Tuesday, November 5, 2024

ಸಿದ್ದರಾಮಯ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಬೇಡ‌‌; ಮಾಜಿ ಸಚಿವ ಸಂತೋಷ ಲಾಡ್

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಬೇಡ‌‌. ವಯಸ್ಸು, ಇತ್ಯಾದಿ ಕಾರಣಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸೋದ ಬೇಡ. ಕಾಂಗ್ರೆಸ್​ ಪಕ್ಷವನ್ನ ಬಲಪಡಿಸುವ ಕೆಲಸ ಮಾಡಲಿ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೊಸ ಬಾಂಬ್​ ಸಿಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಸಂತೋಷ, ಸಿದ್ದರಾಮಯ್ಯ ಅವರು ಒಂದು ಕ್ಷೇತ್ರದಲ್ಲಿ ಸ್ಪರ್ದಿಸಿ, ಅಲ್ಲಿಗೆ ಸೀಮಿತ ಆಗೋದ ಬೇಡ. ಸಿದ್ಧರಾಮಯ್ಯ ಕೋಲಾರ ಮತ್ತಿತರ ಕಡೆ ಸ್ಪರ್ಧಿಸ್ತಾರೆ ಅನ್ನೋ ಮಾತು ಕೇಳಿ ಬರ್ತಿದೆ. ಸಿದ್ಧರಾಮಯ್ಯ ಅವರು ಎಲ್ಲಿ ಸ್ಪರ್ಧಿಸಿದರೂ ಗೆದ್ದೇ ಗೆಲ್ಲುತ್ತಾರೆ. ಆದರೆ ಚುನಾವಣೆ ಸ್ಪರ್ಧಿಸಿದಾಗ ಆ ಕ್ಷೇತ್ರದ ಮೇಲೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಇಡೀ ರಾಜ್ಯ ಸುತ್ತಬೇಕಿರುವುದುರಿಂದ ಅವರು ಸ್ಪರ್ದೀಸದೇ ಮಾಡದೇ ಇರೋದು ಒಳ್ಳೆಯದು. ಅದರಿಂದ ಕಾಂಗ್ರೆಸ್‌ ಪಕ್ಷಕ್ಕೇ ಲಾಭವಾಗಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಅಂತೆಯೇ ಮಾತನಾಡಿ, ಡಿ.ಕೆ ಶಿವಕುಮಾರ್ ಸಹ ಒಂದು ಕ್ಷೇತ್ರದಿಂದ ಸ್ಪರ್ದೀಸೋದು ಬೇಡ. ಅವರು ಸಹ ರಾಜ್ಯ ಸುತ್ತಾಟ ಮಾಡಿ ಪ್ರಚಾರದಲ್ಲಿ ತೊಡಗಿಸಿಕೊಂಡ್ರೆ ಒಳ್ಳೆಯದು. ಇಬ್ಬರು ನಾಯಕರು ಚುನಾವಣೆ ಸ್ಪರ್ದೀಸದೇ ಇದ್ದರೆ ಒಳ್ಳೆಯದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸ್ಪರ್ಧಿಸದೇ ಅಧಿಕಾರ ನಡೆಸಬಹುದು ಎಂದರು.

ಇನ್ನು ಧಾರವಾಡ ಜಿಲ್ಲೆಯ ಕಲಘಟಗಿ ಮತ ಕ್ಷೇತ್ರದಲ್ಲಿ ಟಿಕೇಟ್ ಫೈಟ್ ವಿಚಾರವಾಗಿ ಮಾತನಾಡಿ, ನಾಗರಾಜ ಛಬ್ಬಿ ಮತ್ತು ನಾನು ಒಳ್ಳೆಯ ಸ್ನೇಹಿತರಾಗಿದ್ದೇವೆ. ಕ್ಷೇತ್ರದಲ್ಲಿ ಅವರು ಕುಕ್ಕರ್ ಹಂಚುತ್ತಿದ್ದಾರೆ ಅನ್ನೊ ವಿಷಯ ಗೊತ್ತಾಗಿದೆ. ಅವರ ಕುಕ್ಕರ್ ಗಾಗಿ ನಾನೂ ಕಾಯುತ್ತಿದ್ದೇನೆ. ಅವರ ಹೇಳಿಕೆಯಿಂದ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಯಾಗಿರೋದು ಸತ್ಯವಾಗಿದೆ. ಕಾಂಗ್ರೆಸ್ ಟಿಕೇಟ್ ಸಿಗದಿದ್ದಲ್ಲಿ ನಾನು ಬಿಜೆಪಿ ಸೇರಲ್ಲ. ಕಾಂಗ್ರೆಸ್ ಪಕ್ಷದಲ್ಲಿಯೇ ಮುಂದುವರೆಯುತ್ತೇನೆ ಎಂದು ಸಂತೋಷ್​ ಲಾಡ್​ ಹೇಳಿದರು.

RELATED ARTICLES

Related Articles

TRENDING ARTICLES