Wednesday, January 22, 2025

ರಶ್ಮಿಕಾ ಮಂದಣ್ಣ ಬಾಲಿವುಡ್ ಮಿಷನ್ ಉಲ್ಟಾ ಆಗಿದ್ಯಾಕೆ..?

ಕಿರಿಕ್ ಪಾರ್ಟಿಯಿಂದ ಶುರುವಾದ ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ವಿಜಯಯಾತ್ರೆ, ಆಕೆ ನ್ಯಾಷನಲ್ ಕ್ರಶ್ ಪಟ್ಟ ಅಲಂಕರಿಸೋವರೆಗೂ ಬಂದು ನಿಂತಿದೆ. ಟಾಪು ಟಕ್ಕರ್ ಅಂತ ಯಶ್ ರಾಜ್ ಫಿಲಂಸ್​ ಮುಖೇನ ಬಾಲಿವುಡ್​ಗೆ ಕಾಲಿಟ್ಟ ರಶ್ಮಿಕಾಗೆ ಬಿಟೌನ್ ಮಿಷನ್ ಉಲ್ಟಾ ಹೊಡೆಯುತ್ತಿದೆ. ಇಷ್ಟಕ್ಕೂ ಕನ್ನಡತಿಗೆ ಹಿನ್ನಡೆ ಆಗಿದ್ಯಾಕೆ ಅಂತೀರಾ..? ನೀವೇ ಓದಿ.

  • ಥಿಯೇಟರ್ ಬಿಟ್ಟು ಡೈರೆಕ್ಟ್ OTT ರಿಲೀಸ್​ನತ್ತ ಮಿಷನ್ ಮಜ್ನು
  • ಗುಡ್ ಬೈ, ಥ್ಯಾಂಕ್ ಗಾಡ್ ಫ್ಲಾಪ್.. ಹಿಂದಿಗೆ ಐರೆನ್ ಲೆಗ್..?
  • ಕನ್ನಡತಿ ರಶ್ಮಿಕಾಗೆ ಮೊದಲ ಬಾರಿ ಸೋಲಿನ ಕಹಿ ಅನುಭವ..!

ಕರ್ನಾಟಕ ಕ್ರಶ್ ರಶ್ಮಿಕಾ ಮುಂದೆ ಎಂಥದ್ದೇ ಹೀರೋಯಿನ್ ಇದ್ರೂ ಇವ್ರೇ ನಂಬರ್ ಒನ್. ನಿರ್ಮಾಪಕರ ಪಾಲಿಗೆ ಚಿನ್ನದ ಮೊಟ್ಟೆ ಇಡೋ ಕೋಳಿಯಾಗಿದ್ದಾರೆ ಈ ಚೆಲುವೆ. ಸೂಪರ್ ಸ್ಟಾರ್ಸ್​ ಇಷ್ಟ ಪಡೋ ಲಕ್ಕಿ ಚಾರ್ಮ್​. ಈಕೆ ಸಿನಿಮಾದಲ್ಲಿದ್ರೆ ಆ ಸಿನಿಮಾ ಸೂಪರ್ ಹಿಟ್ ಆಗೋದು ಪಕ್ಕಾ ಅನ್ನುವಂತಹ ವರ್ಚಸ್ಸು ಈ ಕೂರ್ಗ್​ ಬ್ಯೂಟಿಯದ್ದು.

ರಕ್ಷಿತ್ ಶೆಟ್ಟಿಯ ಕಿರಿಕ್ ಪಾರ್ಟಿಯಿಂದ ಶುರುವಾದ ಇವ್ರ ಜರ್ನಿ, ಪಕ್ಕದ ತೆಲುಗು, ತಮಿಳು ಚಿತ್ರರಂಗಳಿಗೂ ಹಬ್ಬಿತು. ಕರ್ನಾಟಕ ಕ್ರಶ್, ಸೌತ್ ಕ್ರಶ್ ಆದ್ರು. ಅಷ್ಟರಲ್ಲೇ ಈಕೆಯ ಸಿನಿಮಾಗಳು ಬಾಲಿವುಡ್​ನಲ್ಲಿ ಡಬ್ ಆಗಿ ಯೂಟ್ಯೂಬ್​ನಲ್ಲಿ ಮನೋಜ್ಞ ಅಭಿನಯದಿಂದ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಶುರುವಾಯ್ತು. ಅಷ್ಟರಲ್ಲೇ ಯಶ್ ರಾಜ್ ಫಿಲಂಸ್ ರಶ್ಮಿಕಾರನ್ನ ಇಟ್ಕೊಂಡು ಟಾಪ್ ಟಕ್ಕರ್ ಅನ್ನೋ ಆಲ್ಬಮ್ ಸಾಂಗ್ ಮಾಡಿತು.

