Monday, December 23, 2024

ಸಿದ್ದರಾಮಯ್ಯ ಆಡಳಿತ ಸ್ವಯಂ ಪ್ರೇರಿತ ಅಪರಾಧ : ಸಿ.ಎಂ ಇಬ್ರಾಹಿಂ

ಹುಬ್ಬಳ್ಳಿ : ಮಾಜಿ ಸಿಎಂ ಸಿದ್ದರಾಮಯ್ಯನವರು 4 ವರ್ಷ ಬಜೆಟ್ ಮಂಡಿಸಿದ ಸಂದರ್ಭ ನಾನು ಅವರ ಹಿನ್ನೆಲೆ ಗಾಯಕನಾಗಿದ್ದೆ. ಅವರು ಮಾತ್ರ ಮುಂದೆ ಬಾಯಿ ಅಲ್ಲಾಡಿಸುತ್ತಿದ್ದರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಇಬ್ರಾಹಿಂ, ಸಿದ್ದರಾಮಯ್ಯ ಅವರು ಆಡಳಿತ ಮಾಡಿದ್ದು ಸ್ವಯಂ ಪ್ರೇರಿತ ಅಪರಾಧ. ಹೀಗಾಗಿ ಕ್ಷೇತ್ರ ಹುಡುಕಾಟ ಮಾಡುತ್ತಿದ್ದಾರೆ. ಸಿಎಂ ಇದ್ದವರು 40 ಸಾವಿರ ಮತಗಳ ಅಂತರದಲ್ಲಿ ಸೋತರು. ಅವರನ್ನು ಬಾದಾಮಿಗೆ ಕರೆದುಕೊಂಡು ಹೋಗಿದ್ದೇ ನಾನು ಎಂದು ತಿಳಿಸಿದರು.

ಇದೇ ವೇಳೆ ಪಂಚರತ್ನ ಯಾತ್ರೆ ಬಗ್ಗೆ ತಿಳಿಸಿದ ಇಬ್ರಾಹಿಂ, ಆರೋಗ್ಯ, ಶಿಕ್ಷಣ, ನೀರಾವರಿಗಾಗಿ ಪಂಚರತ್ನ ಯಾತ್ರೆ ನಡೆಯುತ್ತಿದೆ. ಯಾತ್ರೆ ಹಳೇ ಮೈಸೂರು ಭಾಗದಲ್ಲಿ ಜೋರಾಗಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ 5 ವರ್ಷಗಳಲ್ಲಿ ಏನು ಮಾಡುತ್ತೇವೆ ಎಂಬುದನ್ನು ತಿಳಿಸುವುದೇ ಕಾರ್ಯಕ್ರಮದ ಉದ್ದೇಶ. ಒಂದು ವೇಳೆ 5 ವರ್ಷಗಳಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸದೇ ಹೋದರೆ 2028 ರಲ್ಲಿ ನಾವು ನಿಮ್ಮಲ್ಲಿ ಮತ ಕೇಳಲು ಬರುವುದಿಲ್ಲ ಎಂದು ಹೇಳಿಕೆ ನೀಡಿದರು. ನಮ್ಮ ಪ್ರಣಾಳಿಕೆಯ ಎಲ್ಲಾ ಯೋಜನೆಗಳಿಗೆ 5 ವರ್ಷಗಳಲ್ಲಿ 5 ಲಕ್ಷ ಕೋಟಿ ರೂ. ಬೇಕಾಗುತ್ತದೆ. ಜನರು ಈ ಬಾರಿ ನಮಗೆ ಆಶೀರ್ವಾದ ಮಾಡಿದರೆ ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೆವೆ ಎಂದರು.

RELATED ARTICLES

Related Articles

TRENDING ARTICLES