ಮಂಗಳೂರು : ಬೆಂಗಳೂರಿನಲ್ಲಿ ಓಟರ್ಸ್ ಲೀಸ್ಟ್ನಿಂದ ಹೆಸರು ಡಿಲೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಬಿಬಿಎಂಪಿ ತನಿಖೆ ಮಾಡಲು ದೂರು ದಾಖಲು ಮಾಡಿದೆ. ಚಿಲುಮೆ ಸಂಸ್ಥೆಯಿಂದ ಏನು ಬಯಸಿದ್ದಾರೆ ಎಂದು ಗೊತ್ತಿಲ್ಲ. ಚುನಾವಣಾ ಆಯೋಗದ ಅವಶ್ಯಕತೆಗೆ ಪ್ರಕ್ರಿಯೆಯನ್ನು ಸಂಸ್ಥೆ ಮಾಡುತ್ತಿದೆ. ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷಗಳಿಗೆ ಬಿಎಲ್ಓ ನೇಮಕಕ್ಕೆ ಅವಕಾಶ ಇದೆ. ವೋಟರ್ಸ್ಗಳನ್ನು ಸೇರಿಸಲು, ಡಿಲೀಟ್ ಮಾಡಲು ನಮಗೆ ಅವಕಾಶ ಇಲ್ಲ.
ನನ್ನ ಕ್ಷೇತ್ರ ಸಂಬಂಧ ಯಾವುದಾದರೂ ಬಂದಿದೆಯಾ..? ನನಗೆ ಇದರ ಅವಶ್ಯಕತೆ ಇಲ್ಲ. ಬಾಡಿಗೆಗೆ ಜನ ಬೇಕಾಗೋದು ಕಾಂಗ್ರೆಸ್ ಪಕ್ಷಕ್ಕೆ, ಅದು ಕಾರ್ಯಕರ್ತರಿಲ್ಲದ ಪಕ್ಷ. ಎಲೆಕ್ಟೋರಲ್ ಮಾಲ್ ಪ್ರ್ಯಾಕ್ಟೀಸ್ ಕಾಂಗ್ರೆಸ್ಗೆ ಬೇಕು. ಅಸ್ತಿತ್ವ, ಸಿದ್ದಾಂತ, ಕಾರ್ಯಕರ್ತರು ಇಲ್ಲದ ಪಕ್ಷ ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ.