ಮಂಗಳೂರು : ಒಂದು ಕುಕ್ಕರ್ ಬಾಂಬ್ ಸ್ಪೋಟಗೊಂಡಿದ್ದು, ಉಗ್ರರು ತಂದ ಇನ್ನೊಂದು ಕುಕ್ಕರ್ ಬಾಂಬ್ ಎಲ್ಲಿ ಹೋಯ್ತು ಎಂಬ ಶಂಕೆ ವ್ಯಕ್ತವಾಗ್ತಿದೆ.
ಸ್ಫೋಟಕ್ಕೂ ಮುನ್ನ ಶಾರೀಕ್ ಜೊತೆ ಇನ್ನೊಬ್ಬ ವ್ಯಕ್ತಿ ಬಂದಿದ್ದನು. ಶಾರೀಕ್ನಂತೆಯೇ ಈತ ತುಂಬಿದ ಬ್ಯಾಗ್ ಧರಿಸಿ ಬಂದಿದ್ದನು. ಇಬ್ಬರು ಮೈಸೂರು-ಮಂಗಳೂರು ಬಸ್ಸಿನಿಂದ ಬಂದು ಪಡೀಲಿನಲ್ಲಿ ಇಳಿದ್ರು. ನಾಗುರಿಯ ವೈನ್ಶಾಪ್ನಿಂದ ಶಾರೀಕ್ ಬಾಟಲಿ ಪಡೆದಿದ್ದ. ಶಾರಿಕ್ ವೈನ್ಶಾಪ್ನಿಂದ ಹೊರ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯದಲ್ಲಿ ಆತ ಕೆಂಪು ಶರ್ಟ್ ಹಾಕಿದ್ದನು. ಆತನ ಜೊತೆಗೆ ಮತ್ತೋರ್ವ ವ್ಯಕ್ತಿ ಇದ್ದು, ಜೊತೆಗಿದ್ದ ವ್ಯಕ್ತಿ ಎಲ್ಲಿಗೆ ಹೋದ ಎಂಬುದು ತಿಳಿದು ಬಂದಿಲ್ಲ.
ಪೊಲೀಸರು ಶಾರಿಕ್ ಓಡಾಡಿದ್ದ ಕಡೆಯೆಲ್ಲಿನ CCTVಯನ್ನು ಪರಿಶೀಲನೆ ನಡೆಸಿ, ಮತ್ತೋರ್ವನಿಗಾಗಿ ತೀವ್ರ ಹುಡುಕಾಟ ನಡೆಸಿದೆ. ಇಬ್ಬರು ಸೇರಿ ಮಂಗಳೂರಿನ ಎರಡು ಕಡೆ ಸ್ಫೋಟಕ್ಕೆ ಸಂಚು ರೂಪಿಸಿದ್ರಾ ಎಂಬ ಅನುಮಾನ ದಟ್ಟವಾಗಿದೆ. ಆ ಬ್ಯಾಗ್ ಸಮೇತ ಅವನು ಎಲ್ಲಿಗೆ ತೆರಳಿದ. ಆ ಬ್ಯಾಗ್ನಲ್ಲಿ ಮತ್ತೊಂದು ಕುಕ್ಕರ್ ಬಾಂಬ್ ಇತ್ತಾ ಎಂಬ ಡೌಟ್ ಶುರುವಾಗಿದೆ. ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಆಗ್ತಿದ್ದಂತೆ ಮತ್ತೊಂದು ಪ್ಲ್ಯಾನ್ ವಿಫಲವಾದಂತೆ ತೋರ್ತಿದೆ. ನವೆಂಬರ್ 19ರಂದು ಮಂಗಳೂರಲ್ಲಿ ಮಾರಣಹೋಮ ನಡೆಸಲು ಪ್ಲ್ಯಾನ್ ನಡೆದಿತ್ತಾ ಎಂಬ ಅನುಮಾನ ಮೂಡಿದ್ದು, ಪಂಪ್ವೆಲ್ ಸರ್ಕಲ್ ಸಾವಿರಾರು ಜನ ಸೇರುವ ಪ್ರದೇಶವಾಗಿದ್ದು, ಜನನಿಬಿಡ ಪ್ರದೇಶದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಲು ಸಂಚು ರೂಪಿಸಲಾಗಿತ್ತ ಎಂಬ ಅನುಮಾನ ಶುರುವಾಗಿದೆ.