Tuesday, December 31, 2024

ಮಕ್ಕಳನ್ನು ನೋಡಲು ಬಿಡದಿದ್ದಕ್ಕೆ ಮನೆಗೇ ಬೆಂಕಿ ಹಚ್ಚಿದ ಭೂಪ

ಹಾಸನ: ಅವರಿಬ್ಬರದ್ದು ಎಂಟು ವರ್ಷದ ಹಿಂದೆ ಮದುವೆಯಾಗಿತ್ತು, ಎರಡು ಮಕ್ಕಳಾದ್ಮೇಲೆ ಒಬ್ಬರಿಗೊಬ್ಬರು ಬೇಡವಾಗಿದ್ರು. ಗಂಡ ಹೆಂಡ್ತಿಯರಿಬ್ಬರೂ ಜಗಳ ಆಡ್ಕೊಂಡು ದೂರವಾಗಿಬಿಟ್ರು. ನನ್ನ ಮಕ್ಕಳನ್ನು ನೋಡ್ಬೇಕು ಅಂತಾ ಆಗಿದ್ದಾಂಗೆ ಮನೆ ಬಳಿ ಬರ್ತಾ ಇದ್ದ, ಹೀಗಿರೋವಾಗ ಕಳೆದ ರಾತ್ರಿ ಹೆಂಡ್ತಿ ಮಕ್ಕಳನ್ನ ತೋರಿಸೋದಿಲ್ಲ ಅಂತಾ ಜಗಳ‌ ಮಾಡಿ ಕಳಿಸ್ತಾಳೆ. ಇದಕ್ಕೆ ಕೋಪಗೊಂಡ ಪತಿ, ಪತ್ನಿ ಹಾಗೂ ಮಕ್ಕಳನ್ನು ಮನೆಯೊಳಗೆ ಕೂಡಿಹಾಕಿ ಹಾಕಿ ಮಧ್ಯರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಮಕ್ಕಳು ನೋಡಲು ಬಿಡಲಿಲ್ಲ ಅಂತಾ ಮನೆಗೇ ಬೆಂಕಿ ಹಚ್ಚಿದ ಭೂಪ. ಪೆಟ್ರೋಲ್ ಸುರಿದು ಮೂವರನ್ನೂ ಕೊಲ್ಲೋದಕ್ಕೆ ಮುಂದಾಗಿದ್ದ ಘಟನೆ ಹಾಸನ ತಾಲೂಕಿನ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಕ್ಕಳನ್ನು ನೋಡಲು ಬಿಡಲಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ಪತ್ನಿ, ಇಬ್ಬರು ಮಕ್ಕಳು, ಮನೆ ಸಮೇತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಹಾಸನ ತಾಲೂಕಿನ ಅಂಕನಹಳ್ಳಿ ಗ್ರಾಮದ ರಂಗಸ್ವಾಮಿ ಎಂಬಾತ ಕೃತ್ಯ ಎಸಗಿದ್ದಾನೆ. ರಂಗಸ್ವಾಮಿ ಹಾಗೂ ಗೀತಾ ಕಳೆದ ಜಗಳ ಮಾಡಿಕೊಂಡು ಪರಸ್ಪರ ದೂರವಾಗಿದ್ದು, ಕಳೆದ ರಾತ್ರಿ ತನ್ನ ಮಕ್ಕಳನ್ನ ನೋಡಿಕೊಂಡು ಹೋಗೋಕೆ ಅಂತಾ ಬಂದಿದ್ದಾನೆ. ಆದ್ರೆ ಪತ್ನಿ ಗೀತಾ, ಮಕ್ಕಳನ್ನು ನೋಡೋಕೆ ಬಿಡೋದಿಲ್ಲ ಅಂತಾ ಜಗಳವಾಡಿ ವಾಪಸ್ಸು ಕಳುಹಿಸಿದ್ದಾನೆ. ಇದ್ರಿಂದ ಕೋಪಗೊಂಡ ರಂಗನಾಥ್, ಪೆಟ್ರೋಲ್ ಬಂಕ್ ನಿಂದ ಪೆಟ್ರೋಲ್ ತಂದು, ಮನೆಗೆ ಹೊರಗಿನಿಂದ ಬೀಗ ಜಡಿದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮನೆಯಲ್ಲಿದ್ದವರು ಕಿರುಚಿಕೊಳ್ಳೋದನ್ನೋ ನೋಡಿ, ಸ್ಥಳಿಯರು ಸಹಾಯಕ್ಕೆ ಧಾವಿಸಿದ್ದಾರೆ. ಸ್ಥಳಿಯರ ಸಹಾಯದಿಂದ ಗೀತಾ ಹಾಗೂ ಮಕ್ಕಳಿಬ್ಬರು ಬದುಕುಳಿದಿದ್ದಾರೆ. ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಪತ್ನಿ ಗೀತಾ, ಮಕ್ಕಳಾದ ಚಿರಂತನ್ (7) ಹಾಗೂ ನಂದನ್ (5) ಗಂಭೀರವಾಗಿ ಗಾಯಗೊಂಡಿದ್ದು, ಗಾಯಳುಗಳಿಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎಂಟು ವರ್ಷದ ಹಿಂದೆ ಹಾಸನ ತಾಲೂಕಿನ ಅಂಕನಹಳ್ಳಿ ಗ್ರಾಮದ ರಂಗಸ್ವಾಮಿ ಎಂಬುವವರಿಗೆ ಗೀತಾ ಎಂಬಾಕೆಯನ್ನು ಕೊಟ್ಟು ವಿವಾಹ ಮಾಡಲಾಗಿತ್ತು. ಜಮೀನು ವಿಚಾರವಾಗಿ ಗಂಡ ಹೆಂಡತಿಯ ಜಗಳವಾಗಿತ್ತು. ಇದೇ ವಿಚಾರಕ್ಕೆ ಇಬ್ಬರೂ ಗಲಾಟೆ ಮಾಡಿಕೊಂಡು ನಾಲ್ಕು ತಿಂಗಳ‌ ಹಿಂದೆಯಷ್ಟೇ ದೂರಾಗಿದ್ದರು.‌ ದೂರವಾದ ಬಳಿಕ ರಂಗನಾಥ್ ಆಗಿಂದಾಗ್ಗೆ ಮನೆಗೆ ಬಂದು ಮಕ್ಕಳನ್ನು ನೋಡಿಕೊಂಡು ಹೋಗ್ತಿದ್ದ, ಅಂತೆಯೇ ನಿನ್ನೆ ಮೂರು‌ಭಾರಿ ಮನೆಯ ಬಳಿ‌ ಬಂದು ಗಲಾಟೆ ಮಾಡಿದ್ದಾನೆ, ಮಕ್ಕಳನ್ನು ನೋಡೋದಕ್ಕೆ ಬಿಡಲಿಲ್ಲ ಅಂದಿದ್ದಕ್ಕೆ ಸಿಟ್ಟಾಗಿ, ಎಲ್ಲರನ್ನೂ ಸಾಯಿಸುತ್ತೇನೆ ಅಂತಾ ಹೇಳಿ ಹೋಗಿ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ್ದಾನೆ.‌

ಸದ್ಯ, ಪೆಟ್ರೋಲ್ ಸುರಿದು ಬೆಂಕಿ ಸಾಯಿಸಲು‌ ಮುಂದಾಗಿದ್ದ ಪತಿ ಕಸ್ಟಡಿಯಲ್ಲಿದ್ದಾನೆ.‌ ಪತ್ನಿ ಹಾಗೂ ಮಕ್ಕಳಿಬ್ಬರೂ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಮನೆಯೊಳಗೆ ಗೀತಾ ತಾಯಿಯೂ ಕೂಡಾ ಇದ್ದೂ, ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅದೇನೇ ಸಿಟ್ಟು ಇದ್ರೂ, ಮಕ್ಕಳನ್ನೂ ನೋಡುವ ಆಸೆಯನ್ನು ಇಟ್ಕೊಂಡವನು, ಮಕ್ಕಳ‌ ಮೇಲೆ ಪ್ರೀತಿ ಇಟ್ಟುಕೊಂಡು ಮಕ್ಕಳನ್ನೂ ಸೇರಿ ಬೆಂಕಿ ಹಚ್ಚಿದ್ದಕ್ಕೆ ಸ್ಥಳಿಯರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಚಿನ್ ಶೆಟ್ಟಿ, ಪವರ್ ಟಿವಿ. ಹಾಸನ

RELATED ARTICLES

Related Articles

TRENDING ARTICLES