Wednesday, January 15, 2025

ಹಾಸ್ಯ ಕಲಾವಿದೆ ನಯನಾ ವಿರುದ್ಧ ದೂರು

ಖಾಸಗಿ ಮನರಂಜನಾ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಕಾಮಿಡಿಯನ್ ಆಗಿ ಗುರುತಿಸಿಕೊಂಡ ನಟ ಸೋಮಶೇಖರ್​ ಅವರಿಗೆ ಹಾಸ್ಯ ನಟಿ ನಯನಾ ಅವರು ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಎದುರಾಗಿದೆ. ಈ ಕುರಿತು ರಾಜರಾಜೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ತಮಗೆ ನಯನಾ ಅವರು ಕೆಟ್ಟದಾಗಿ ನಿಂದಿಸಿ ವಾಯ್ಸ್​ ಮೆಸೇಜ್​ ಕಳಿಸಿದ್ದಾರೆ ಹಾಗೂ ಜೀವ ಬೆದರಿಕೆ ಹಾಕಿದ್ದಾರೆ ಎಂದು ನಟ ಸೋಮಶೇಖರ್​ ಅವರು ದೂರಿನಲ್ಲಿ ತಿಳಿಸಿದ್ದಾರೆ. ‘ಇನ್ಮುಂದೆ ನಯನಾ ನಮ್ಮ ತಂಟೆಗೆ ಬಾರದಂತೆ ಅವರಿಗೆ ತಿಳುವಳಿಕೆ ನೀಡಿ ಹಾಗೂ ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಕಾಮಿಡಿ ಕಾರ್ಯಕ್ರಮದ 2ನೇ ರನ್ನರ್​ ಅಪ್​ ಆಗಿದ್ದ ಸೋಮಶೇಖರ್​ ಅವರ ತಂಡಕ್ಕೆ 3 ಲಕ್ಷ ರೂಪಾಯಿ ಬಹುಮಾನ ಹಣ ಬಂದಿತ್ತು. ತಂಡದಲ್ಲಿ ಇದ್ದ ಸೀನಿಯರ್​ಗಳಿಗೂ ಬಹುಮಾನದ ಹಣದಲ್ಲಿ ಪಾಲು ನೀಡಬೇಕು ಎಂದು ನಯನಾ ಅವರು ಸೋಮಶೇಖರ್​ಗೆ ಕರೆ ಮಾಡಿ ಒತ್ತಾಯ ಹೇರಿದ್ದಾರೆ. ಅಲ್ಲದೇ ಪೊಲೀಸ್​ ಠಾಣೆಯಲ್ಲೇ ಕುಳಿತು ಬೆದರಿಕೆ ಆಗುವಂತಹ ವಾಯ್ಸ್​ ಮೆಸೇಜ್​ ಕಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

RELATED ARTICLES

Related Articles

TRENDING ARTICLES