ಮಂಡ್ಯ : ಅದೇನು ಕೋಪ. ಅದೇನು ರೋಷಾವೇಶ. ಇದ್ದಕ್ಕಿದ್ದ ಹಾಗೆ ಕೆಂಡಾಮಂಡಲವಾಗಿದ್ದಾರೆ ಶಾಸಕ ಪುಟ್ಟರಾಜು. ಹೌದು ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ದ ಮೇಲುಕೋಟೆ ಶಾಸಕ ಗುಟುರು ಹಾಕಿದ್ರು. ಬೆಂಗಳೂರು – ಮೈಸೂರು ಹೆದ್ದಾರಿ ಕಾಮಗಾರಿ ಆರಂಭವಾದ ದಿನದಿಂದಲೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವ ಹೈವೆ ಮತ್ತೆ ಈಗ ಚರ್ಚೆಯಲ್ಲಿದೆ.. ಹೆದ್ದಾರಿ ಕಾಮಗಾರಿ ವೇಳೆ ಬೃಹತ್ ವಾಹನಗಳು ಹಾಗೂ ವೇಸ್ಟೇಜ್ ಹಾಕಿರುವ ಪರಿಣಾಮ ರಸ್ತೆ ಕೆಟ್ಟು ಹೋಗಿದೆ. ರಸ್ತೆ ದುರಸ್ಥಿ ಕಾಮಗಾರಿಯನ್ನು ಮಾಡಿಸಿ ಕೊಡುತ್ತೇನೆಂದು ಮಾತು ಕೊಟ್ಟಿದ್ದ ಸಂಸದ ಪ್ರತಾಪ್ ಸಿಂಹ, ಈಗ ತಮ್ಮ ಮಾತನ್ನ ತಪ್ಪಿದ್ದಾರೆ.. ಕರೆ ಮಾಡಿದ್ರೂ ಕಳೆದ ಒಂದು ವಾರಗಳಿಂದ ಕರೆ ಸ್ವೀಕರಿಸುತ್ತಿಲ್ಲ.. ಈ ಹಿನ್ನಲೆ ಸಂಸದರ ವಿರುದ್ದ ಶಾಸಕ ಪುಟ್ಟರಾಜು ರೊಚ್ಚಿಗೆದ್ದಿದ್ರು.
ಒಂದು ವಾರದ ಕಾಲ ಗಡವು ಕೊಟ್ಟಿರುವ ಶಾಸಕ ಪುಟ್ಟರಾಜು ದುರಸ್ಥಿ ಕಾರ್ಯ ಮಾಡದೆ ಹೋದ್ರೆ ಸಂಸದ ಪ್ರತಾಪ್ ಸಿಂಹರ ನಿವಾಸದ ಮುಂದೆ ಧರಣಿ ಕೂರುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.. ಬೆಂಗಳೂರು ಮೈಸೂರು ಹೈವೆಯಿಂದ ಮಂಡ್ಯ ಜನರಿಗೆ ಸಾಕಷ್ಟು ಸಮಸ್ಯೆಯಾಗಿದೆ ಎಂದು ಕಿಡಿ ಕಾರಿದ್ರು. ಇನ್ನು ಹೈವೆ ಕಾಮಗಾರಿ ಅವೈಜ್ಞಾನಿಕವಾಗಿದ್ದು ಕಳೆದ ಮೂರು ವರ್ಷಗಳಿಂದಲು ಈ ಕುರಿತು ನಾನು ಚರ್ಚಿಸುತ್ತಲೇ ಬಂದಿದ್ದೇನೆಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಪರೋಕ್ಷವಾಗಿ ಪ್ರತಾಪ್ ಸಿಂಹರ ವಿರುದ್ದ
ಆಕ್ರೋಶ ಹೊರಹಾಕಿದ್ರು.
ಒಟ್ಟಾರೆ ಸಮಯ ಕಳೆದಂತೆ ಬೆಂಗಳೂರು – ಮೈಸೂರು ಹೈವೆ ಕುರಿತಾಗಿ ವಾದ ವಿವಾದಗಳು ಭುಗಿಲೆಳುತ್ತಲೇ ಇದೆ. ಇತ್ತ ಇನ್ನೇನು ಹೈವೆ ಕಾಮಗಾರಿ ಸಂಪೂರ್ಣಗೊಳ್ಳಲು ಇನ್ನೆರೆಡೆ ತಿಂಗಳು ಬಾಕಿಯಿದ್ದು, ಲೋಕಾರ್ಪಣೆ ಸಮಯದಲ್ಲಿ ಮಂಡ್ಯ ಶಾಸಕ ಹಾಗೂ ಸಂಸದರು ಹಾಗೂ ಮೈಸೂರು ಸಂಸದರ ನಡುವಿನ ಫೈಟ್ ಯಾವ ಮಟ್ಟಕ್ಕೆ ತಾರಕಕ್ಕೇರಲಿದಿಯೋ ಕಾದು ನೋಡ್ಬೇಕಿದೆ.
ಬಾಲಕೃಷ್ಣ ಜೀಗುಂಡಿಪಟ್ಟಣ, ಪವರ್ ಟಿವಿ, ಮಂಡ್ಯ