Tuesday, November 5, 2024

ಆರೋಪ ಬೆನ್ನಲ್ಲೇ ಚಿಲುಮೆ ಸಂಸ್ಥೆಯ ಕಚೇರಿ ರಾತ್ರೋ ರಾತ್ರಿ ಖಾಲಿ.!

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿಯ ಮಾಹಿತಿಯನ್ನ ಕದಿಯಲಾಗಿದೆ ಎಂದು ರಾಜ್ಯ ಕಾಂಗ್ರೆಸ್​​ ಕಾಂಗ್ರೆಸ್​ ನಾಯಕ ಆರೋಪ ಮಾಡಿ ದೂರು ದಾಖಲಿಸುತ್ತಿದ್ದಂತೆ ರಾತ್ರೋರಾತ್ರಿ ಚಿಲುಮೆ ಎಂಟರ್ ಪ್ರೈಸಸ್ ಕಚೇರಿ ಖಾಲಿ ಮಾಡಲಾಗಿದೆ.

ನಿನ್ನೆ ಅಷ್ಟೇ ರಾಜ್ಯ ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಸೇರಿದಂತೆ ಇನ್ನೀತರು ಘಟಾನುಘಟಿ ನಾಯಕರು ಸುದ್ದಿಗೋಷ್ಠಿ ನಡೆಸಿ, ಬೆಂಗಳೂರಿನ ವ್ಯಾಪ್ತಿಯ ಮತದಾರ ವೈಯಕ್ತಿಕ ಮಾಹಿತಿಯನ್ನ ಸರ್ವೇ ಮಾಡಿ ಚಿಲುಮೆ ಸಂಸ್ಥೆ ಹಾಗೂ ಹೊಂಬಾಳೆ ಕಳವು ಮಾಡಿದೆ. ಇಂತಹ ಖಾಸಗಿ ಸಂಸ್ಥೆಗಳಿಗೆ ಸರ್ವೇ ಮಾಡಲು ಹಕ್ಕಿಲ್ಲ. ಕಾನೂನು ಗಾಳಿಗೆ ತೂರಿ ಇಲ್ಲಿ ರಾಜ್ಯ ಸರ್ಕಾರ ಮತದಾರರ ಸರ್ವೆ ಮಾಡಿಸಿದೆ ಎಂದು ದೂರಿದ್ದರು.

ಇದಕ್ಕೆ ಪುಷ್ಠಿಕರಿಸುವಂತೆ ಬಿಬಿಎಂಪಿಯು ಚಿಲುಮೆ ಸಂಸ್ಥೆಗೆ ಸರ್ವೆ ಕಾರ್ಯವನ್ನು ರದ್ದು ಮಾಡಿ ಆದೇಶಿಸಿತ್ತು. ಈ ಎಲ್ಲಾ ಬೆಳವಣಿಗೆ ನಡೆಯುದರೊಳಗೆ ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆ ಕಚೇರಿ ರಾತ್ರೋ ರಾತ್ರಿ ತೆರವು ಮಾಡಲಾಗಿದೆ.

ಬೆಂಗಳೂರಿನ ಮಲ್ಲೇಶ್ವರಂ 18 ಕ್ರಾಸ್ ನಲ್ಲಿ ಇದ್ದ ಚಿಲುಮೆ ಸಂಸ್ಥೆ ಕಚೇರಿ, ಕಟ್ಟಡ ಮಾಲೀಕರಿಗೆ ಮೂರು ತಿಂಗಳು ಬಾಡಿಗೆ ನೀಡದೆ ಏಕಾಏಕಿ ಕಚೇರಿ ಖಾಲಿ ಮಾಡಲಾಗಿದೆ.

RELATED ARTICLES

Related Articles

TRENDING ARTICLES