Monday, December 23, 2024

ಜೆಡಿಎಸ್​ ತೊರೆದು ಬಿಜೆಪಿ ಸೇರಿದ ಮಾಜಿ‌ ಕೆಎಎಸ್ ಅಧಿಕಾರಿ ಬಳಿಗಾರ್

ಶಿವಮೊಗ್ಗ: ಮಾಜಿ ಸಿಎಂ ಎಸ್ ಬಂಗಾರಪ್ಪನವರ ಬೆಂಬಲಿಗರು ಹಾಗೂ ಮಾಜಿ‌ ಕೆಎಎಸ್ ಅಧಿಕಾರಿ ಜೆಡಿಎಸ್​ ಪಕ್ಷವನ್ನ ತೊರೆದು ಹೆಚ್.ಟಿ. ಬಳಿಗಾರ್ ಅವರು ಇಂದು ಅಧಿಕೃತವವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.

ಸೇರ್ಪಡೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್​.ಟಿ ಬಳಿಗಾರ್​ ಅವರು, ಕಳೆದ ಹಲವಾರು ವರ್ಷಗಳ ಹಿಂದೆಯೇ ನನ್ನನ್ನು ಬಿಜೆಪಿಗೆ ಯಡಿಯೂರಪ್ಪನವರು ಆಹ್ವಾನಿಸಿದ್ದರು. ಆದರೆ, ಬಿಜೆಪಿಗೆ ಕರೆಯಲು ನಮ್ಮ ಮನೆಗೆ ಬಂದಾಗ ನಾನು ನನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದೆ, ಎಲ್ಲಿ ನನ್ನನ್ನು ಬಿಜೆಪಿಗೆ ಕರೆದೊಯುತ್ತಾರೋ ಎಂದು ಹೆದರಿ ಹೋಗಿದ್ದೆ. ಆದರೆ, ಈಗ ಬದಲಾವಣೆ ರಾಜಕೀಯದ ನಿಯಮದಂತೆ ನಾನು ಬಿಜೆಪಿಗೆ ಸೇರಿದ್ದೇನೆ ಎಂದರು.

ರಾಜ್ಯದ ದೇವರಾಜು ಅರಸು ಮತ್ತು ಬಂಗಾರಪ್ಪನವರ ತತ್ವ ಸಿದ್ಧಾಂತಗಳನ್ನು ನಾನು ಅಳವಡಿಸಿಕೊಂಡಿದ್ದವನು. ಆದರೂ ವಿಶ್ವ ನಾಯಕ ಮತ್ತು ಅಭಿವೃದ್ಧಿಯ ಕೆಲವನ್ನು ಮನದಟ್ಟು ಮಾಡಿಕೊಂಡು ಬಿಜೆಪಿಗೆ ಸೇರಿದ್ದೇನೆ. ಇತ್ತೀಚಿಗೆ ಶಿಕಾರಿಪುರಕ್ಕೆ ನ್ಯಾ. ನಾಗಮೋಹನ್ ದಾಸ್ ಅವರನ್ನು ಭೇಟಿ ಮಾಡಿದ್ದ ವೇಳೆ ಶಿವಮೊಗ್ಗ ಸಂಸದ ರಾಘವೇಂದ್ರ ಸಿಕ್ಕಿದ್ದರು. ಆಗಿನ ಮಾತುಕತೆ ಫಲಪ್ರದವಾಗಿದೆ. ಸಂಸದ ರಾಘವೇಂದ್ರ ಅವರ ಬಳಿ ನಿರಂತರವಾಗಿ ಮಾತನಾಡಿಕೊಂಡು ಈಗ ಬಿಜೆಪಿಗೆ ಸೇರಿದ್ದೇನೆ ಎಂದು ಅವರು ತಿಳಿಸಿದರು.

ಸೇರ್ಪಡೆ ಬಳಿಕ ಮಾತನಾಡಿದ ಮಾಜಿ ಸಿ.ಎಂ. ಬಿ.ಎಸ್ ಯಡಿಯೂರಪ್ಪ ಅವರು, ಹೆಚ್​.ಟಿ ಬಳಿಗಾರ್ ಅವರು ನಮ್ಮ ಪಕ್ಷಕ್ಕೆ ಬಂದಿರುವುದು ಮತ್ತಷ್ಟು ಬಲ ಬಂದಂತಾಗಿದೆ. ವಾಲ್ಮೀಕಿ ಸಮಾಜದ ಹಿರಿಯ ಮುಖಂಡರಾಗಿರುವ ಇವರು ಕೆ.ಎ.ಎಸ್. ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಿಂದಿನ ರಾಜ್ಯ ಸರ್ಕಾರದಲ್ಲಿ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅನುಭವ ಅವರಿಗಿದೆ. ಇವರಿಗೆ ಹಲವಾರು ವರ್ಷಗಳ ಹಿಂದೆಯೇ ಬಿಜೆಪಿಗೆ ಆಹ್ವಾನಿಸಿದ್ದೇವು. ಈಗ ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಸೇರಿದ್ದಾರೆ. ಇವರಿಗೆ ಸೂಕ್ತ ಸ್ಥಾನಮಾನ ನೀಡಲು ನಾವು ಬದ್ಧರಾಗಿದ್ದೇವೆ. ಇವರನ್ನು ಬಳಸಿಕೊಂಡು ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಯಡಿಯೂರಪ್ಪ ತಿಳಿಸಿದರು.

RELATED ARTICLES

Related Articles

TRENDING ARTICLES