Wednesday, January 22, 2025

ದೇಶದಲ್ಲಿ ಕಾಂಗ್ರೆಸ್ ನಶಿಸಿ ಹೋಗ್ತಿದೆ : ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ದೇಶದಲ್ಲಿ ಕಾಂಗ್ರೆಸ್ ನಶಿಸಿ ಹೋಗ್ತಿದೆ. ಕಾಂಗ್ರೆಸ್ ಮುಳಗೋ ಹಡಗು, ಅವರು ಅಸ್ತಿತ್ವ ಕಳೆದುಕೊಳ್ತೀದಾರೆ. ಅದಕ್ಕೊಂದು ಕಾರಣ ಹುಡಕತೀದಾರೆ. ಹೀಗಾಗಿ ಕಾಂಗ್ರೆಸ್ ಬಿಜೆಪಿ ಮೇಲೆ ಆರೋಪ ಮಾಡ್ತೀದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲತ್ತೆ. ಯಾಕೆ ಸೋಲ್ತೀವಿ ಅನ್ನೋ ಕಾರಣಕ್ಕೆ ನೆಪ‌ ಹುಡಕತ್ತೆ. ‌ಮತದಾರರ ಮಾಹಿತಿ ಸಂಗ್ರಹ ವಿಚಾರವಾಗಿ ಕಾಂಗ್ರೆಸ್ ಆರೋಪದಲ್ಲಿ ಎಳ್ಳಷ್ಟು ಹುರಳಿಲ್ಲ ಎಂದರು. ಇನ್ನೂ ಈ ವೇಳೆ ಮಂಗಳೂರಿನಲ್ಲಿ ಆಟೋದಲ್ಲಿ ಸ್ಪೋಟ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಪ್ರಕರಣ ಗಂಭೀರವಾಗಿ ತಗೆದುಕೊಂಡಿದೆ. NIA ಅಧಿಕಾರಿಗಳು ಬಂದಿದ್ದು, ಅದರ ನಂಟು ಎಲ್ಲಿದೆ ಅನ್ನೋದು ಪತ್ತೆ ಹಚ್ತಾರೆ. ಬಹಳ ಸೀರಿಯಸ್ ಆಗಿ ತಗೆದುಕೊಂಡಿದ್ದಾರೆ.

ಇದರ ಹಿಂದೆ ಯಾರಿದ್ದಾರೆ ಅನ್ನೋದ ಹೊರಬರಲಿದೆ. ತನಿಖೆ ಬಳಿಕ ಯಾರೂ ಏನೂ ಉದ್ದೇಶ ಹೊರಬರಲಿದೆ. ಸಿದ್ದರಾಮಯ್ಯ, ಹೋಮ್ ಮಿನಿಸ್ಟರ್ ಒಳ್ಳೆ ಕೆಲಸ ಮಾಡ್ತಾರೆ ಅಂತಾ ಹೇಳಲ್ಲ. ಅವರು ವೈಫಲ್ಯ ಅಂತಾನೆ ಹೇಳ್ತಾರೆ,ಆದರೆ ಮೋದಿ ಪ್ರಧಾನಿ ಆದ ಮೇಲೆ ದೇಶದಲ್ಲಿ ಶಾಂತಿ ನೆಲಸಿದೆ. ಕಾಂಗ್ರೆಸ್ ನವರು ಟೀಕೆ ಮಾಡಬೇಕು ಅಂತಾ ಮಾಡ್ತಾರೆ. ಬೇರೆ ಉದ್ದೇಶ ಇಲ್ಲ ಎಂದರು.

RELATED ARTICLES

Related Articles

TRENDING ARTICLES