ಇಂದೋರ್: ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶದ ಇಂದೋರ್ಗೆ ಆಗಮಿಸುತ್ತಿದ್ದಂತೆ ಬಾಂಬ್ ಬೆದರಿಕೆಯೊಡ್ಡಿರುವ ಪತ್ರವೊಂದು ಇಂದೋರ್‌ನಲ್ಲಿರುವ ಅಂಗಡಿಯೊಂದಕ್ಕೆ ತಲುಪಿಸಲಾಗಿದೆ.
ಗುರುವಾರ ಸಂಜೆ ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಅಂಗಡಿಯೊಂದಕ್ಕೆ ತಲುಪಿಸಲಾದ ಪತ್ರದಲ್ಲಿ, ನವೆಂಬರ್ 28 ರಂದು ನಗರದ ಸ್ಟೇಡಿಯಂನಲ್ಲಿ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಬರಲಿದ್ದು, ರಾಹುಲ್ ಬೆಂಬಲಿಗರು ಉಳಿದುಕೊಂಡರೆ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.
ಈ ಪತ್ರವನ್ನು ಅಂಗಡಿಯ ಮಾಲೀಕ ಅಜಯ್ ಸಿಂಗ್ ಪೊಲೀಸರಿಗೆ ಹಸ್ತಾಂತರಿಸಿದ್ದು, ತನಿಖೆ ಆರಂಭಿಸಲಾಗಿದೆ. ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಗುರುವಾರ ಸಂಜೆ ನಗರದ ಜುನಿ ಪ್ರದೇಶದ ಸಿಹಿ ತಿಂಡಿ ಅಂಗಡಿಯೊಂದಕ್ಕೆ ಪತ್ರ ಬಂದಿದ್ದು, ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯಲ್ಲಿ ಭಾಗವಹಿಸುವವರು ಖಾಲ್ಸಾ ಕ್ರೀಡಾಂಗಣದಲ್ಲಿ ಉಳಿದುಕೊಂಡರೆ ನಗರದಲ್ಲಿ ಬಾಂಬ್ ಸ್ಫೋಟಗಳನ್ನು ನಡೆಸಬಹುದು ಎಂದು ಪತ್ರದಲ್ಲಿ ಹೇಳಲಾಗಿದೆ ಎಂದು ಎಚ್‌ಸಿ ಮಿಶ್ರಾ ಹೇಳಿದ್ದಾರೆ.