ಕಾಂತಾರದಲ್ಲಿ ಶಿವತಾಂಡವ ಆಡಿದ ಕನ್ನಡದ ಹೆಮ್ಮೆಯ ನಟ ರಿಷಬ್ ಶೆಟ್ಟಿ, ಇದೀಗ ಮತ್ತೆ ಡಿಟೆಕ್ವಿವ್ ದಿವಾಕರ್ ಆಗಿ ಹೊಸ ಕೇಸ್ ತನಿಖೆಗೆ ಮುಂದಾಗೋ ಮುನ್ಸೂಚನೆ ನೀಡಿದ್ದಾರೆ. ಕರ್ನಾಟಕರತ್ನ ಅಪ್ಪು ಶುಭಹಾರೈಸಿರೋ ಬೆಲ್ಬಾಟಂ ಸೀಕ್ವೆಲ್ ಸದ್ಯದಲ್ಲೇ ಕಿಕ್ ಸ್ಟಾರ್ಟ್ ಆಗ್ತಿದೆ. ಕಾಂತಾರ ಆಯ್ತು, ವಾಟ್ ನೆಕ್ಸ್ಟ್ ಶೆಟ್ರೆ ಅಂದ್ರೆ ಇನ್ವೆಸ್ಟಿಗೇಷನ್ ಅಂತಿದ್ದಾರೆ ರಿಷಬ್.
- ಕರ್ನಾಟಕ ರತ್ನ ಅಪ್ಪು ಶುಭ ಕೋರಿದ್ದ ಬೆಲ್ಬಾಟಂ ಕೇಸ್
- ಕಾಂತಾರ ಅಮೆಜಾನ್ಗೆ ಬರ್ತಿದ್ದಂತೆ ರಿಷಬ್ ಫುಲ್ ಫ್ರೀ
- ಪ್ಯಾನ್ ಇಂಡಿಯಾ ಚಿತ್ರವಾಗಿ ರೂಪುಗೊಳ್ಳಲಿರೋ BB-2
ಕೆಜಿಎಫ್ನಿಂದ ರಾಕಿಭಾಯ್ ಯಶ್ ಹೇಗೆ ಜಗತ್ ಪ್ರಸಿದ್ದಿ ಆದ್ರೋ, ಕಾಂತಾರದಿಂದ ರಿಷಬ್ ಶೆಟ್ಟಿ ಕೂಡ ಅಷ್ಟೇ ಫೇಮಸ್ ಆದ್ರು. ಬರೀ ಫೇಮ್ ಅಷ್ಟೇ ಅಲ್ಲ, ಇವ್ರ ಪ್ರತಿಭೆಗೆ ಇಡೀ ಚಿತ್ರರಂಗ ಪ್ರಶಂಸೆ ವ್ಯಕ್ತಪಡಿಸಿತು. ಅದು ಅವ್ರ ಸ್ಟಾರ್ಡಮ್, ರೆಮ್ಯೂನರೇಷನ್, ಫ್ಯಾನ್ ಫಾಲೋಯಿಂಗ್ ಹೀಗೆ ಎಲ್ಲವನ್ನೂ ಹೆಚ್ಚಿಸಿತು. ಜೊತೆಗೆ ಅವ್ರ ಜವಾಬ್ದಾರಿಗಳನ್ನ ಮತ್ತಷ್ಟು ಜಾಗ್ರತೆಗೊಳಿಸಿದೆ. ಮುಂದೆ ಇಡಬೇಕಿರೋ ಹೆಜ್ಜೆ ಎಷ್ಟು ಗಟ್ಟಿಯಾಗಿರಬೇಕು ಅನ್ನೋದನ್ನ ಪದೇ ಪದೆ ನೆನಪಿಸ್ತಿದೆ.
