Monday, December 23, 2024

‘ಇಂಡಿಯಾನ ಜೋನ್ಸ್’ ಶೈಲಿಯಲ್ಲಿ ಮೌಳಿ ನೆಕ್ಸ್ಟ್ ವೆಂಚರ್

ಬಾಹುಬಲಿ, ತ್ರಿಬಲ್ ಆರ್ ಬಳಿಕ ರಾಜಮೌಳಿಯ ವಿಷನ್ ಮತ್ತಷ್ಟು ದೊಡ್ಡದಾಗಿದೆ. ಹಾಲಿವುಡ್ ಶೈಲಿಯ ಸಿನಿಮಾಗೆ ಕೈಹಾಕ್ತಿರೋ ಮೌಳಿ, ಪ್ರಿನ್ಸ್ ಮಹೇಶ್ ಬಾಬು ಜೊತೆ ಗ್ಲೋಬ್ ಟ್ರೋಟಿಂಗ್ ಌಕ್ಷನ್ ಅಡ್ವೆಂಚರ್ ಮಾಡಲಿದ್ದಾರೆ. 800 ಕೋಟಿ ಬಜೆಟ್ ಸಿನಿಮಾ ಬಗ್ಗೆ ಸೆನ್ಸೇಷನಲ್ ಡೈರೆಕ್ಟರ್ ಹೇಳಿದ್ದೇನು ಅನ್ನೋದಕ್ಕೆ ಈ ಸ್ಟೋರಿ ಓದಿ.

  • 800 ಕೋಟಿ ಬಿಗ್ ಬಜೆಟ್.. ಹಾಲಿವುಡ್ ಪ್ರೊಡಕ್ಷನ್ ಹೌಸ್
  • ವರ್ಲ್ಡ್​ ಟ್ರಾವೆಲರ್ ಆಗಿ ಪ್ರಿನ್ಸ್ ಮಹೇಶ್ ಬಾಬು ಕಮಾಲ್..!
  • 10 ಭಾಷೆ.. ಆಫ್ರಿಕನ್ ಫಾರೆಸ್ಟ್.. 2023 ಏಪ್ರಿಲ್​ಗೆ ಕಿಕ್​ಸ್ಟಾರ್ಟ್​

ಸಿನಿಮಾಗಾಗಿ ಹೊಸ ಸಾಮ್ರಾಜ್ಯವನ್ನೇ ಸೃಷ್ಟಿಸೋ ಸೆನ್ಸೇಷನಲ್ ಡೈರೆಕ್ಟರ್ ಎಸ್ ಎಸ್ ರಾಜಮೌಳಿ, ಬಾಹುಬಲಿ ಹಾಗೂ ತ್ರಿಬಲ್ ಆರ್ ಬಳಿಕ ಅವುಗಳಿಗೂ ದೊಡ್ಡದಾದ ಮೆಗಾ ಪ್ರಾಜೆಕ್ಟ್​ಗೆ ಕೈ ಹಾಕ್ತಿದ್ದಾರೆ. ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಜೊತೆ ಸಿನಿಮಾರ 29ನೇ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದ ರಾಜಮೌಳಿ, ಇದೀಗ ಅದ್ರ ಎಕ್ಸ್​ಕ್ಲೂಸಿವ್ ಮಾಹಿತಿ ಹೊರಹಾಕಿದ್ದಾರೆ.

ನಮ್ಮ ತಂದೆ ನನ್ನ ಎಲ್ಲಾ ಸಿನಿಮಾಗಳಿಗೆ ಕಥೆ ಬರೆದಂತೆ ಈ ಚಿತ್ರಕ್ಕೂ ಕಥೆ ರಚಿಸುತ್ತಿದ್ದಾರೆ. ನಮ್ಮ ಕೋರ್ ಟೀಂ ಎಲ್ಲಾ ಸೇರಿ ಕೆಲ ತಿಂಗಳಿಂದ ಕಥೆಯನ್ನ ಡೆವೆಲಪ್ ಮಾಡ್ತಿದ್ದೀವಿ. ಇದೊಂದು ಪಕ್ಕಾ ಅಡ್ವೆಂಚರ್ ಸ್ಟೋರಿ. ಇಂಡಿಯಾನ ಜೋನ್ಸ್ ನನ್ನ ಆಲ್​ಟೈಂ ಫೇವರಿಟ್ ಮೂವಿ. ಅದ್ರ ಕಾದಂಬರಿಗಳು ಕೂಡ ನನಗೆ ಇಷ್ಟ. ಹಾಗಾಗಿ ಅವುಗಳಲ್ಲೇ ಆಯ್ದ ಭಾಗವಾಗಿ ಈ ಸಿನಿಮಾ ಮಾಡೋ ಯೋಜನೆಯಲ್ಲಿದ್ದೇವೆ. ಬರವಣಿಗೆಯ ಹಂತದಲ್ಲಿದೆ ಎಂದಿದ್ದಾರೆ.

ಯೆಸ್.. ಮೂಲಗಳ ಪ್ರಕಾರ 2023ರ ಏಪ್ರಿಲ್ ಅಥ್ವಾ ಮೇನಲ್ಲಿ ಸಿನಿಮಾ ಸೆಟ್ಟೇರಲಿದ್ದು, ಗ್ಲೋಬ್ ಟ್ರೋಟಿಂಗ್ ಌಕ್ಷನ್ ಅಡ್ವೆಂಚರ್ ಜಾನರ್​ನಿಂದ ಕೂಡಿರಲಿದೆಯಂತೆ. ಗ್ಲೋಬ್ ಟ್ರೋಟಿಂಗ್ ಅನ್ನೋದನ್ನ ಅರ್ಥವಾಗೋ ಭಾಷೆಯಲ್ಲಿ ಹೇಳೋದಾದ್ರೆ ವರ್ಲ್ಡ್​ ಟ್ರಾವೆಲರ್ ಎಂದರ್ಥ. ಅಲ್ಲಿಗೆ ಪ್ರಿನ್ಸ್ ಮಹೇಶ್ ಬಾಬು ವಿಶ್ವ ಸಂಚಾರಿಯಾಗಿ ಕಾಣಸಿಗಲಿದ್ದಾರೆ.

ಹಾಲಿವುಡ್ ಪ್ರೊಡಕ್ಷನ್ ಹೌಸ್ ಇದಕ್ಕೆ ಬಂಡವಾಳ ಹೂಡಲು ಸಜ್ಜಾಗಿದ್ದು, ಬರೋಬ್ಬರಿ 800 ಕೋಟಿ ಬೃಹತ್ ಬಜೆಟ್​ನಲ್ಲಿ ಸಿನಿಮಾ ತಯಾರಾಗಲಿದೆ. ತೆಲುಗು & ಇಂಗ್ಲಿಷ್​ನಲ್ಲಿ ಒಟ್ಟೊಟ್ಟಿಗೆ ಚಿತ್ರಿಸಲಾಗೋ ಈ ಸಿನಿಮಾ 8 ಭಾಷೆಗಳಿಗೆ ಡಬ್ ಆಗಲಿದೆಯಂತೆ. ಅಲ್ಲಿಗೆ ವಿಶ್ವದಾದ್ಯಂತ ಸುಮಾರು 10 ಭಾಷೆಯಲ್ಲಿ ತೆರೆಗೆ ಬರಲಿದೆ. ಆಫ್ರಿಕಾದ ಕಾಡುಗಳಲ್ಲಿ ಬೃಹತ್ ಸೆಟ್​ಗಳನ್ನ ಹಾಕಿ ಚಿತ್ರಿಸಲಿರೋ ಈ ಸಿನಿಮಾ ರಾಜಮೌಳಿ ಹಾಗೂ ಮಹೇಶ್ ಬಾಬು ಕರಿಯರ್​ನ ಮಹತ್ವದ ಪ್ರಾಜೆಕ್ಟ್ ಆಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES