Monday, December 23, 2024

ಫಸ್ಟ್ ಡೇ 15, ಸೆಕೆಂಡ್ ಡೇ 22 ಕೋಟಿ.. ‘ದೃಶ್ಯಂ’ ಚಮತ್ಕಾರ

ವಿವಾದಗಳಿಂದ ಪಾನ್ ಇಂಡಿಯಾ ಸ್ಟಾರ್ ಅಂತ್ಲೇ ವರ್ಚಸ್ಸು ಕಳೆದುಕೊಂಡಿದ್ದ ಅಜಯ್ ದೇವಗನ್, ಇದೀಗ ದೃಶ್ಯಂ 2 ಮೂಲಕ ಫೀನಿಕ್ಸ್​ನಂತೆ ಎದ್ದು ಬಂದಿದ್ದಾರೆ. ಮಲಯಾಳಂ ಚಿತ್ರದ ರಿಮೇಕ್ ವರ್ಷನ್​ನಿಂದ ಬಾಕ್ಸ್ ಆಫೀಸ್ ಚಮತ್ಕಾರ ಮಾಡ್ತಿದ್ದಾರೆ. ಎರಡೇ ದಿನದಲ್ಲಿ 37 ಕೋಟಿ ಗಳಿಸಿ, 50 ಕೋಟಿ ಕ್ಲಬ್​ನತ್ತ ವಿಜಯದ ಹೆಜ್ಜೆ ಇಟ್ಟಿದ್ದಾರೆ.

  • ಪಾನ್ ಸ್ಟಾರ್ ಅಜಯ್ ದೇವಗನ್ ಈಸ್ ಬ್ಯಾಕ್ ಟು ಬ್ಯಾಂಗ್
  • ಕನ್ನಡಕ್ಕೆ ವರ್ಕೌಟ್ ಆಗದ ಕ್ರೈಂ ಥ್ರಿಲ್ಲರ್ ಹಿಂದಿಯಲ್ಲಿ ಸಕ್ಸಸ್..!
  • ದೇವಗನ್ ಜೊತೆ ಟಬೂ, ಅಕ್ಷಯ್ ಖನ್ನಾ, ಶ್ರಿಯಾ ಹಲ್​ಚಲ್

ದೃಶ್ಯ ಅಂದಾಕ್ಷಣ ನೆನಪಾಗೋದೇ ರಾಜೇಂದ್ರ ಪೊನ್ನಪ್ಪ. ಅರ್ಥಾತ್ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್. ಆದ್ರೆ ಈ ಬಾರಿ ದೃಶ್ಯ-2 ಕನ್ನಡದ ಮಟ್ಟಿಗೆ ನಿರೀಕ್ಷಿತ ಮಟ್ಟ ತಲುಪಲಿಲ್ಲ. ಪಿ ವಾಸು ಅವ್ರ ನಿರ್ದೇಶನ ರುಚಿಸಲಿಲ್ಲ. ರವಿಮಾಮನ ಪ್ರೇಮಲೋಕ ನೋಡುಗರಿಗೆ ಹಿಡಿಸಲಿಲ್ಲ.

ಮಲಯಾಳಂನಲ್ಲಿ ಜೀತು ಜೋಸೆಫ್ ಆ್ಯಕ್ಷನ್ ಕಟ್ ಹೇಳಿರೋ ದೃಶ್ಯಂ ಸೀಕ್ವೆಲ್ ಬಂದಿದ್ದೇ ತಡ, ಪಕ್ಕದ ಟಾಲಿವುಡ್​ನಲ್ಲಿ ವಿಕ್ಟರಿ ವೆಂಕಟೇಶ್ ದೃಶ್ಯಂ-2 ಮಾಡಿದ್ರು. ಆದ್ರೆ ಮಲಯಾಳಂ ರೀತಿ ಅಲ್ಲಿ ವರ್ಕೌಟ್ ಆಗಲಿಲ್ಲ. ಅದೇ ಕಥೆಯನ್ನ ನಮ್ಮ ಕನ್ನಡದಲ್ಲಿ ರವಿಚಂದ್ರನ್ ಮಾಡಿದ್ರು. ಅವ್ರಿಗೂ ನಿರೀಕ್ಷಿತ ಗೆಲುವು ಸಿಗಲಿಲ್ಲ.

ಆದ್ರೀಗ ಅದೇ ಸಿನಿಮಾ ಹಿಂದಿಯಲ್ಲಿ ತಯಾರಾಯ್ತು. ಹಿಂದಿ ರಿಮೇಕ್​ನಲ್ಲಿ ಅಜಯ್ ದೇವಗನ್, ಶ್ರಿಯಾ ಸರಣ್ ಸತಿ-ಪತಿಯಾಗಿ ಬಣ್ಣ ಹಚ್ಚಿದ್ರು. ಪೊಲೀಸ್ ಆಫೀಸರ್ ಆಗಿ ಟಬೂ ಹಾಗೂ ಅಕ್ಷಯ್ ಖನ್ನಾ ಬಣ್ಣ ಹಚ್ಚಿದ್ರು. ಆ ಸಿನಿಮಾ ಇದೇ ನವೆಂಬರ್ 18ರಂದು ಶುಕ್ರವಾರ ತೆರೆಕಂಡಿದೆ. ಸಿನಿಮಾ ರಿಲೀಸ್ ಆದ ಮೊದಲ ದಿನವೇ ಬರೋಬ್ಬರಿ 15 ಕೋಟಿ ಪೈಸಾ ವಸೂಲ್ ಮಾಡಿ ಎಲ್ಲರ ಹುಬ್ಬೇರಿಸಿದೆ.

ಸೌತ್ ಸ್ಟಾರ್ಸ್​ ಎಲ್ಲಾ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಸದ್ದು ಮಾಡ್ತಿರಬೇಕಾದ್ರೆ, ಸುದೀಪ್ ಜೊತೆ ವಿವಾದ ಮಾಡಿಕೊಂಡು ಹಿಂದಿಯನ್ನ ರಾಷ್ಟ್ರ ಭಾಷೆ ಎಂದ ಅಜಯ್ ದೇವಗನ್, ಪಾನ್ ಸ್ಟಾರ್ ಆಗಿ ವರ್ಚಸ್ಸು ಕಳೆದುಕೊಂಡಿದ್ರು. ಸಾಲದು ಅಂತ ಸಾಲು ಸಾಲು ಹಿಂದಿ ಸಿನಿಮಾಗಳು ಫ್ಲಾಪ್ ಆದ್ವು. ಆದ್ರೀಗ ದೃಶ್ಯಂ ಚಿತ್ರದಿಂದ ಫೀನಿಕ್ಸ್​ನಂತೆ ಎದ್ದು ಬಂದಿದ್ದಾರೆ.

ಮೊದಲ ದಿನ 15 ಕೋಟಿ ಗಳಿಸಿದ್ದ ದೃಶ್ಯಂ-2, ಎರಡನೇ ದಿನ 22 ಕೋಟಿ ಗಳಿಸಿ, 50 ಕೋಟಿ ಕ್ಲಬ್​ನತ್ತ ನಾಗಾಲೋಟ ಮುಂದುವರೆಸಿದೆ. ಇದಕ್ಕೆ ಚಿತ್ರದ ಕಥೆ ಜೊತೆ ಮೇಕಿಂಗ್ ಗಮ್ಮತ್ತು, ಕಲಾವಿದರ ಮನೋಜ್ಞ ಅಭಿನಯ ಕಾರಣವಾಗಿದೆ. ಅಭಿಷೇಕ್ ಪಾಠಖ್ ಮೂಲ ನಿರ್ದೇಶಕ ಜೀತು ಶೈಲಿಯಲ್ಲೇ ಸಿನಿಮಾ ಕಟ್ಟಿಕೊಟ್ಟಿದ್ದು, ಪ್ರೇಕ್ಷಕರಿಗೆ ರುಚಿಸುತ್ತಿದೆ. ಒಟ್ಟಾರೆ ಈ ಸಿನಿಮಾದಿಂದ ಅಜಯ್ ದೇವಗನ್ ಬಾಕ್ಸ್ ಆಫೀಸ್ ಗನ್ ಆಗಿ ಮಿಂಚ್ತಿದ್ದಾರೆ. ಮತ್ತೆ ಗೆಲುವಿನ ಲಯ ಕಂಡುಕೊಂಡಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES