Saturday, December 28, 2024

ಕಿರುತೆರೆ ನಟ ಸಾಗರ್​​ ನಿಶ್ಚಿತಾರ್ಥ

ಕಿರುತೆರೆಯ ನಂಬರ್ ಒನ್ ಸತ್ಯ ಸೀರಿಯಲ್ ಹೀರೋ ತಮ್ಮ ಫೀಮೇಲ್ ಫ್ಯಾನ್ಸ್‌ಗೆ ಹಾರ್ಟ್ ಬ್ರೇಕಿಂಗ್ ಸುದ್ದಿಯೊಂದನ್ನ ಕೊಟ್ಟಿದ್ದಾರೆ. ಸತ್ಯ ಧಾರಾವಾಹಿಯ ಅಮುಲ್ ಬೇಬಿಯಾಗಿ ಮಿಂಚ್ತಿರುವ ಸಾಗರ್ ಬಹುಕಾಲದ ಗೆಳತಿ ಸಿರಿ ರಾಜು ಜೊತೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ.

ಸದ್ಯ ಎಂಗೇಜ್‌ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರಧಾರಿಯಾಗಿ ಅಪಾರ ಅಭಿಮಾನಿಗಳ ಮನಗೆದ್ದ ನಟ ಸಾಗರ್ ಗೌಡ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅಮುಲ್ ಬೇಬಿ ಎಂದೇ ಫೇಮಸ್ ಆಗಿದ್ದ ನಟ ಇದೀಗ ನಟಿ, ಕಮ್ ಮಾಡೆಲ್ ಸಿರಿ ರಾಜು ಅವರನ್ನು ಮದುವೆಯಾಗುತ್ತಿದ್ದಾರೆ. ಐದು ವರ್ಷಗಳಿಂದ ಸ್ನೇಹಿತರಾಗಿದ್ದ ಈ ಜೋಡಿ ಗುರುಹಿರಿಯರನ್ನ ಒಪ್ಪಿಸಿ ಹೊಸ ಬಾಳಿಗೆ ಕಾಲಿಡುವ ತವಕದಲ್ಲಿದ್ದಾರೆ.

ಸಾಕಷ್ಟು ಸಮಯದಿಂದ ಸಾಗರ್ ಮತ್ತು ಸಿರಿ ರಾಜು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಭ್ರಮಕ್ಕೆ ಸತ್ಯ ಧಾರಾವಾಹಿ ತಂಡ ಕೂಡ ಸಾಕ್ಷಿಯಾಗಿದೆ.

RELATED ARTICLES

Related Articles

TRENDING ARTICLES