ಬಾಲಿವುಡ್ ಬೆಡಗಿಯರಿಗೆಲ್ಲಾ ಟಾಪ್ ಲೆವೆಲ್​ನಲ್ಲಿ ಟಕ್ಕರ್ ಕೊಡೋ ಗ್ಲಾಮರ್ ಡಾಲ್ ಆಗಿ ಮಿಂಚ್ತಾರೆ ಅಂತ ಎಲ್ರೂ ಅಂದುಕೊಂಡಿದ್ರು. ಆದ್ರೆ ಲೆಕ್ಕಾಚಾರಗಳೆಲ್ಲಾ ಉಲ್ಟಾ ಪಲ್ಟಾ ಆಗ್ತಿವೆ. ಸಿದ್ದಾರ್ಥ್ ಮಲ್ಹೋತ್ರ ಜೊತೆಗೆ ಈಕೆ ನಟಿಸಿದ ಚೊಚ್ಚಲ ಹಿಂದಿ ಸಿನಿಮಾ ಮಿಷನ್ ಮಜ್ನು ಪದೇ ಪದೆ ರಿಲೀಸ್ ಡೇಟ್ ಪೋಸ್ಟ್​ಪೋನ್ ಮಾಡಿಕೊಳ್ಳುತ್ತಲೇ ಬರ್ತಿದೆ.

ಶೇರ್​ಶಾಹ್ ಸಿನಿಮಾದ ಬಿಗ್ಗೆಸ್ಟ್ ಹಿಟ್ ಬಳಿಕ ಸಿದ್ಧಾರ್ಥ್ ಮುಂದಿನ ಸಿನಿಮಾಗಳ ಬೇಡಿಕೆ ಹೆಚ್ಚಾಗಿತ್ತು. ಆದ್ರೀಗ ರಶ್ಮಿಕಾಗೆ ಬಹುದೊಡ್ಡ ಹಿನ್ನಡೆ ಆಗ್ತಿದೆ. ಕಾರಣ ಆಕೆಯ ಮೊದಲ ಹಿಂದಿ ಸಿನಿಮಾ, ಥಿಯೇಟರ್​ಗೆ ಬಾರದೆ, ಡೈರೆಕ್ಟ್ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಅದನ್ನ ಸ್ವತಃ ಚಿತ್ರತಂಡವೇ ಘೋಷಿಸಿದ್ದು, ನೆಟ್​ಫ್ಲಿಕ್ಸ್​ಗೆ ಲಗ್ಗೆ ಇಡಲಿದೆ ಈ ಬಹುನಿರೀಕ್ಷಿತ ಸಿನಿಮಾ.

ಅಂದಹಾಗೆ ನಿರ್ಮಾಪಕರು ಈ ನಿರ್ಧಾರ ತೆಗೆದುಕೊಳ್ಳೋದ್ರ ಹಿಂದೆ ರಶ್ಮಿಕಾರ ಎರಡು ಬಾಲಿವುಡ್ ಫ್ಲಾಪ್ಸ್ ಕಾರಣ ಅನ್ನೋದು ಮೇಲ್ನೋಟಕ್ಕೆ ಕಂಡು ಬರ್ತಿದೆ. ಹೌದು.. ಬಿಗ್​ಬಿ ಅಮಿತಾಬ್ ಜೊತೆಗೆ ನಟಿಸಿದ ಗುಡ್ ಬೈ ಸಿನಿಮಾ ಥಿಯೇಟ್ರಿಕಲ್ ರಿಲೀಸ್ ಆದ್ರೂ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಲಿಲ್ಲ. ನಿರೀಕ್ಷೆ ಹುಸಿಯಾಗಿ, ಸಿನಿಮಾ ಬಹುಬೇಗ ನೆಲ ಕಚ್ಚಿತು.

ಅಕ್ಟೋಬರ್​ನಲ್ಲಿ ತೆರೆಕಂಡ ಥ್ಯಾಂಕ್ ಗಾಡ್ ಸಿನಿಮಾ ಕೂಡ ಅಂದುಕೊಂಡಂತೆ ಗೆಲುವು ಸಾಧಿಸಲಿಲ್ಲ. ಹಾಗಾಗಿ ರಶ್ಮಿಕಾ ಆರಂಭದ ದಿನಗಳಲ್ಲೇ ಬಾಲಿವುಡ್ ಪಾಲಿಗೆ ಐರೆನ್ ಲೆಗ್ ಆದ್ರಾ ಅನ್ನೋದು ಹಲವರ ಲೆಕ್ಕಾಚಾರವಾಗಿದೆ. ಆದೇನೇ ಇರಲಿ, ಹಂತ ಹಂತವಾಗಿ ಬೆಳೆದು ಬಾಲಿವುಡ್ ಸಿಂಹಾಸನ ಅಲಂಕರಿಸೋಕೆ ಹೋಗಿರೋ ರಶ್ಮಿಕಾಗೆ ಹೀಗೆ ಹಿನ್ನಡೆ ಆಗಿರೋದು ನಿಜಕ್ಕೂ ಬೇಸರದ ಸಂಗತಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES