Wednesday, January 22, 2025

6 ಲಕ್ಷ ಮತದಾರರ ಹೆಸರು ಡಿಲೀಟ್

ಬೆಂಗಳೂರು : ಸಿಲಿಕಾನ್​ ಸಿಟಿ ಮತದಾರರೇ ಎಚ್ಚರ ಎಚ್ಚರ. ಮತದಾನ ಮಾಡೋದ್ರಿಂದಲೇ ನೀವು ವಂಚಿತರಾಗಬಹುದು. ಹೌದು, ನಿಮ್ಮ ಬಳಿ ವೋಟರ್ ಐಡಿ ಇದೆ ಅಂತ ನೀವು ಮತದಾನದ ದಿನ ಮತಗಟ್ಟೆಗೆ ಹೋದ್ರೆ ನಿಮಗೆ ಶಾಕ್ ಕಾದಿರುತ್ತೆ.

ಯಾಕೆಂದರೆ ಬೆಂಗಳೂರಿನಲ್ಲಿ ಸದ್ದಿಲ್ಲದೇ ಮತದಾರರ ಹೆಸರುಗಳು ಡಿಲೀಟ್ ಆಗಿವೆ. ಪ್ರತಿಷ್ಠಿತ ಏರಿಯಾಗಳಲ್ಲಿ ಮತದಾರರ ಹೆಸರುಗಳೇ ಡಿಲೀಟ್‌ ಆಗಿದ್ದು, ನಗರದಲ್ಲಿ ಒಟ್ಟು 6 ಲಕ್ಷದ 69 ಸಾವಿರ 652 ಹೆಸರು ಡಿಲೀಟ್‌ ಆಗಿವೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ 12,757, ಮಲ್ಲೇಶ್ವರ ವಿಧಾಸಭಾ ಕ್ಷೇತ್ರದಲ್ಲಿ 11,788, ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ 33,009 ಹೆಸರುಗಳು ಡಿಲೀಟ್‌ ಆಗಿವೆ.

ಇನ್ನು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ 35,829 ಹೆಸರು ಡಿಲೀಟ್‌ ಆಗಿರೋದು ಗಮನಾರ್ಹ. ಉಳಿದಂತೆ ಕೆ.ಆರ್‌.ಪುರದಲ್ಲಿ 39,763, ದಾಸರಹಳ್ಳಿಯಲ್ಲಿ 35,086 ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ 20,039 ಹೆಸರುಗಳು ಡಿಲೀಟ್‌ ಆಗಿವೆ.

RELATED ARTICLES

Related Articles

TRENDING ARTICLES