Friday, December 27, 2024

ಮುಖ್ಬೀರ್​ಗೆ ಪ್ರಶಂಸೆಗಳ ಸುರಿಮಳೆ.. ಕನ್ನಡಿಗ ದಿಲ್​ಖುಷ್

ಮುಖ್ಬೀರ್.. 2022ರಲ್ಲಿ ಅತಿ ಹೆಚ್ಚು ಮಂದಿಯಿಂದ ವೀಕ್ಷಿಸಲ್ಪಟ್ಟ ವೆಬ್ ಸೀರೀಸ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಮನೋಜ್ ಬಾಜ್ಪಾಯ್​ರ ದಿ ಫ್ಯಾಮಿಲಿಮ್ಯಾನ್​ನ ಕೂಡ ಸರಿಗಟ್ಟಿರೋ ಮುಖ್ಬೀರ್, ಟಾಕ್ ಆಫ್ ದಿ ಟೌನ್ ಆಗಿದೆ. ನಮ್ಮ ಕನ್ನಡಿಗ ಪ್ರಕಾಶ್ ರೈ ಕೂಡ ಇದ್ರ ಭಾಗವಾಗಿರೋದು ಇಂಟರೆಸ್ಟಿಂಗ್.

  • ಶಾಸ್ತ್ರಿ ಕಾಲದ ವಾರ್​​.. ಪಾಕ್​ನಲ್ಲಿ ಇಂಡಿಯನ್ ಸ್ಪೈ ರೋಚಕತೆ
  • ಪ್ರಕಾಶ್ ರೈ ನಟಿಸಿದ ಬೆಸ್ಟ್ ವೆಬ್ ಸೀರೀಸ್ ಈ ‘ಮುಖ್ಬೀರ್’

ಮಲಾಯ್ ಧಾರ್ ಬರೆದ ‘ಮಿಷನ್ ಟು ಕಾಶ್ಮೀರ್: ಌನ್ ಇಂಟೆಲಿಜೆಂಟ್ ಏಜೆಂಟ್ ಇನ್ ಪಾಕಿಸ್ತಾನ್’ ಅನ್ನೋ ಕಾದಂಬರಿ ಆಧಾರಿತ ವೆಬ್ ಸೀರೀಸ್ ಮುಖ್ಬೀರ್. ಯೆಸ್.. ಒಟಿಟಿ ಟ್ರೆಂಡಿಂಗ್ ಆಗಿರೋ ಪ್ರಸ್ತುತ ದಿನಗಳಲ್ಲಿ ಝೀ ಫೈವ್​ನ ಮುಖ್ಬೀರ್ ಸೀರೀಸ್ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಪಾತ್ರಗಳು, ಕಥೆಯ ನಿರೂಪಣೆ, ಮೇಕಿಂಗ್, ಲೊಕೇಷನ್ಸ್ ಹೀಗೆ ಎಲ್ಲವೂ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಅನಿಸಿದೆ.

1965ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದಾಗಿನ ಇಂಡಿಯಾ- ಪಾಕ್ ವಾರ್ ಕುರಿತ ನೈಜ ಘಟನೆ ಆಧಾರಿತ ಕಥಾನಕ ಇದಾಗಿದೆ. ಶಿವಂ ನಾಯರ್ ಹಾಗೂ ಜೈಪ್ರದ ದೇಸಾಯಿ ಜಂಟಿ ನಿರ್ದೇಶನದ ಈ ಸ್ಪೈ ಥ್ರಿಲ್ಲರ್ ಸೀರೀಸ್, ನಮ್ಮ ಇಂಡಿಯನ್ ಸ್ಪೈ ಒಬ್ಬನ ರೋಚಕ ಕಹಾನಿಯನ್ನ ಹೇಳಲಿದೆ. ಸದ್ಯ ಮೊದಲ ಸೀಸನ್​ನಲ್ಲಿ ಎಂಟು ಎಪಿಸೋಡ್​ಗಳು ಬಿಡುಗಡೆ ಆಗಿದ್ದು, ನೋಡುಗರಿಗೆ ಸಖತ್ ಥ್ರಿಲ್ಲಿಂಗ್ ಕೊಡ್ತಿವೆ. ದಿ ಫ್ಯಾಮಿಲಿಮ್ಯಾನ್ ಸೀರೀಸ್​ನ ಕೂಡ ಮೀರಿಸಿ, ಈ ವರ್ಷದಲ್ಲಿ ಅತಿಹೆಚ್ಚು ಮಂದಿ ವೀಕ್ಷಿಸಿದ ವೆಬ್ ಸೀರೀಸ್ ಅನ್ನೋ ಗರಿಮೆಗೆ ಪಾತ್ರವಾಗಿದೆ.

ಹರ್ಫಾನ್ ಅನ್ನೋ ಇಂಡಿಯನ್ ಸ್ಪೈ ರೋಲ್​ನಲ್ಲಿ ಝೈನ್ ಖಾನ್ ಕಾಣಸಿಗಲಿದ್ದು, ಅವ್ರನ್ನ ಪಾಕಿಸ್ತಾನಕ್ಕೆ ಕಳುಹಿಸೋ ಜವಾಬ್ದಾರಿ ಹೊತ್ತ ರಾ ಆಫೀಸರ್ ಎಸ್​ಕೆಎಸ್ ಮೂರ್ತಿ ಪಾತ್ರಕ್ಕೆ ನಮ್ಮ ಹೆಮ್ಮೆಯ ಕನ್ನಡಿಗ ಪ್ರಕಾಶ್ ರೈ ಬಣ್ಣ ಹಚ್ಚಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಅವ್ರ ಛಾಯೆ ಕೂಡ ಇದರಲ್ಲಿ ಕಾಣಸಿಗಲಿದ್ದು, ವೆಬ್ ಸೀರೀಸ್​ನಲ್ಲಿ ಅಂದಿನ ಒರಿಜಿನಲ್ ಫೂಟೇಜ್ ಬಳಸಿರೋದು ವಿಶೇಷ.

ನನ್ನೊಟ್ಟಿಗೆ ನಟಿಸೋಕೆ ಕೆಲ ಕಲಾವಿದರು ಭಯ ಪಡ್ತಿದ್ದಾರೆ ಎಂದಿದ್ರು ರೈ. ಎಡ, ಬಲ ಎಲ್ಲವನ್ನೂ ಬದಿಗಿಟ್ಟು ನ್ಯಾಷನಲ್ ಸೆಕ್ಯೂರಿಟಿಗಾಗಿ ಮಾಡಿರೋ ಈ ಮುಖ್ಬೀರ್​ ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ಸದ್ದು ಮಾಡ್ತಿದೆ. ಅವ್ರ ನಟನಾ ಗಮ್ಮತ್ತು ಎಂಥದ್ದು ಅನ್ನೋದನ್ನ ಈಗಾಗ್ಲೇ ಇಂಡಿಯನ್ಸ್ ಅರಿತಿದ್ರು. ಇದೀಗ ಈ ಸ್ಪೈ ಥ್ರಿಲ್ಲರ್​ನಿಂದ ಅವ್ರ ಸ್ಟಾರ್​ಡಮ್ ಮತ್ತಷ್ಟು ದೊಡ್ಡದಾಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES