Tuesday, May 13, 2025

ಕುದಿಯುವ ಎಣ್ಣೆಗೆ ಕೈ ಹಾಕಿದ ಅರ್ಚಕ

ಚಾಮರಾಜನಗರ : ಜಿಲ್ಲೆಯಲ್ಲಿ ಒಂದಲ್ಲ ಒಂದು ವಿಶೇಷ ನಡೆಯುತ್ತಲ್ಲೇ ಇರುತ್ತದೆ. ಹನೂರು ತಾಲೂಕಿನ ಲೊಕ್ಕನಹಳ್ಳಿಯಲ್ಲಿ ಸಿದ್ದಪ್ಪಾಜಿ ಜಾತ್ರೆಯಲ್ಲಿ ಈ ಅಚ್ಚರಿ ನಡೆದಿದೆ.

ದೇಗುಲದ ಅರ್ಚಕ ಸಿದ್ದರಾಜು ಎನ್ನುವವರು, ಸಾವಿರಾರು ಭಕ್ತರ ಸಮ್ಮುಖದಲ್ಲಿ ಕುದಿಯುವ ಎಣ್ಣೆಗೆ ಕೈ ಹಾಕಿ ಕಜ್ಜಾಯ ತೆಗೆದಿದ್ದಾರೆ. ದೇವಾಲಯದಲ್ಲಿ ವಾದ್ಯ ಮೇಳದೊಂದಿಗೆ ಕಂಡಾಯ ಹೊತ್ತ ಅರ್ಚಕ ಸಿದ್ದರಾಜು, ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಕುಣಿದರು. ಬಳಿಕ ಕುದಿಯುತ್ತಿದ್ದ ಎಣ್ಣೆಗೆ ಕೈ ಹಾಕಿ 3 ಬಾರಿ ಕಜ್ಜಾಯವನ್ನು ಎತ್ತಿದ್ಧಾರೆ. ಇನ್ನು ಅರ್ಚಕ ಕುದಿಯುವ ಎಣ್ಣೆಯಲ್ಲಿ ಕೈ ಹಾಕಿದರೂ, ಸುಡದೇ ಇರುವುದು ಅಚ್ಚರಿಯಾಗಿದೆ.

RELATED ARTICLES

Related Articles

TRENDING ARTICLES