Wednesday, January 22, 2025

ಭಾರತ-ನ್ಯೂಜಿಲೆಂಡ್ ಮೊದಲ ಟಿ-20 ಪಂದ್ಯ ರದ್ದು

ನ್ಯೂಜಿಲೆಂಡ್​: ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಬೇಕಿದ್ದ ಮೊದಲ ಟಿ-20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

ಇಂದು ನ್ಯೂಜಿಲೆಂಡ್​ನ ವೆಲ್ಲಿಂಗ್ಟನ್ ಕ್ರಿಕೆಟ್​ ಮೈದಾನದಲ್ಲಿ ಮಧ್ಯಾಹ್ನ 12 ಕ್ಕೆ ಆರಂಭವಾಗಬೇಕಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ-20 ಪಂದ್ಯ ಮಳೆ ಕಾರಣಕ್ಕೆ 2 ಗಂಟೆ ಮುಂದೂಡಲಾಯಿತು. ಆದರೆ, 2 ಗಂಟೆ ನಂತರ ಮಳೆ ನಿಲ್ಲದ ಕಾರಣಕ್ಕೆ ಮೊದಲ ಟಿ-20 ಪಂದ್ಯ ರದ್ದು ಮಾಡಲಾಯಿತು. ರೋಹಿತ್​ಗೆ ವಿಶ್ರಾಂತಿ ನೀಡಿದ ಹಿನ್ನಲೆಯಲ್ಲಿ ನ್ಯೂಜಿಲೆಂಡ್​ ಸರಣಿಯನ್ನ ಹಾರ್ದಿಕ್​ ಪಾಂಡ್ಯ ಭಾರತ ತಂಡವನ್ನ ಮುನ್ನಡೆಸಲಿದ್ದಾರೆ.

ಭಾರತ-ನ್ಯೂಜಿಲೆಂಡ್​ ನಡುವೆ ಒಟ್ಟು 3 ಟಿ-20 ಪಂದ್ಯ ನಡೆಯಲಿದ್ದು, ಎರಡನೇ ಪಂದ್ಯ ಭಾನುವಾರ(ನ.20) ನ್ಯೂಜಿಲೆಂಡ್​ನ ಮೌಂಟ್ ಮೌಂಗನುಯಿ ಕ್ರಿಕೆಟ್​ ಮೈದಾನದಲ್ಲಿ ನಡೆಯಲಿದೆ.

RELATED ARTICLES

Related Articles

TRENDING ARTICLES