Monday, December 23, 2024

ದೊಣ್ಣೆಯಿಂದ ಹೊಡೆದು ಪತ್ನಿ ಬರ್ಬರ ಹತ್ಯೆ

ರಾಮನಗರ : ಕುಡಿದ ಮತ್ತಿನಲ್ಲಿ ದೊಣ್ಣೆಯಿಂದ ಹೊಡೆದು ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಮನಗರ ತಾಲ್ಲೂಕಿನ ಅಮ್ಮನಪುರ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಬೋರಯ್ಯ ಎಂಬ ವ್ಯಕ್ತಿಯು ತಡರಾತ್ರಿ ಕುಡಿದ ಮತ್ತಿನಲ್ಲಿ ತನ್ನ ಪತ್ನಿ ಭದ್ರಮ್ಮನನ್ನು ಕೊಲೆ ಮಾಡಿದ್ದಾನೆ. ಈ ಹಿಂದೆ 2014ರಲ್ಲಿ ತನ್ನ ಮೊದಲ ಪತ್ನಿ ಬಸಮ್ಮನನ್ನು ಕೊಲೆ ಮಾಡಿ ಜೈಲು ಪಾಲಾಗಿದ್ದ. ನಂತರ ಜಾಮೀನಿನ ಮೇಲೆ ಹೊರಬಂದು ಭದ್ರಮ್ಮನನ್ನು ವಿವಾಹವಾಗಿದ್ದ. ಆದರೆ ತಡರಾತ್ರಿ ಕುಡಿದ ಮತ್ತಿನಲ್ಲಿ ತನ್ನ ಎರಡನೇ ಪತ್ನಿಯನ್ನು ಕೊಲೆ ಮಾಡಿ ತನ್ನ ಕ್ರೌರ್ಯವನ್ನು ಮೆರೆದಿದ್ದಾನೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬೋರಯ್ಯನನ್ನು ವಶಕ್ಕೆ ಪಡೆಯಲಾಗಿದೆ.

RELATED ARTICLES

Related Articles

TRENDING ARTICLES