Wednesday, January 22, 2025

PFI ಬ್ಯಾನ್ ಆದ್ರೂ ಬಾಲ ಬಿಚ್ಚೋದು ಕಡಿಮೆಯಾಗಿಲ್ಲ‌ : ಪ್ರಮೋದ್ ಮುತಾಲಿಕ್‌

ಬೆಂಗಳೂರು : ಮಾಜಿ ಕೇಂದ್ರ ಸಚಿವ ದಿ.ಅನಂತಕುಮಾರ್ ಪ್ರತಿಮೆ ನಿರ್ಮಾಣಕ್ಕೆ ಶ್ರೀರಾಮಸೇನೆ ವಿರೋಧ ವ್ಯಕ್ತಪಡಿಸಿದೆ. ಆದಿಶಂಕರಾಚಾರ್ಯ ಮಠ ವ್ಯಾಪ್ತಿಯಲ್ಲಿ ಪ್ರತಿಮೆ ಪ್ರತಿಷ್ಠಾನೆಗೆ ಬಿಬಿಎಂಪಿ ಸಿದ್ಧತೆ ಮಾಡಿಕೊಳ್ತಿದೆ.

ಲಾಲ್ ಬಾಗ್ ವೆಸ್ಟ್​ಗೇಟ್ ಮುಂದೆ ಮೂರ್ತಿ ಪ್ರತಿಷ್ಟಾಪನೆಗೆ ತಯಾರಿ ನಡೆದಿದೆ. ಈಗಾಗಲೇ 7 ಪಿಲ್ಲರ್ ಅಳವಡಿಸಲಾಗಿದೆ. ಆದ್ರೆ ಶಂಕರಾಚಾರ್ಯರ ಮಠದ ಆಸ್ತಿಯ ಜಾಗದಲ್ಲಿ ಅನಂತಕುಮಾರ್ ಮೂರ್ತಿ ಪ್ರತಿಷ್ಠಾಪನೆಗೆ ಭಾರೀ ವಿರೋಧ ವ್ಯಕ್ತವಾಗ್ತಿದೆ. ಶಂಕರಾಚಾರ್ಯರ ಮಠದ ಮುಂದೆ ಅದ್ಹೇಗೆ ಪ್ರತಿಷ್ಟಾಪನೆ ಮಾಡ್ತೀರಿ? ಅನಂತ್ ಕುಮಾರ್ ಅದೇನು ಸಾಧನೆ ಮಾಡಿದ್ದಾರೆ? ಅವರೇನು ಸ್ವಾತಂತ್ರ್ಯ ಹೋರಾಟಗಾರರಾ? ಈ ಜಾಗ ನಮ್ಮದು ಅಂತ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ ಹೇಳಿದ್ದಾರೆ.

ಇದೇ ವೇಳೆ ಮಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ ಕುರಿತು ಪ್ರತಿಕ್ರಿಯಿಸಿದ ಮುತಾಲಿಕ್, ಪಿಎಫ್​​ಐ ನಿಷೇಧವಾದ್ರೂ ಅವರ ಕುಕೃತ್ಯಕ್ಕೆ ಬ್ರೇಕ್ ಬಿದ್ದಿಲ್ಲ. ಸಿಎಂ ಕಾರ್ಯಕ್ರಮ ಅಥವಾ RSS ನ ಮಕ್ಕಳ ಕಾರ್ಯಕ್ರಮ ಗುರಿಯಿತ್ತೋ ಅನ್ನೋದನ್ನು ತನಿಖೆ ಮಾಡಲಿ ಎಂದು ಆಗ್ರಹಿಸಿದರು. ಗೃಹ ಮಂತ್ರಿಗಳೇ ತೀರ್ಥಹಳ್ಳಿಯೇ ಉಗ್ರರ ಸೆಂಟರ್ ಆಗಿದೆ. ನಿಮ್ಮ ಮನೆಯಂಗಳ ಉಗ್ರರ ಅಡಗು ತಾಣವಾಗಿದೆ. ಹಳೆಯ ಕೇಸ್ ಎಲ್ಲವೂ ರೀ ಓಪನ್ ಮಾಡಿ. ಹಗುರವಾಗಿ ಈ ಪ್ರಕರಣವನ್ನು ತೆಗೆದುಕೊಳ್ಳಬೇಡಿ ಎಂದರು.

RELATED ARTICLES

Related Articles

TRENDING ARTICLES