Sunday, December 22, 2024

ಕಾಂಗ್ರೆಸ್ ಎಸ್​​ಟಿ ಜನಾಂಗಕ್ಕೆ ಏನೂ ಮಾಡಿಲ್ಲ : ಬಿಎಸ್​​ ಯಡಿಯೂರಪ್ಪ

ಬಳ್ಳಾರಿ:  ನವಶಕ್ತಿ ಸಮಾವೇಶ ಉದ್ದೇಶಿಸಿ ಮಾಜಿ ಸಿಎಂ ಬಿಎಸ್​​ ಯಡಿಯೂರಪ್ಪ ಭಾಷಣ ಮಾಡಿದ್ದಾರೆ. ಬಳ್ಳಾರಿ, ವಿಜಯನಗರ ಜಿಲ್ಲೆಗಳ ಹತ್ತು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕಾಗಿದೆ ಎಂದರು.

ನಾನು ಸಿಎಂ ಆಗಿದ್ದ ವೇಳೆ ಸರ್ಕಾರಿ ವಾಲ್ಮೀಕಿ ಜಯಂತಿ ಮಾಡಲಾಗಿದೆ. ಕಾಂಗ್ರೆಸ್ ಎಸ್​​ಟಿ ಜನಾಂಗಕ್ಕೆ ಏನೂ ಮಾಡಿಲ್ಲ. ಎಸ್​ಟಿ ಮಹಿಳೆಯನ್ನ ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ. ನಾನು ಸಿಎಂ ಆಗಿದ್ದ ವೇಳೆ ಶ್ರೀರಾಮುಲು, ಜನಾರ್ದನರೆಡ್ಡಿ ಅವರು ಕೇಳಿದಷ್ಟು ಅನುದಾನ ನೀಡಿದ್ದೆ. ಈ ಸಮಾವೇಶದ ಮೂಲಕ ಕಾಂಗ್ರೆಸ್ ನಾಯಕರು ಹೆದರಿ ಹೋಗಿದ್ದಾರೆ. ಈ ಕಾರ್ಯಕ್ರಮದ ಜನಸ್ತೋಮ ಕಾಂಗ್ರೆಸ್​ಗೆ ಅಘಾತ ಆಗಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕಾಂಗ್ರೆಸ್ ಮೂರು ತಲೆಮಾರು ಆಗುವಷ್ಟು ಆಸ್ತಿ ಮಾಡಿದ್ದೇವೆ ಅಂತಾ ಹೇಳಿದ್ದಾರೆ. ಇದನ್ನ ರಾಜ್ಯದ ಜನರು ಗಮನಿಸಬೇಕಾಗಿದೆ. ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಬೇಕಾಗಿದೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES