Monday, December 23, 2024

ಅಬ್ಬಬ್ಬಾ.. ರೇಮೊ ಟ್ರೈಲರ್ ಸಖತ್ ಕ್ರೇಜಿ, ಕಲರ್​ಫುಲ್

ಸಿನಿಮಾ ಮತ್ತು ರಾಜಕೀಯ ಗಣ್ಯರಿಂದ ರೇಮೊ ಪ್ರೀ ರಿಲೀಸ್ ಇವೆಂಟ್ ರಂಗೇರಿತು. ಪ್ರೇಮಲೋಕದ ರಣಧೀರ ಕ್ರೇಜಿಸ್ಟಾರ್ ರವಿಚಂದ್ರನ್ ಅವ್ರೇ ಬಂದು ಲವ್ ಬರ್ಡ್ಸ್​ಗೆ ಶುಭ ಹಾರೈಸಿದ್ದು ಇಂಟರೆಸ್ಟಿಂಗ್​. ಇಷ್ಟಕ್ಕೂ ಡಿಕೆಶಿ ಏನಂದ್ರು..? ಮಿಲ್ಕಿಬಾಯ್ ಇಶಾನ್, ಗ್ಲಾಮರ್ ಡಾಲ್ ಆಶಿಕಾ ಕಥೆ ಏನು ಅನ್ನೋದ್ರ ಡಿಟೈಲ್ಡ್ ರಿಪೋರ್ಟ್​ ನಿಮಗಾಗಿ ಕಾಯ್ತಿದೆ. ನೀವೇ ಓದಿ.

  • ಇಶಾನ್- ಆಶಿಕಾ ಲವ್​​ಗೆ ರವಿಮಾಮ & ಡಿಕೆಶಿ ಮೆಚ್ಚುಗೆ
  • ಶುಕ್ರವಾರ ಬ್ಯೂಟಿಫುಲ್ ದೃಶ್ಯಕಾವ್ಯ ರೇಮೊ ಅನಾವರಣ
  • ಕ್ವಾಲಿಟಿಗೆ c/o ಅಡ್ರೆಸ್ ಆಗಲಿದೆ ಒಡೆಯರ್ ರೇಮೊ..!

ರೇಮೊ.. ರೇವಂತ್ ಹಾಗೂ ಮೋಹನಾಳ ಪ್ರೇಮ್ ಕಹಾನಿ. ಬರೀ ಪ್ರೇಮ ದೃಶ್ಯಕಾವ್ಯ ಅಲ್ಲ, ಮ್ಯೂಸಿಕಲ್ ಲವ್ ಸ್ಟೋರಿ. ಯೆಸ್.. ಬಹು ನಿರೀಕ್ಷಿತ ರೇಮೊ ಇದೇ ನವೆಂಬರ್ 25, ಅಂದ್ರೆ ಶುಕ್ರವಾರ ಗ್ರ್ಯಾಂಡ್ ಆಗಿ ಪ್ರೇಕ್ಷಕರ ಮುಂದೆ ಬರ್ತಿದೆ. ಸ್ಯಾಂಡಲ್​ವುಡ್​ನಿಂದ ಮತ್ತೊಬ್ಬ ಪ್ರತಿಭಾನ್ವಿತ ಸ್ಟಾರ್ ಚಿತ್ರರಂಗಕ್ಕೆ ಕಾಲಿಡ್ತಿದ್ದಾರೆ. ಅವ್ರೇ ಇಶಾನ್.

ನೋಡೋಕೆ ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ ರೀತಿ ಇರೋ ಇಶಾನ್, ರಾಕ್​ಸ್ಟಾರ್ ಮ್ಯೂಸಿಶಿಯನ್ ಆಗಿ ಧೂಳೆಬ್ಬಿಸೋ ಮನ್ಸೂಚನೆ ನೀಡಿದ್ದಾರೆ. ಕಾರಣ ಟೀಸರ್ ಹಾಗೂ ಟ್ರೈಲರ್​ನಲ್ಲಿರೋ ಗಮ್ಮತ್ತು. ಸಖತ್ ರಿಚ್ ಅಂಡ್ ಲ್ಯಾವಿಶ್ ಆಗಿ ಮೂಡಿಬಂದಿರೋ ಈ ಸಿನಿಮಾದಲ್ಲಿ ನಾಯಕನಟಿ ಆಶಿಕಾ ಗ್ಲಾಮರ್ ಕೂಡ ಪ್ರಮುಖ ಪಾತ್ರ ವಹಿಸಿದೆ.

ಸಾಲು ಸಾಲು ಸಿನಿಮಾಗಳಿಂದ ಮಿಂಚ್ತಿರೋ ಆಶಿಕಾ ರಂಗನಾಥ್, ಕ್ಲಾಸಿಕಲ್ ಸಿಂಗರ್ ಆಗಿ ನೋಡುಗರ ಮನ ಗೆಲ್ಲಲಿದ್ದಾರೆ. ಅಂದಹಾಗೆ ಈ ಸಿನಿಮಾಗೆ ಫೇಮಸ್ ಡೈರೆಕ್ಟರ್ ಪವನ್ ಒಡೆಯರ್ ಆ್ಯಕ್ಷನ್ ಕಟ್ ಹೇಳಿದ್ದು, ಪ್ಯಾಷನೇಟ್ ಪ್ರೊಡ್ಯೂಸರ್ ಸಿಆರ್ ಮನೋಹರ್ ನಿರ್ಮಿಸಿದ್ದಾರೆ.

ರಿಲೀಸ್​ಗೂ ಮುನ್ನ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಪ್ರೀ ರಿಲೀಸ್ ಇವೆಂಟ್ ಸಖತ್ ಕಲರ್​ಫುಲ್ ಅನಿಸಿತು. ಸಿನಿಮಾ ಹಾಗೂ ರಾಜಕಾರಣಿಗಳಿಂದ ರಂಗೇರಿತು. ಒಂದ್ಕಡೆ ಕ್ರೇಜಿಸ್ಟಾರ್ ರವಿಚಂದ್ರನ್ ಕ್ರೇಜ್, ಮತ್ತೊಂದ್ಕಡೆ ಡಿಕೆಶಿ ಪವರ್. ಇಬ್ಬರಿಂದ ಚಿತ್ರತಂಡಕ್ಕೆ ಆನೆಬಲ ಬಂದಂತಾಯ್ತು.

ಸಿಆರ್ ಮನೋಹರ್, ಇಶಾನ್ ಹಾಗೂ ಆಶಿಕಾ ಕುರಿತು ಹಾಡಿ ಹೊಗಳಿದ ಕ್ರೇಜಿಸ್ಟಾರ್, ಈ ಮ್ಯೂಸಿಕಲ್ ಲವ್ ಸ್ಟೋರಿ ದೊಡ್ಡ ಹಿಟ್ ಆಗುತ್ತೆ ಅಂತ ಭವಿಷ್ಯ ನುಡಿದರು. ಅಷ್ಟೇ ಅಲ್ಲ, ಆಶಿಕಾ ವೈರಲ್ ವಿಡಿಯೋ ಬಗ್ಗೆ ಕೂಡ ತಲೆ ಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ ಅಂತ ಆಕೆಯನ್ನ ಗುಣಗಾನ ಮಾಡಿದದ್ದು ವಿಶೇಷ.

ರಾಜಕಾರಣಿ ಆಗೋಕೂ ಮುನ್ನ ನಾನು ಚಿತ್ರರಂಗದವನು ಎಂದ ಡಿಕೆ ಶಿವಕುಮಾರ್, ಫಿಲ್ಮ್ ಚೇಂಬರ್ ಜೊತೆಗಿನ ನಂಟು ಬಿಚ್ಚಿಟ್ಟರು. ಅಷ್ಟೇ ಅಲ್ಲ ಸಿಆರ್ ಮನೋಹರ್ ಗೆಳೆತನ ಹಾಗೂ ಚಿತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ರು. ಯುವ ಪ್ರತಿಭೆ ಇಶಾನ್​ ಭವಿಷ್ಯದ ಸೂಪರ್ ಸ್ಟಾರ್ ಆಗಲಿದ್ದಾರೆ ಅಂತ ಬೆನ್ನು ತಟ್ಟಿದರು.

ಸಿನಿಮಾಟೋಗ್ರಫರ್ ವೈದಿ ಹಾಗೂ ಕೊರಿಯೋಗ್ರಫರ್ ಇಮ್ರಾಜ್ ಸರ್ದಾರಿಯಾ ಕೈಚಳಕ ರೇಮೊದಲ್ಲಿ ಎದ್ದು ಕಾಣ್ತಿದ್ದು, ವಿಶ್ಯುವಲ್ ಟ್ರೀಟ್ ಸಿಗೋದು ಪಕ್ಕಾ ಆಗಿದೆ. ಡಿಫರೆಂಟ್ ಡ್ಯಾನಿ ಕಂಪೋಸ್ ಮಾಡಿರೋ ಫೈಟ್ಸ್ ಕೂಡ ಮಜಾ ಕೊಡಲಿದ್ದು, ವೇದಿಕೆ ಹಂಚಿಕೊಂಡ ಅವ್ರು ಒಂದಷ್ಟು ಮೇಕಿಂಗ್ ರೋಚಕತೆ ಬಿಚ್ಚಿಟ್ಟರು.

ಇನ್ನು ಬಹಳ ದಿನಗಳ ನಂತ್ರ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ಸಿಆರ್ ಮನೋಹರ್, ತಮ್ಮ ರಾಜಕೀಯ ಜಂಜಾಟಗಳ ನಡುವೆ ಸಿನಿಮಾ ನಿರ್ಮಾಣ ಮಾಡಿದ್ದರ ಕುರಿತು ಮಾತನಾಡಿದ್ರು.

ಗೆಳೆಯರ ಸಿನಿಮಾನ ಪ್ರೋತ್ಸಾಹಿಸೋ ನಿಟ್ಟಿನಲ್ಲಿ ರಾಜಕಾರಣಿ ಚೆಲುವರಾಯಸ್ವಾಮಿ ಹಾಗೂ ಅವ್ರ ಪುತ್ರ ಸಚಿನ್ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು. ರೇಮೊ ತಂಡಕ್ಕೆ ಶುಭ ಕೋರಿ, ಬಾಕ್ಸ್ ಆಫೀಸ್ ಹಿಟ್ ಆಗಲಿ ಎಂದರು.

ಇನ್ನು ಪವನ್ ಒಡೆಯರ್, ತಮ್ಮ ಪತ್ನಿ ಅಪೇಕ್ಷಾ ಅವ್ರೇ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದರ ಬಗ್ಗೆ ಹೇಳಿದ್ರು. ಹಂತ ಹಂತವಾಗಿ ದೊಡ್ಡ ಮಟ್ಟಕ್ಕೆ ಬೆಳೆದಿರೋ ಒಡೆಯರ್, ಒಂದೊಳ್ಳೆ ಸಿನಿಮಾ ಮಾಡಿರೋ ಭರವಸೆ ನೀಡಿದ್ರು.

ಒಟ್ಟಾರೆ ಹೊಡಿ, ಬಡಿ, ಕಡಿ ಸಿನಿಮಾಗಳ ಮಧ್ಯೆ ಫೀಲ್ ಗುಡ್ ಲವ್ ಸ್ಟೋರಿ ಬರ್ತಿದೆ. ಇದು ಯೂತ್ಸ್​ಗೆ ಮಸ್ತ್ ಮನರಂಜನೆ ಕೊಡೋ ಲಕ್ಷಣ ತೋರಿದೆ. ಅರ್ಜುನ್ ಜನ್ಯಾ ಆಲ್ಬಂ ಕೂಡ ಇಂಪ್ರೆಸ್ಸೀವ್ ಆಗಿದ್ದು, ಒಂದಕ್ಕಿಂತ ಮತ್ತೊಂದು ಎಲ್ಲಾ ಹಾಡುಗಳು ಕಣ್ಮನ ತಣಿಸುತ್ತಿವೆ. ಇದು ಕ್ವಾಲಿಟಿ ಪ್ರೊಡಕ್ಷನ್ ಜೊತೆ ಎಂಟರ್​ಟೈನಿಂಗ್ ಎಲಿಮೆಂಟ್ಸ್​​ನಿಂದ ಬೆಳ್ಳಿ ಪರದೆ ಬೆಳಗಲಿದ್ದು, ಬಾಕ್ಸ್ ಆಫೀಸ್​ನಲ್ಲಿ ಎಷ್ಟು ಸದ್ದು ಮಾಡುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES