್ನ ಅರಿತುಕೊಂಡ ಸ್ಪೂಕಿ ಪ್ರೊಡ್ಯೂಸರ್ ತಮ್ಮ ಸಿನಿಮಾದ ರಿಲೀಸ್ ಡೇಟ್​ನ ಡಿಸೆಂಬರ್​ಗೆ ಪೋಸ್ಟ್​ಪೋನ್ ಮಾಡಿದ್ದಾರೆ.

ಚಿತ್ರದ ತಾಂತ್ರಿಕ ಕೆಲಸಗಳನ್ನು ಮತ್ತಷ್ಟು ಗಟ್ಟಿಗೊಳಿಸ್ತಿರೋ ಚಿತ್ರತಂಡ, ಡಿಸೆಂಬರ್ ಮೊದಲ ವಾರ ಅಥ್ವಾ ಎರಡನೇ ವಾರ ತೆರೆಗೆ ತರೋ ಧಾವಂತದಲ್ಲಿದೆ. ಈ ವಿಷಯವನ್ನು ಚಿತ್ರತಂಡ ಸದ್ಯದಲ್ಲೇ ಅಫಿಶಿಯಲಿ ಅನೌನ್ಸ್ ಮಾಡಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES