Wednesday, January 22, 2025

ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್.ಡಿ.ಕೆ.ಶಕ್ತಿ ಪ್ರದರ್ಶನ

ಕೋಲಾರ : HD ಕುಮಾರಸ್ವಾಮಿಯ ಮಹತ್ವಾಕಾಂಕ್ಷೆ ಪಂಚರತ್ನ ರಥಯಾತ್ರೆ ಬಂಗಾರಪೇಟೆಯ ತಂಬಿಹಳ್ಳಿಯಿಂದ ಆರಂಭವಾಯ್ತು. ಈ ಕಾರ್ಯಕ್ರಮದ ಮೂಲಕ ದಳಪತಿಗಳು ದಾರಿಯುದ್ದಕ್ಕೂ ಜೆಡಿಎಸ್ ಪಕ್ಷದ ಶಕ್ತಿ ಪ್ರದರ್ಶನ ಮಾಡಿದ್ರು. ಪ್ರತಿ ಗ್ರಾಮದಲ್ಲೂ ಜನರ ಅಹವಾಲುಗಳನ್ನು ಸ್ವೀಕರಿಸಿದ್ರು. ಅದೇ ರೀತಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ HDK ಭರವಸೆ ನೀಡಿದ್ರು.

ಶುಕ್ರವಾರ ಕುಮಾರಸ್ವಾಮಿ ಮಿಟ್ಟೂರಿನಲ್ಲಿ ಗ್ರಾಮವಾಸ್ತವ್ಯ ಹೂಡಿದ್ರು. ಬೆಳಗ್ಗೆ ಅಲ್ಲಿ ಸರ್ಕಾರಿ ಅನುದಾನಿತ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಬೆಳಗಿನ ಉಪಹಾರ ಸೇವಿಸಿದ್ರು. ನಂತರ ಅಲ್ಲಿನ ವಿದ್ಯಾರ್ಥಿಗಳು ನಮ್ಮ ಊರಿಗೆ ಒಂದು ಬಸ್ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದ್ರು. ಇದಕ್ಕೆ ಸ್ಪಂದಿಸಿದ ಮುಳಬಾಗಿಲಿನ ಸಮೃದ್ಧಿ ಮಂಜುನಾಥ್ ಕುಮಾರಸ್ವಾಮಿ ಅವರ ಜನ್ಮದಿನೊಂದು ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಆಶ್ವಾಸನೆ ನೀಡಿದ್ರು.

ಇನ್ನು ಬಂಗಾರಪೇಟೆಯ ತಂಬಿಹಳ್ಳಿಗೆ ಕುಮಾರಸ್ವಾಮಿ ರಥಯಾತ್ರೆ ಮೂಲಕ ಎಂಟ್ರಿಯಾಗುತ್ತಿದ್ದಂತೆ ಕ್ರೇನ್ ಸೇಬಿನ ಹಾರಹಾಕುವ ಮೂಲಕ ಭರ್ಜರಿ ಸ್ವಾಗತ ಕೊರಿದ್ರು. ಅದೇ ರೀತಿ ಪ್ರತಿ ಹಳ್ಳಿಯಲ್ಲೂ ಆರತಿ ಹೂವಿನ ಸುರಿಮಳೆ ಮೂಲಕ ಸ್ವಾಗತ ಕೊರಿದ್ರು. ಇನ್ನು ಪ್ರತಿ ಹಳ್ಳಿಯಲ್ಲೂ ದಳಪತಿಗಳ ಮುಂದೆ ತಮ್ಮ ಗ್ರಾಮದ ಸಮಸ್ಯೆಗಳನ್ನು ಹೇಳಿ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ರು. ಪ್ರತಿ ಹಳ್ಳಿಯಲ್ಲೂ ಕುಮಾರಸ್ವಾಮಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಒಂದು ಬಾರೀ ಸ್ವಾತಂತ್ರದ 5 ವರ್ಷ ಅಧಿಕಾರ ನೀಡಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಒದಗಿಸುತ್ತೇನೆ. ಈ ಪಂಚರತ್ನ ಯೋಜನಗಳು ಪ್ರತಿಹಳ್ಳಿಗೂ ಮುಟ್ಟುವಂತೆ ಮಾಡುತ್ತೇನೆ ಇಲ್ಲವಾದರೇ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಆಶ್ವಾಸನೆ ಮತ್ತು ಸವಾಲು ಹಾಕಿದ್ರು. ಇನ್ನು ಇಂದು ಸಂಜೆ ಹೆಚ್ಡಿಕೆ ಮಾಗೇರಿಯಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.

ಒಟ್ಟಿನಲ್ಲಿ ಎರಡನೇ ದಿನದ ಪಂಚರತ್ನ ರಥಯಾತ್ರೆಗೆ ಒಳ್ಳೆಯ ಸ್ಪಂದನೆ ಸಿಕ್ಕಿದೆ.‌ ಕುಮಾರಸ್ವಾಮಿ ಕೂಡ ಅಹವಾಲುಗಳನ್ನು ಸ್ವೀಕರಿ ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಈಡೇರಿಸುವ ಭರವಸೆ ನೀಡಿದ್ರು‌.‌ ಆದ್ರೆ ಸಾರ್ವಜನಿಕರು ಮುಂದಿನ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ಮತ ನೀಡಿ ಬಹುಮತ ಕೊಡುತ್ತಾರೆ ಎಂದು ಕಾದುನೋಡಬೇಕು.

ರೂಪೇಶ್ ಬೈಂದೂರು ಪವರ್ ಟಿವಿ ಕೋಲಾರ

RELATED ARTICLES

Related Articles

TRENDING ARTICLES