ನಟ, ನಿರ್ದೇಶಕ, ಬರಹಗಾರ, ಗಾಯಕ, ನಿರ್ಮಾಪಕ ಹೀಗೆ ಚಿತ್ರರಂಗದ ಬೇರೆ ಬೇರೆ ಆಯಾಮಗಳಲ್ಲಿ ಗುರ್ತಿಸಿಕೊಂಡಿರೋ ರಿಷಬ್ ಶೆಟ್ಟಿ, ತಮ್ಮ ಪ್ರತಿಭೆಯಿಂದ ಇಡೀ ವಿಶ್ವ ಸಿನಿದುನಿಯಾದ ಗಮನ ಸೆಳೆದರು. ಕನ್ನಡದ ಕೀರ್ತಿ ಪತಾಕೆಯನ್ನ ಮತ್ತಷ್ಟು ಅಗ್ತಸ್ಥಾನಕ್ಕೆ ಕೊಂಡೊಯ್ದರು. ಕಾಂತಾರ ಸಕ್ಸಸ್ ಬರೀ ರಿಷಬ್ ಗೆಲುವಲ್ಲ. ಕನ್ನಡ ಚಿತ್ರರಂಗದ ಗೆಲುವು. ಕನ್ನಡದ ರಾಯಭಾರಿಯಾಗಿ ಭಾರತೀಯ ಚಿತ್ರರಂಗದಲ್ಲಿ ಹೊಸ ಕ್ರಾಂತಿಯ ಅಲೆ ಎಬ್ಬಿಸಿದ್ರು.
ಕಾಂತಾರ ಸಿನಿಮಾ ಯಶಸ್ವೀ 50 ದಿನ ಕೂಡ ಪೂರೈಸಿದೆ. 500 ಕೋಟಿ ಬ್ಯುಸಿನೆಸ್ ಮಾಡಿದೆ. ಇದೀಗ ಓಟಿಟಿ ಪ್ಲಾಟ್ಫಾರ್ಮ್ಗೂ ಲಗ್ಗೆ ಇಡ್ತಿರೋ ಕಾಂತಾರ, ಮುಂದಿನ ವಾರದಿಂದ ಅಮೆಜಾನ್ ಪ್ರೈಮ್ನಲ್ಲಿ ಲಭ್ಯವಾಗಲಿದೆ. ಕಾಂತಾರ ಪ್ರಮೋಷನ್ಸ್ ಕೂಡ ಮುಗಿಸಿ, ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಮುಂದಿನ ಸಿನಿಮಾ ಬಗ್ಗೆ ಯೋಚಿಸೋಕೆ ಮುಂದಾಗಿದ್ದಾರೆ. ವಾಟ್ ನೆಕ್ಸ್ಟ್ ಶೆಟ್ರೆ ಅಂದ್ರೆ ಇನ್ವೆಸ್ಟಿಗೇಷನ್ ಸ್ಟಾರ್ಟ್, ಡಿಶ್ಕ್ಯಾಂ ಅಂತಿದ್ದಾರೆ.
ಯೆಸ್.. 2019ರ ಬ್ಲಾಕ್ ಬಸ್ಟರ್ ಹಿಟ್ ಬೆಲ್ಬಾಟಂ ಚಿತ್ರದಲ್ಲಿ ರೆಟ್ರೋ ಲುಕ್ನಲ್ಲಿ ಮಿಂಚಿದ್ದ ರಿಷಬ್ ಶೆಟ್ಟಿ, ಡಿಟೆಕ್ಟಿವ್ ದಿವಾಕರ್ ಆಗಿ ಕಮಾಲ್ ಮಾಡಿದ್ರು. ಜಯತೀರ್ಥ ನಿರ್ದೇಶನದ, ಸಂತೋಷ್ ನಿರ್ಮಾಣದ ಈ ಸಿನಿಮಾ ನೋಡುಗರ ಮನಸ್ಸು ಗೆಲ್ಲೋದ್ರ ಜೊತೆಗೆ ಬಾಕ್ಸ್ ಆಫೀಸ್ ಕೂಡ ಕೊಳ್ಳೆ ಹೊಡೆದಿತ್ತು. ಅದ್ರಲ್ಲೂ ರಿಷಬ್ ಶೆಟ್ಟಿ- ಹರಿಪ್ರಿಯಾ ಕೆಮಿಸ್ಟ್ರಿ ಕೊಂಚ ಜಾಸ್ತಿನೇ ವರ್ಕೌಟ್ ಆಗಿತ್ತು.
ಇದೀಗ ಅದ್ರ ಸೀಕ್ವೆಲ್ ಬೆಲ್ಬಾಟಂ 2 ಶೂಟಿಂಗ್ ಕಿಕ್ಸ್ಟಾರ್ಟ್ ಆಗೋ ಮನ್ಸೂಚನೆ ಸಿಕ್ಕಿದೆ. ರಿಷಬ್ ಎಲ್ಲಾ ಕೆಲಸ ಕಾರ್ಯಗಳನ್ನ ಮುಗಿಸಿ, ತಮ್ಮ ನಿರ್ದೇಶನದ ರುದ್ರ ಪ್ರಯಾಗಕ್ಕೆ ಇಳಿಯೋಕೂ ಮುನ್ನ ಒಂದು ಸಿನಿಮಾ ಮಾಡೋಕೆ ಸಜ್ಜಾಗಿದ್ದಾರೆ. ಬೆಲ್ಬಾಟಂ ನಿರ್ಮಾಪಕ ಸಂತೋಷ್ರನ್ನ ಇದೇ ನವೆಂಬರ್ 25ರ ನಂತ್ರ ಭೇಟಿ ಆಗಲಿದ್ದು, ಸಿನಿಮಾ ಯಾವಾಗಿಂದ ಶುರು ಮಾಡೋಣ ಅನ್ನೋದ್ರ ಬಗ್ಗೆ ಚರ್ಚಿಸಲಿದ್ದಾರೆ.
ಝೈದ್ ಖಾನ್ ಜೊತೆ ಬನಾರಸ್ ಮಾಡಿದ ಜಯತೀರ್ಥ ಈಗಾಗ್ಲೇ ಕಥೆ ಸಿದ್ದಪಡಿಸಿ, ರಿಷಬ್ ಗ್ರೀನ್ ಸಿಗ್ನಲ್ಗಾಘಿ ಕಾಯ್ತಿದ್ರು. ಅಲ್ಲದೆ ಈಗ ಶೆಟ್ರು ನ್ಯಾಷನಲ್ ಸ್ಟಾರ್. ಹಾಗಾಗಿ ಅದನ್ನ ಪ್ಯಾನ್ ಇಂಡಿಯಾ ಲೆವೆಲ್ಗೆ ಪಂಚಭಾಷೆಯಲ್ಲಿ ಮಾಡೋಕೆ ಸಿದ್ಧತೆಗಳು ಮಾಡಿಕೊಳ್ತಿದ್ದಾರಂತೆ. ಅದಕ್ಕೆ ಪೂರಕವಾಗಿ ಚಿತ್ರತಂಡ ಈಗಾಗ್ಲೇ ಅಪ್ಪು ಅವ್ರು ಕ್ಲಾಪ್ ಮಾಡೋ ಮೂಲಕ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಿಸಿತ್ತು.
ಈ ಬಾರಿ ರಿಷಬ್ ಜೊತೆ ತಾನ್ಯ ಹೋಪ್ ಹಾಗೂ ಹರಿಪ್ರಿಯಾ ಇಬ್ಬರು ಇರಲಿದ್ದು, ಚೆಂಡೂವ ಕೇಸ್ನ ಡೀಲ್ ಮಾಡಲಿದ್ದಾರೆ ಡಿಟೆಕ್ಟಿವ್ ದಿವಾಕರ್. ಬಾಲಿವುಡ್ ಮಂದಿ ಕೂಡ ಬೆರಗಾಗಿರೋ ಕನ್ನಡಿಗರ ಟ್ಯಾಲೆಂಟ್ ಈ ಚಿತ್ರದಿಂದ ಮತ್ತಷ್ಟು ಸವಿಸ್ತಾರವಾಗಲಿದ್ದು, ಈ ಬಾರಿ ಯಾವ ರೀತಿ ಥ್ರಿಲ್ ಕೊಡ್ತಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