ಕೋಲಾರ : ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಮಹಿಳೆಯರನ್ನ ಡಿಸಿಎಂ ಮಾಡಲು ಸಿದ್ದವಿದ್ದೇವೆ ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಅವರು, ಮಹಿಳೆಯರ ಪ್ರಾಮಾಣಿಕ ಅಭಿವೃದ್ಧಿಗೆ ಜೆಡಿಎಸ್ ಬದ್ದವಾಗಿದೆ. ಮಹಿಳೆ ಮತ್ತು ದಲಿತ ವರ್ಗಗಳನ್ನು ಸಮರ್ಥವಾಗಿ ಪ್ರತಿನಿಧಿಸಲು ಡಿಸಿಎಂ ಹುದ್ದೆ ಅವಕಾಶ ನೀಡುತ್ತೇವೆ. ಬಂದರೇ ಮುಸ್ಲಿಂ ಸಮುದಾಯದವರು ಸಿಎಂ ಆಗಬಹುದು. ಅವರು ಯಾಕೆ ಆಗಬಾರದು? ನನಗೆ ಐದು ವರ್ಷಗಳ ಆಡಳಿತ ಸಿಕ್ಕರೆ ಇನ್ಮುಂದೆ ಜನರು ಹಣವನ್ನು ಪಡೆಯಬಾರದು ಎಂದರು.
ಈ ನಿರ್ಧಾರ ಈ ರೀತಿಯ ಜನರ ಅಭಿವೃದ್ಧಿ ಮಾಡುತ್ತೇನೆ ಈ ಸಲ ಜೆಡಿಎಸ್ ಬಹುಮತ ಸರ್ಕಾರ ರಚಿಸಿದಲ್ಲಿ ಈ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಇನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಒಬ್ರು ಮೂರು ತಲೆಮಾರಿಗಾಗುವಷ್ಟು ದುಡ್ಡು ಮಾಡಿದ್ರು ಅಂತ ಹೇಳಿದ್ರು. ಈ ಹಣ ಯಾವುದು ಅಂದ್ರೆ ಕೆಸಿ ವ್ಯಾಲಿ, ಎತ್ತಿನಹೊಳೆ ಹಣ . ಈ ಮಾತು ಹೇಳಿದಾಗ ಕೂದಲು ಸ್ವಲ್ಲ ಇತ್ತು. ಇದೀಗ ಅದು ಉದುರಿಹೋಗಿದೆ ಎಂದರು.