Monday, December 23, 2024

ಶ್ರದ್ಧಾ ಹತ್ಯೆ ಪ್ರಕರಣ; ಮಾದಕ ವಸ್ತು ಸೇವಿಸಿ ಗೆಳತಿ ಮೇಲೆ ಎರಗಿದ್ದ ಕೀಚಕ

ನವದೆಹಲಿ: ಶ್ರದ್ಧಾ ಹತ್ಯೆ ಪ್ರಕರಣ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಶ್ರದ್ಧಾಳನ್ನು ಕೊಂದ ಆರೋಪ ಹೊತ್ತಿರುವ ಪ್ರೇಮಿ ಆಫ್ತಾಬ್ ಅಮೀನ್ ಪೂನಾವಾಲಾ ತಾನು ಮಾದಕ ವ್ಯಸನಿಯಾಗಿರುವುದಾಗಿ ಹೇಳಿಕೊಂಡಿದ್ದಾನೆ. ಶ್ರದ್ಧಾ ಕೊಲೆಯಾದ ದಿನ ತಾನು ಮಾದಕ ಸೇವಿಸಿರುವುದಾಗಿ ವಿಚಾರಣೆ ವೇಳೆ ಆಫ್ತಾಬ್ ತಿಳಿಸಿದ್ದಾನೆ. ಮೇ 18 ರಂದು ಮಾದಕದ ಪ್ರಭಾವದಿಂದ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಇಬ್ಬರೂ ಹಣದ ಕೊರತೆಯನ್ನು ಎದುರಿಸುತ್ತಿರುವ ಕಾರಣ ಆಗಾಗ ಜಗಳವಾಡುತ್ತಿದ್ದರು. ಶ್ರದ್ಧಾ ಆಫ್ತಾಬ್ ಗಾಂಜಾ ಸೇದಿದ್ದಕ್ಕಾಗಿ ಆಗಾಗ್ಗೆ ಗದರಿಸುತ್ತಿದ್ದಳು. ಕೊಲೆಯ ದಿನದಂದು ಇಬ್ಬರೂ ಖರ್ಚಿನ ಬಗ್ಗೆ ದಿನವಿಡೀ ಜಗಳವಾಡುತ್ತಿದ್ದರು ಎಂದು ವಿಚಾರಣೆಯ ಸಮಯದಲ್ಲಿ ಆಫ್ತಾಬ್ ಹೇಳಿಕೊಂಡಿದ್ದಾರೆ.

ತೀವ್ರ ಮಾತಿನ ಚಕಮಕಿಯ ನಂತರ ಅಫ್ತಾಬ್ ಹೊರಗೆ ಹೋದನು. ಗಾಂಜಾವನ್ನು ಸೇವಿಸಿ ಹಿಂತಿರುಗಿದನು. ತನಗೆ ಶ್ರದ್ಧಾಳನ್ನು ಕೊಲ್ಲಲು ಇಷ್ಟವಿರಲಿಲ್ಲ. ಆದರೆ ಗಾಂಜಾ ಕುಡಿದು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಅಫ್ತಾಬ್ ಪೊಲೀಸರಿಗೆ ತಿಳಿಸಿದ್ದಾರೆ. ಮೇ 18 ರಂದು ರಾತ್ರಿ 9 ರಿಂದ 10 ಗಂಟೆಯ ನಡುವೆ ಶ್ರದ್ಧಾ ಅವರನ್ನು ಕತ್ತು ಹಿಸುಕಿ ಸಾಯಿಸಿದ್ದ. ಅಷ್ಟೇ ಅಲ್ಲ, ಅಫ್ತಾಬ್ ರಾತ್ರಿಯಿಡೀ ಗಾಂಜಾ ತುಂಬಿದ ಸಿಗರೇಟ್ ಸೇದುತ್ತಾ ದೇಹದ ಬಳಿಯೇ ಇದ್ದ ಅಂತ ತನಿಖೆ ವೇಳೆ ಗೊತ್ತಾಗಿದೆ.

ಮಾದಕ ವ್ಯಸನಿಯಾಗಿದ್ದ ಅಫ್ತಾಬ್ ಕೊಲೆಯ ನಂತರ ಅಫ್ತಾಬ್ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಅವುಗಳನ್ನು 300 ಲೀಟರ್ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ ಮೆಹ್ರೌಲಿ ಅರಣ್ಯದಲ್ಲಿ ಹಲವಾರು ಸ್ಥಳಗಳಲ್ಲಿ ಎಸೆದಿದ್ದಾನೆ. ಅನುಮಾನ ಬಾರದಂತೆ ರಕ್ತದ ಕಲೆಗಳು ಆತ ಡೆಟಾಲ್‌ನಿಂದ ವರೆಸಿದ್ದ ಎನ್ನಲಾಗಿದೆ.

ಶ್ರದ್ಧಾ ಸೋಶಿಯಲ್ ಮೀಡಿಯಾ ಪರಿಶೀಲನೆ ನಡೆಸಿರುವ ಪೊಲೀಸರಿಗೆ ಹೊಸ ಮಾಹಿತಿ ತಿಳಿದು ಬಂದಿದೆ. ಶ್ರದ್ಧಾ ಅಪ್ಲೋಡ್ ಮಾಡಿದ ಹಳೆಯ ಫೋಟೋದಲ್ಲಿ ಮುಖದ ಮೇಲೆ ಗಾಯ ಪತ್ತೆಯಾಗಿದೆ. ಮುಖದ ಮೇಲೆ ಗಾಯ, ಊದಿಕೊಂಡ ಕಣ್ಣುಗಳು, ಮೂಗಿನ ಮೇಲೆಯೂ ಗಾಯದ ಗುರುತು ಹೊಂದಿರುವ ಫೋಟೋಗಳನ್ನು 2020ರಲ್ಲಿ ಶ್ರದ್ಧಾ ಅಪ್ಲೋಡ್ ಮಾಡಿದ್ದಾಳೆ. ಹೀಗಾಗಿ ಅಫ್ತಾಬ್ ಈ ಹಿಂದೆಯೂ ಶ್ರದ್ಧಾ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ನಾ ಎಂಬ ಅನುಮಾನ ಮೂಡಿದೆ. ಸದ್ಯ ಹತ್ಯೆ ಸಂಬಂಧ ಸಾಕಷ್ಟು ಮಾಹಿತಿ ಕಲೆಹಾಕಿರುವ ಪೊಲೀಸರು, ಬಿಸಾಡಲಾಗಿರುವ ದೇಹದ ಭಾಗಗಳನ್ನು ಹುಡುಕಾಟ ಮಾಡ್ತಿದ್ದಾರೆ.

RELATED ARTICLES

Related Articles

TRENDING ARTICLES