ಕೋಲಾರ : ಮಂಗಳೂರು ಆಟೋ ಸ್ಫೋಟ ಪ್ರಕರಣದ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ಧಾರೆ.
ಕೋಲಾರದ ಕೋರಗೊಂಡನಹಳ್ಳಿಯಲ್ಲಿ ಮಾತನಾಡಿದ ಅವರು, ಮೊದಲೇ ಕರಾವಳಿ ಪ್ರದೇಶ ಕೋಮುಗಲಭೆಗೆ ಪ್ರಸಿದ್ದವಾಗಿದೆ. ಆ ವಾತಾವರಣ ನಿರ್ಮಾಣ ಮಾಡಿರೋದು ಕಾಂಗ್ರೆಸ್, ಬಿಜೆಪಿ. ಈ ರೀತಿಯ ಚಟುವಟಿಕೆಗಳಿಂದ ಆ ಭಾಗದ ವಾಣಿಜ್ಯ, ವ್ಯವಹಾರ, ಅಭಿವೃದ್ಧಿಗೆ ತೊಂದರೆ ಆಗ್ತಿದೆ. ಇಂತಹ ಘಟನೆಗಳು ರಾಜ್ಯದಲ್ಲಿ ಆಗಬಾರದು ಎಂದರು.
ಶಾಂತಿಯುತವಾದ ರಾಜ್ಯದಲ್ಲಿ ಪದೇ ಪದೇ ಜವಾಬ್ದಾರಿಯುತ ಸ್ಥಾನದಲ್ಲಿರೋರೆ ಕೋಮು ದಳ್ಳುರಿಗೆ ಪ್ರಚೋದನೆ ನೀಡುತ್ತಿದ್ದಾರೆ. ಅಲ್ಲಿನ ಧಾರ್ಮಿಕ ಗುರುಗಳು ಇಂತಹ ಘಟನೆಗಳಿಗೆ ಪ್ರಚೋಧನೆ ನೀಡಬಾರದು. ಈ ರೀತಿಯ ಪ್ರಕರಣಕ್ಕೆ ಅತ್ಯಂತ ತೀವ್ರವಾಗಿ ಖಂಡಿಸುತ್ತೇನೆ. ಇದರ ಹಿಂದೆ ಯಾರೆ ಇದ್ದರೂ ಕೂಡ ಕಠಿಣ ಕ್ರಮ ಆಗಲೇ ಬೇಕು. ಕೃತ್ಯಕ್ಕೆ ಗಾಯಾಳು ಯುವಕ ಒಬ್ಬನೆ ಇರಲ್ಲ, ಅವರ ಹಿಂದೆ ಯಾರಿದ್ದಾರೆ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು.