Wednesday, January 15, 2025

ಓಲಾ ಉಬರ್ ಪ್ರಯಾಣ ದರ ನಿಗದಿಗೆ ಮುಹೂರ್ತ ಫಿಕ್ಸ್..!

ಬೆಂಗಳೂರು : ಓಲಾ ಉಬರ್ ಪ್ರಯಾಣ ದರ ನಿಗದಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಹೀಗಾಗಿ ಹೊಸ ದರ ನಿಗದಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ನಗರದಲ್ಲಿ ಶುಕ್ರವಾರದೊಳಗೆ ಓಲಾ ಉಬರ್​ಗೆ ನಿಗದಿಯಾಗಲಿದೆ ಹೊಸ ದರ ನಿಗದಿಯಾಗಿದ್ದು, ಎರಡು ಕಿಮೀಗೆ 100 ರೂ ಅಗ್ರಿಗೇಟರ್ ಕಂಪನಿಗಳು ಬೇಡಿಕೆ ಇಟ್ಟಿದ್ದಾರೆ. ನವೆಂಬರ್25 ರೊಳಗೆ ದರ ನಿಗದಿಪಡಿಸುತ್ತೇವೆ ಎಂದು ಹೈಕೋರ್ಟ್ಗೆ ತಿಳಿಸಿದ ಸರ್ಕಾರ, ಹೀಗಾಗಿ ಹೊಸ ದರ ನಿಗದಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಇನ್ನು, ನವೆಂಬರ್ 25 ರೊಳಗೆ ಆಪ್ ಆಧಾರಿತ ಓಲಾ ಉಬರ್ ಆಟೋರಿಕ್ಷಾ ನೂತನ ದರ ನಿಗದಿಯಾಗಲಿದ್ದು, ಸದ್ಯ ಕನಿಷ್ಠ ಆಟೋ ದರ ಎರಡು ಕಿಮೀ 30 ರೂ ಇದೆ. ನಂತರ ಪ್ರತಿ ಕಿಮೀ 15 ರೂ ನಿಗದಿ ಮಾಡಲಾಗಿದೆ. ಮೊದಲ ,5 ನಿಮಿಷಕ್ಕೆ ವೇಟಿಂಗ್ ಜಾರ್ಜ್ ಇಲ್ಲ ನಂತರ ಪ್ರತಿ 15 ನಿಮಿಷಕ್ಕೆ5 ರೂ ಇದೆ. ರಾತ್ರಿ ಪ್ರಯಾಣಕ್ಕೆ ಶೇ 50 ದರ ನಿಗದಿಪಡಿಸಲಾಗಿದೆ. ಆದ್ರೆ ಶುಕ್ರವಾರದೊಳಗೆ ನೂತನ ದರ ಜಾರಿಗೆ ಬರಲಿದೆ.

RELATED ARTICLES

Related Articles

TRENDING ARTICLES