Monday, December 23, 2024

ಯಮನ ಮನೆಯಲ್ಲಿ ಕಂದಮ್ಮಗಳಿಗೆ ಶಿಕ್ಷಣ

ಹುಬ್ಬಳ್ಳಿ : ರಾಣಿ ಚೆನ್ನಮ್ಮಾ ಸರ್ಕಲ್ ನಿಂದ ಕೇವಲ ಒಂದು ಕಿಲೋಮೀಟರ್ ದೂರದ ಅಳತೆಯಲ್ಲಿ ಇರುವ ಗಿರಣಿಚಾಳ ಪ್ರದೇಶದ ಸರ್ಕಾರಿ ಕನ್ನಡ ಕಿರಿಯ ಮಕ್ಕಳ ಶಾಲೆಯ ಸ್ಥಿತಿ ಹೇಳ ತಿರದಾಗಿದೆ, ಹೊರಗಡೆ ದೂಳು ತುಂಬಿದ ರಸ್ತೆಗಳು, ಬಿಸಲಿನ ಬೆಗೆ ಹೆಚ್ಚಿಸುವ ತಗಡಿನ ಚಾವಡಿ ,ಈಗಲೂ ಆಗಲು ಬಿದ್ದು ಹೋಗವಂತಿರುವ ಕಟ್ಟಡ ಭವಿಷ್ಯದ ಪ್ರತಿಭೆಗಳ ಭವಿಷ್ಯ ಕಸಿದುಕೊಳ್ಳುತ್ತಿದೆ,ಸುಮಾರು 40 ಜನ ಮಕ್ಕಳು ಈ ಕನ್ನಡ ಶಾಲೆಯಲ್ಲಿ ಅಡ್ಮಿಷನ್ ಹೊಂದಿದ್ದರು ,ಮೂಲ ಸೌಕರ್ಯ ಇಲ್ಲದ ಕಾರಣ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದೆ ಹಾಜರಾತಿ ಕಡಿಮೆ ಆಗಿದೆ, ಈಗ ಕೇವಲ 10 ಮಕ್ಕಳ ಮಾತ್ರ ತರಗತಿಗೆ ನಿತ್ಯ ಬರುತ್ತಿದ್ದಾರೆ ಎಂದು ಶಿಕ್ಷಕರು ಅಸಮಾಧಾನ ಹೊರಹಾಕಿದ್ದಾರೆ.

ಈ ಜಾಗ ಕೂಡ ವಿವಾದಿತ ಜಾಗ ಎಂದು ಹೇಳಲಾಗುತ್ತಿದೆ, ಇದೇ ಕುಂಟು ನೆಪದಿಂದ ಜಿಲ್ಲಾಡಳಿತ ನಗರ ಪ್ರದೇಶದಲ್ಲಿ ಶಾಲೆಗಳ ಮರಮ್ಮತಿಗೆ ಕೈ ಹಾಕುತ್ತಿಲ್ಲ, ಪಾಲಿಕೆ ಕೂಡ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಈ ಶಾಲೆಯಲ್ಲಿ ಬೇಸಿಗೆಯಲ್ಲಿ ಉರಿಬಿಸಲಿನಲ್ಲಿಯೇ ಪಾಠ ಮಾಡಲಾಗುತ್ತಿದೆ. ಇನ್ನೂ, ಮಳೆಗಾಲದಲ್ಲಿ ಇವರ ಗೋಳು ಕೇಳುವವರೆ ಇಲ್ಲ.ದೊಡ್ಡ ಅನಾಹುತ ನಡೆಯುವ ಮುಂಚೆ ಇನ್ನಾದರೂ ಕ್ಷೇತ್ರ ಶಿಕ್ಷಾಣಾಧಿಕಾರಿಗಳು ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿ, ಗಟ್ಟಿಮುಟ್ಟಾದ ಕಟ್ಟಡದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವಂತಾಗಬೇಕು.

ಮಲ್ಲಿಕ್ ಬೆಳಗಲಿ ಪವರ್ ಟಿವಿ ಹುಬ್ಬಳ್ಳಿ

RELATED ARTICLES

Related Articles

TRENDING ARTICLES