Thursday, January 23, 2025

ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ

ವಿಜಯಪುರ :  ವಸತಿ ಸಹಿತ ಪಿಯು ಕಾಲೇಜಿನ ಹಾಸ್ಟೆಲ್​​​ನಲ್ಲಿ ನೇಣು ಹಾಕಿಕೊಂಡಿರೊ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ.

ನಗರದ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದಲ್ಲಿರೋ ಆಕ್ಸಫರ್ಡ್ ಎಕ್ಸಫರ್ಟ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಅಜಯಕುಮಾರ ನುಚ್ಚಿ ಮೃತ ವಿದ್ಯಾರ್ಥಿ. ಅಜಯಕುಮಾರ ವಿಜಯಪುರ ಮೂಲದವನಾಗಿದ್ದಾನೆ. ವಿದ್ಯಾರ್ಥಿಯ ಸಾವಿನ ಬಗ್ಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ವಾರದ ಹಿಂದೆ ಶ್ರೀ ದತ್ತಾತ್ರೆಯ ಎಜುಕೇಶನ್ ಟ್ರಸ್ಟ್​​​ನ ಅಧ್ಯಕ್ಷ B.G. ಹಿರೇಮಠ ಅಜಯಕುಮಾರ್​​​​ನೊಂದಿಗೆ ಜಗಳವಾಡಿದ್ದರು, ಈ ಹಿನ್ನೆಲೆಯಲ್ಲಿಯೇ ತಮ್ಮ ಮಗನ ಸಾವಾಗಿದೆ ಎಂದು ಪೋಷಕರು ಆರೋಪ ಮಾಡ್ತಿದ್ದಾರೆ. ನನ್ನ ಮಗನ ಸಾವಿನಲ್ಲಿ ಸಂಶಯವಿದೆ ಎಂದು‌‌ ಕಾಲೇಜು ಆಡಳಿತ ಮಂಡಳಿ ವಿರುದ್ದ ದೂರು ನೀಡಲು‌ ಪೋಷಕರು ನಿರ್ಧಾರ ಮಾಡಿದ್ದಾರೆ. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿ ಶವವನ್ನು ಮರಣೋತ್ತರ ಪರೀಕ್ಷೆಗೆ ಪೊಲೀಸರು ರವಾನಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES