Sunday, November 17, 2024

ರಸ್ತೆ ರಿಪೇರಿ ಮಾಡದಿದ್ರೆ ಪ್ರತಾಪ್ ಸಿಂಹ ನಿವಾಸದ ಮುಂದೆ ಧರಣಿ; ಶಾಸಕ ಪುಟ್ಟರಾಜು ಎಚ್ಚರಿಕೆ

ಮಂಡ್ಯ; ಬೆಂಗಳೂರು ಮೈಸೂರು ಕಾಮಗಾರಿ ಬಹುತೇಕ ಅಂತ್ಯವಾಗಿದೆ. ಹೆದ್ದಾರಿ ಕೆಲಸ ಮುಗಿದ ಬಳಿಕ ರಸ್ತೆ ದುರಸ್ಥಿ ಮಾಡಿಸಿ ಕೊಡುವುದಾಗಿ ಸಂಸದ ಪ್ರತಾಪ್​ ಸಿಂಹ ಮಾತು ನೀಡಿದ್ರೂ ರಸ್ತೆ ರಿಪೇರಿ ಮಾಡಿಲ್ಲ. ಸಂಸದ ಪ್ರತಾಪ್ ಸಿಂಹ ಮಾತು ಉಳಿಸಿಕೊಳ್ಳದೆ ಹೋದ್ರೆ ಪ್ರತಿಭಟನೆ ನಡೆಸುವುದಾಗಿ ಪಾಂಡವಪುರದಲ್ಲಿ ಶಾಸಕ ಪುಟ್ಟರಾಜು ಎಚ್ಚರಿಕೆಯನ್ನ ನೀಡಿದ್ದಾರೆ.

ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪುಟ್ಟರಾಜು ಅವರು, ಭಾರೀ ಗಾತ್ರದ ವಾಹನಗಳು ಸಂಚರಿಸಿ ಮೇಲುಕೋಟೆ ಕ್ಷೇತ್ರದ ಬಹುತೇಕ ರಸ್ತೆಗಳು ಹಾಳಾಗಿ ಹೋಗಿದೆ. ಹೆದ್ದಾರಿ ಕಾಮಗಾರಿ ಅವೈಜ್ಞಾನವಾಗಿದೆ ಸಾವಿರಾರು ಜನರ ಅನ್ನ ಕಿತ್ತುಕೊಂಡಿದೆ. ಕಳಪೆ ಕಾಮಗಾರಿ ಅನ್ನೋದು ಈಗ ಬಟಾ ಬಯಲಾಗಿದೆ. ಈ ರಸ್ತೆಗಳನ್ನ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಸಂಸದರ ಮನೆ ಮುಂದೆ ಧರಣಿ ಕುಳಿತು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.

ಇನ್ನು ಕೆ.ಆರ್.ಎಸ್ ಬೃಂದಾವನಕ್ಕೆ ಚಿರತೆ ನುಗ್ಗಿ ಆತಂಕ ಸೃಷ್ಠಿಸಿದ್ದ ಪ್ರಕರಣಕ್ಕೆ ಮಾತನಾಡಿ, ಕಳೆದ 15 ದಿನಗಳಿಂದ ಪ್ರವಾಸಿಗರಿಗೆ ನಿರ್ಭಂದ ಹೇರಲಾಗಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಸಮಯ ವ್ಯರ್ಥ ಮಾಡ್ತಾಯಿದ್ದಾರೆ. ಅರಣ್ಯ ಇಲಾಖೆಯವರಿಗೆ ಮಾನ ಮರ್ಯಾದೆ ಇಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿದೆ. ಈ ಜಿಲ್ಲೆಯಲ್ಲಿ ಬರುವ 7 ವಿಧಾನಸಭಾ ಕ್ಷೇತ್ರದಲ್ಲಿ 7 ರಲ್ಲೂ ಗೆಲವು ಸಾಧಿಸುತ್ತೇವೆ. ಕಳೆದ ಬಾರಿ ಕಾಂಚಾಣದ ಬಲದಿಂದ ಚುನಾವಣೆಯನ್ನ ಕೆ.ಆರ್ ಪೇಟೆಯಲ್ಲಿ ಬಿಜೆಪಿ ನಾಯಕರು ಗೆದ್ದಿದ್ದಾರೆ. ಈ ಬಾರಿ ಹಾಗೆ ಆಗೋಲ್ಲ ಕೆ.ಆರ್ ಪೇಟೆಯಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎಂದರು.

RELATED ARTICLES

Related Articles

TRENDING ARTICLES