Wednesday, January 22, 2025

ಸಿಎಂ ಬೊಮ್ಮಾಯಿ ಪ್ರಕರಣದ ಕಿಂಗ್​ಪಿನ್ : ರಣದೀಪ್​ ಸಿಂಗ್​ ಸುರ್ಜೇವಾಲ

ಬೆಂಗಳೂರು : ಮತದಾರರ ಮಾಹಿತಿ ಕಳವು ಪ್ರಕಣರದಲ್ಲಿ ಸಿಎಂ ಬೊಮ್ಮಾಯಿ ಕಿಂಗ್​ಪಿನ್. ಇದರಲ್ಲಿ ದೊಡ್ಡ ಸ್ಕ್ಯಾಮ್ ನಡೆದಿದೆ ಎಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲ ಗುಡುಗಿದ್ದಾರೆ.

ನಗರದಲ್ಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಭಾಗಿ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳು ಸಿಕ್ಕಿವೆ. ಯಾಕೆ ಇನ್ನೂ ಸಿಎಂ ಮೇಲೆ FIR ಆಗಿಲ್ಲ. ಸಿಎಂ ಅವ್ರೇ ಬೆಂಗಳೂರು ಉಸ್ತುವಾರಿಯಾಗಿದ್ದಾರೆ. ಬಿಬಿಎಂಪಿ ಚೀಫ್ ಕಮಿಷನರ್ ಮೇಲೆ ಕ್ರಮ ಯಾಕಿಲ್ಲ. ಬಿಎಲ್ಓಗಳ ಮೇಲೆ ಕ್ರಮ ಜರುಗಿಸಿದ್ರೆ ಏನು ಪ್ರಯೋಜನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, ಬೊಮ್ಮಾಯಿ ಈ ಪ್ರಕರಣದ ರಿಯಲ್ ಕಿಂಗ್​ಪಿನ್. ಸಾವಿರ ಸುಳ್ಳುಗಳನ್ನು ಹೇಳ್ತಿದ್ದಾರೆ. ಕರ್ನಾಟಕದ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ. ಒಂದು ಕಡೆ ಇದು ಸುಳ್ಳು ಆರೋಪ ಅಂತಾರೆ, ಇನ್ನೊಂದು ಕಡೆ ತನಿಖೆ ಮಾಡಿಸ್ತೀವಿ ಅಂತಾರೆ. ಯಾವುದಾದರೂ ಪೊಲೀಸ್ ಆಫೀಸರ್ ಸಿಎಂ ವಿರುದ್ದ ಹೋಗ್ತಾರಾ? ಚಿಲುಮೆ ಸಂಸ್ಥೆ ವಿರುದ್ದ ಯಾಕೆ FIR ಆಗ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES