ಎಲ್ಲೆಲ್ಲೂ ಧರೆಗುರುಳಿರುವ ಮನೆಗಳು ಮನೆಗಳ ಮುಂದೆ ಮಕ್ಕಳನ್ನು ತಬ್ಬಿಕೊಂಡು ಕಣ್ಣೀರಿಡುತ್ತಿರುವ ಪೋಷಕರು. ನೆಲೆ ಇಲ್ಲದೆ ಕಂಗಾಲಾಗಿರುವ ಸ್ಥಳೀಯರು. ಇದು, ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಲ್ಲಿ ಸಂಭವಿಸಿದ ಭೂಕಂಪದ ಭೀಕರ ದೃಶ್ಯ. ಭೂಗರ್ಭ ಸಮೀಕ್ಷಾ ಸಂಸ್ಥೆ ಪ್ರಕರಾ 5.6ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಿಂದ 100 ಕಿ. ಮೀ. ದೂರದಲ್ಲಿ ಇರುವ ಸಿಯನ್ಜುರ್ ಎಂಬ ಪ್ರದೇಶದಲ್ಲಿ ಭೂಕಂಪದ ಕೇಂದ್ರ ಪತ್ತೆಯಾಗಿದೆ.
ಭೂಕಂಪದಿಂದ ಮನೆಗಳು ಅಲುಗಾಡಿದ್ವು, ಭಯಭೀತರಾಗಿ ಜನ ಓಡೋಡಿ ಆಚೆಗೆ ಬಂದಿದ್ರು. ಕಂಪನದ ತೀವ್ರತೆಗೆ ಮನೆಗಳು ನೆಲಕ್ಕುರುಳಿದ್ವು. ಮನೆಗಳಲ್ಲಿದ್ದ ಪುಟ್ಟ ಪುಟ್ಟ ಮಕ್ಕಳು, ದೊಡ್ಡವರು ತೀವ್ರವಾಗಿ ಗಾಯಗೊಂಡ್ರು. ಕೆಲ ಮಕ್ಕಳು ಪ್ರಜ್ಞೆ ತಪ್ಪಿದ್ವು.
ಭೂಕಂಪ ಸಂಭವಿಸಿದ ವೇಳೆ ಬಹು ಮಹಡಿ ಕಟ್ಟಡಗಳಲ್ಲಿ ಇದ್ದ ಜನರು ಲಿಫ್ಟ್ ಬಳಸದೇ ಮೆಟ್ಟಿಲುಗಳ ಮೂಲಕ ಕೆಳಗೆ ಇಳಿಯುವಾಗ ನೂಕು ನುಗ್ಗಲು ಉಂಟಾಗಿದೆ. ಕಟ್ಟಡವೇ ಕುಸಿದು ಬೀಳುವ ಭಯದಲ್ಲಿ ಜನತೆ ಬಯಲು ಪ್ರದೇಶಕ್ಕೆ ಓಡಿ ಬಂದು ನಿಂತರು. ವೃದ್ಧರು ಹಾಗೂ ರೋಗಿಗಳು ಮನೆಯಿಂದ ಹೊರ ಬರಲು ಸಾಧ್ಯವಾಗದೆ ಪರದಾಡುವಂತಾಯ್ತು.
ಇಂಡೋನೇಷ್ಯಾ ದೇಶದಲ್ಲಿ ಭೂಕಂಪ ಸರ್ವೇ ಸಾಮಾನ್ಯ. ಫೆಸಿಫಿಕ್‌ನ ಭೂಖಂಡ ಸಂಧಿಸುವ ಈ ಭಾಗವನ್ನು ರಿಂಗ್ ಆಫ್ ಫೈರ್ ಎಂದೇ ಬಣ್ಣಿಸಲಾಗಿದೆ. ಭೂಖಂಡಗಳ ಪರಸ್ಪರ ಘರ್ಷಣೆಯಿಂದಾಗಿ ಈ ಭಾಗದಲ್ಲಿ ಸದಾ ಕಾಲ ಒಂದಿಲ್ಲೊಂದು ಕಡೆ ಭೂಕಂಪಗಳು ಸಂಭವಿಸುತ್ತಿರುತ್ತವೆ. ರಿಂಗ್ ಆಫ್ ಫೈರ್‌ನಲ್ಲಿ ಜ್ವಾಲಾಮುಖಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಇವೆ.