Monday, December 23, 2024

ಮಂಗಳೂರಿನ ನಾಗುರಿಯಲ್ಲಿ ನಿಗೂಢ ಸ್ಫೋಟ

ಮಂಗಳೂರು :  ಚಲಿಸುತ್ತಿದ್ದ ಆಟೋದಲ್ಲಿ ದಿಢೀರ್ ನಿಗೂಢ ಸ್ಫೋಟವಾಗಿದ್ದು, ಕಂಕನಾಡಿ ಪೊಲೀಸ್ ಠಾಣೆ ಬಳಿ ಘಟನೆ ಸಂಭವಿಸಿದ್ದು, ಸ್ಫೋಟದ ತೀವ್ರತೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್‌ ಹಾಗೂ ವಿಧಿವಿಜ್ಞಾನ ಇಲಾಖೆಯ ತಜ್ಞರು ಹಾಗೂ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಛಿದ್ರಗೊಂಡ ಕುಕ್ಕರ್​ ಪತ್ತೆಯಾಗಿದ್ದು, ಬ್ಲಾಸ್ಟ್​ ಆಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಫೋಟಕ್ಕೆ ಕಾರಣವೇನು ಎಂದು ತನಿಖೆ ಬಳಿಕ ಗೊತ್ತಾಗಲಿದೆ. ಈ ಬಗ್ಗೆ ಮಾತನಾಡಿದ ಪೊಲೀಸ್ ಆಯುಕ್ತ ಶಶಿಕುಮಾರ್‌, ಪ್ರಯಾಣಿಕ ಹತ್ತಿದ ಬಳಿಕ ಆಟೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಆಟೋದಲ್ಲಿ ತೆರಳುತ್ತಿದ್ದ ಪ್ರಯಾಣಿಕನ ಬಳಿ ಬ್ಯಾಗ್‌ ಇತ್ತು ಎನ್ನಲಾಗಿದ್ದು. ಘಟನೆಯಲ್ಲಿ ಪ್ರಯಾಣಿಕ ಹಾಗೂ ಚಾಲಕನಿಗೆ ಗಾಯವಾಗಿದೆ. ಸಾರ್ವಜನಿಕರಿಗೆ ಯಾವುದೇ ಆತಂಕ ಬೇಡ ಎಂದು ಅಭಯ ನೀಡಿದರು. ನಾಗುರಿಯಿಂದ ಪಂಪ್ ವೆಲ್ ಕಡೆ ಆಟೋ ಸಾಗುತಿತ್ತು. ನಾಗುರಿಯಿಂದ ಹತ್ತಿದ ಪ್ರಯಾಣಿಕನ ಕೈಯಲ್ಲಿದ್ದ ಪ್ಲ್ಯಾಸ್ಟಿಕ್ ಬ್ಯಾಗ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬ್ಯಾಗ್ ಹಿಡಿದುಕೊಂಡ ವ್ಯಕ್ತಿಗೆ ಬೆಂಕಿ ತಗುಲಿದ್ದು, ಆಟೋ ಒಳಭಾಗ ಸುಟ್ಟು ಹೋಗಿದೆ. ಪ್ರಯಾಣಿಕ ಹಾಗೂ ಆಟೋ ಚಾಲಕನಿಗೆ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES

Related Articles

TRENDING ARTICLES