Sunday, December 22, 2024

BJP ವಿರುದ್ದ EC ಕ್ರಮ ಕೈಗೊಳ್ಳಬೇಕು : ಹೆಚ್​ಡಿಕೆ

ಕೋಲಾರ : ಚಿಲುಮೆ ಸಂಸ್ಥೆಯಿಂದ ಮತದಾರರ ಹೆಸರು ಡಿಲೀಟ್ ವಿಚಾರವಾಗಿ ಕೋಲಾರದಲ್ಲಿ ಮಾಜಿ ಸಿಎಂ H.D. ಕುಮಾರಸ್ವಾಮಿ ಹೇಳಿಕೆಯನ್ನು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವೇ ಈ ಪ್ರಕರಣದಲ್ಲಿ ಭಾಗಿಯಾದಾಗ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ. ಕಡ್ಡಾಯ ಮತದಾನ ಮಾಡಬೇಕು ಎಂದು ಚುನಾವಣಾ ಆಯೋಗ ಹೇಳುತ್ತೆ ಆದರೆ ಮತದಾರರ ಹಕ್ಕನ್ನ ಇಂತಹ ಪ್ರಕರಣಗಳಿಂದ BJP ಮೊಟಕುಗೊಳಿಸ್ತಿದೆ.

BJP ಸರ್ಕಾರದ ಈ ಹೀನ ಕೃತ್ಯದ ವಿರುದ್ದ ಚುನಾವಣೆ ಆಯೋಗ ಕ್ರಮ ಕೈಗೊಳ್ಳಬೇಕು. ಎರಡೂ ರಾಷ್ಟ್ರೀಯ ಪಕ್ಷಗಳು ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಚುನಾವಣಾ ಆಯೋಗ ಈ ವಿಚಾರದಲ್ಲಿ ಪ್ರಾಮಾಣಿಕವಾಗಿ ಕ್ರಮಕೈಗೊಳ್ಳಬೇಕು. ನಾಳೆ JDS ಪಕ್ಷದಿಂದ BJP ವಿರುದ್ದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಚುನಾವಣಾ ಆಯೋಗಕ್ಕೆ ದೂರು ನೀಡಲು JDS ನಿರ್ಧಾರ ಮಾಡಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES