Wednesday, January 22, 2025

ಅಹವಾಲು ಸ್ವೀಕರಿಸಿ, ಹೆಚ್.ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ

ಕೋಲಾರ: ಮೊದಲ ದಿನದ ಪಂಚರತ್ನ ಯಾತ್ರೆ ಮುಗಿಸಿಕೊಂಡು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಊರುಕುಂಟೆಯ ಮಿಟ್ಟೂರಿನಲ್ಲಿ‌ ಗ್ರಾಮವಾಸ್ತವ್ಯ ಮಾಡಿದ್ದಾರೆ.

ನಿನ್ನೆ ತಡರಾತ್ರಿ 12 ಗಂಟೆ ವರೆಗೂ ಊರುಕುಂಟೆಯ ಮಿಟ್ಟೂರಿನಲ್ಲಿ‌ ಗ್ರಾಮದಲ್ಲಿ ಗ್ರಾಮಸ್ಥರ ‌ಅಹವಾಲನ್ನ ಹೆಚ್​ಡಿಕೆ ಸ್ವೀಕಾರಿಸಿ, ಜಿಡಿಎಸ್​ ಸಮ್ಮುಖದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜೆಡಿಎಸ್​ ಮುಖಂಡ ಭೋಜೇಗೌಡರಿಂದ ಹಾಡು ಹಾಡಿಸಿ ಮುಖಂಡರನ್ನ ಹುರಿದುಂಬಿಸಿದ‌ರು.

ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಮಿಟ್ಟೂರು ಬಳಿ‌ ಜರ್ಮನ್ ಟೆಂಟ್ ನಲ್ಲಿ ಮಲಗಿದರು. ಈ ವೇಳೆ ಕುಮಾರಸ್ವಾಮಿಗೆ ಎಂಎಲ್ಸಿ ಭೋಜೇಗೌಡ, ಗೋವಿಂದರಾಜು‌ ಸೇರಿ ಹಲವರು ಸಾಥ್ ನೀಡಿದರು.

ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಪಂಚರತ್ನ‌ ಕಾರ್ಯಕ್ರಮ ಇಂದು ಬೆಳಿಗ್ಗೆ ‌ಎರಡನೇ ದಿನವಾಗಿದ್ದು, ಇಂದು ಸಹ ಪಂಚರತ್ನಯಾತ್ರೆಯಲ್ಲಿ ಭಾಗಿ ಕಾರ್ಯಕ್ರಮದಲ್ಲಿ ಹೆಚ್​ಡಿಕೆ ಭಾಗಿಯಾಗಲಿದ್ದಾರೆ.

RELATED ARTICLES

Related Articles

TRENDING ARTICLES