Wednesday, January 22, 2025

ಮೊದಲ ಟಿ-20 ಪಂದ್ಯಕ್ಕೆ ಮಳೆ ಅಡ್ಡಿ; ತಡವಾಗಿ ಆರಂಭವಾಗಲಿದೆ ಪಂದ್ಯ

ನ್ಯೂಜಿಲೆಂಡ್​: ಇಂದು ನ್ಯೂಜಿಲೆಂಡ್​ನ ವೆಲ್ಲಿಂಗ್ಟನ್‌ ಮೈದಾನದಲ್ಲಿ ಆರಂಭವಾಗಬೇಕಿದ್ದ ಭಾರತ-ನ್ಯೂಜಿಲೆಂಡ್ ಮೊದಲ ಟಿ-20 ಪಂದ್ಯದಲ್ಲಿ ಮಳೆ ಅಡ್ಡಿಯಾಗಿದೆ. ಪಂದ್ಯ ಆರಂಭವಾಗಲು ಇನ್ನು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ವೆಲ್ಲಿಂಗ್ಟನ್‌ ಭಾರೀ ಮಳೆ ಆಗುತ್ತಿರೋ ಕಾರಣಕ್ಕೆ ಕ್ರಿಕೆಟ್​ ಮೈದಾನದಲ್ಲಿ ಸಂಪೂರ್ಣ ಹಾಳೆಯಿಂದ ಹೊದಿಸಲಾಗಿದೆ. ಹಾಗಾಗಿ ಭಾರತ-ನ್ಯೂಜಿಲೆಂಡ್ ನಡುವೆ ನಡೆಯಬೇಕಿದ್ದ ಟಿ-20 ಪಂದ್ಯ ತಡವಾಗಿ ಆರಂಭಿಸಲಾಗುತ್ತಿದೆ ಮಾಹಿತಿ ದೊರೆತಿದೆ.

ಟಿ-20 ವಿಶ್ವಕಪ್ 2022ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್​ ವಿರುದ್ಧ ಹೊರಬಿದ್ದ ಬಳಿಕ ಭಾರತ ತಂಡ ಮತ್ತೆ ಮೈದಾನಕ್ಕಿಳಿಯಲು ಸಿದ್ದಗೊಂಡಿದ್ದು ಕೇನ್ ವಿಲಿಯಮ್ಸನ್ ಅವರ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

RELATED ARTICLES

Related Articles

TRENDING ARTICLES