ಬೆಂಗಳೂರು: ಅಕ್ರಮ, ಭ್ರಷ್ಟಾಚಾರದಿಂದ ಕುಖ್ಯಾತಿ ಪಡೆದಿರುವ ಬೆಂಗಳೂರು ಅಭಿವೃದ್ಧಿ ಪ್ರಧಾಕಾರದಲ್ಲಿ(ಬಿಡಿಎ) ಅಕ್ರಮಗಳು ತಡೆಯೋರೆ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮತ್ತೊಂದು ಅತೀ ದೊಡ್ಡ ಹಗರಣ ಬಯಲಾಗಿದೆ.
ಅರ್ಕಾವತಿ ಬಡಾವಣೆಯಲ್ಲಿ ಡಿನೋಟಿಫಿಕೇಷನ್ ನಡೆಸಿ ಆಯ್ತು ಇದೀಗ ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿಯೂ ಡಿನೋಟಿಫಿಕೇಷನ್ ಅಕ್ರಮ ವಾಸನೆ ಕೇಳಿಬಂದಿದೆ. ಅಕ್ರಮ ಡಿನೋಟಿಫಿಕೇಷನ್ಗೆ ಬಿಡಿಎ ಭೂಸ್ವಾಧೀನಾಧಿಕಾರಿಗಳ ಕುಮ್ಮಕ್ಕು ನಡೆದಿದ್ದು, ಸುಮಾರು 100 ಕೋಟಿಕ್ಕಿಂತ ಹೆಚ್ಚು ಮೌಲ್ಯದ ಆಸ್ತಿ ಡಿನೋಟಿಫಿಕೇಷನ್ಗೆ ಮೆಗಾ ಪ್ಲಾನ್ ನಡೆಸಿ, ಡಿನೋಟಿಫಿಕೇಷನ್ ಅಕ್ರಮದಲ್ಲಿ ಭ್ರಷ್ಟ ಕೆಎಎಸ್ ಅಧಿಕಾರಿಗಳು ತಗ್ಲಾಕೊಂಡಿದ್ದಾರೆ.
ಡಾ ಶಿವರಾಮ ಕಾರಂತ. ಬಡಾವಣೆಯಲ್ಲಿ 51 ಎಕರೆ 36. ಗುಂಟೆ ಜಾಗ ಡಿನೋಟಿಫೈ ಮಾಡಲಾಗಿದ್ದು, ಆಗಸ್ಟ್ 19 ರಂದು ಬಡಾವಣೆಗೆ ಪ್ರಾಥಮಿಕ ಅಧಿಸೂಚನೆ ಹೊರಟಿಸಿದ್ದು 245 ಎಕರೆ 16 ಗುಂಟೆ ಜಾಗದಲ್ಲಿ ಅಕ್ಟೋಬರ್19 ರಂದು ಅಂತಿಮ ಅಧಿಸೂಚನೆಗೆ ಸರ್ಕಾರಕ್ಕೆ 193 ಎಕರೆ 19 ಗುಂಟೆ ಶಿಫಾರಸ್ಸು ಮಾಡಿದೆ. ಎರಡು ತಿಂಗಳಲ್ಲಿ 51 ಎಕರೆ 36 ಗುಂಟೆ ಸ್ವಾಧೀನದಿಂದ ಕೈ ಬಿಟ್ಟಿದ್ಯಾಕೆ ಅಧಿಕಾರಿಗಳ ಭ್ರಷ್ಟಾರಕ್ಕೆ ಕುಮ್ಮಕ್ಕು ನೀಡಿದ್ರಾ ಎಂಬಂತೆ ಇದ್ರಲ್ಲಿ ಭಾವಿಸಲಾಗುತ್ತಿದೆ.
ಈ ಡಿನೋಟಿಫೈ ಭೂ ಅಕ್ರಮ ಚಕ್ರದಲ್ಲಿ ಅರ್ಧ ಡಜನ್ ಕೆಎಎಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಆರು ಭೂಸ್ವಾಧೀನಾಧಿಕಾರಿಗಳಿಗೂ ಕಾರಣ ಕೇಳಿ ಬಿಡಿಎ ಆಯುಕ್ತ ಕುಮಾರ್ ನಾಯಕ್ ಸಿಎಂ ಸೂಚನೆ ಮೇರೆಗೆ ನೋಟೀಸ್ ಜಾರಿ ನೀಡಿದ್ದಾರೆ. ಕೆಎಎಸ್ ಅಧಿಕಾರಿಗಳಾದ ಡಾ ಬಸಂತಿ, ಕವಿತಾ, ನಿಖಿತಾ, ಹರಿಶ್ ನಾಯ್ಕ್, ಪ್ರವೀಣ್, ನಂದಿನಿಗೆ ನೋಟೀಸ್ ಜಾರಿ ಮಾಡಲಾಗಿದೆ.
ಒಂದು ಎಕರೆಗೆ 2 ರಿಂದ 3 ಕೋಟಿ ಲಂಚ ಪಡೆದು 51 ಎಕರೆ 36 ಗುಂಟೆ ಜಮೀನು ಡಿನೋಟಿಫೀಕೆಶನ್ ಮಾಲು ಅಧಿಕಾರಿಗಳು ಮುಂದಾದ್ರಾ? ಬಿಡಿಎ ಭೂಸ್ವಾಧೀನಾ ವಿಭಾಗದ ಡಿಸಿ ಸೇರಿದಂತೆ ಅರ್ಧ ಡಜನ್ ಅಧಿಕಾರಿಗಳು ಡಿನೋಟಿಫೈ ಅಕ್ರಮದಲ್ಲಿ ಲಾಕ್ ಆಗ್ತಾರಾ ಕಾದುನೋಡಬೇಕಿದೆ.