Wednesday, January 22, 2025

‘ಕೈ ಮುಖಂಡರಿಗೆ ಇದು ಶೋಭೆ ತರುವುದಿಲ್ಲ : ಬಿ.ಎಸ್. ಯಡಿಯೂರಪ್ಪ

ಶಿವಮೊಗ್ಗ : ಮತದಾರರ ಪಟ್ಟಿ ದುರ್ಬಳಕೆ ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಮಾಜಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ದುರ್ಬಳಕೆಯಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡ್ತಿದೆ. ಮುಂಬರುವ ಚುನಾವಣೆಯಲ್ಲಿ ಸೋಲು ಒಪ್ಪಿಕೊಂಡು ಕಾಂಗ್ರೆಸ್ ಈ ರೀತಿ ಆರೋಪ ಮಾಡ್ತಿದೆ. ಮುಖ್ಯಮಂತ್ರಿಯವರು ಇದಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ಈ ಚುನಾವಣೆಯಲ್ಲಿ ಸೋಲನ್ನು ಅವರು ಒಪ್ಪಿಕೊಂಡು ಈ ರೀತಿ ಆರೋಪ ಮಾಡ್ತಿರೋದು ಸ್ಪಷ್ಟವಾಗಿ ಗೊತ್ತಾಗ್ತಿದೆ. ಕಾಂಗ್ರೆಸ್ ಮುಖಂಡರಿಗೆ ಇದು ಶೋಭೆ ತರುವುದಿಲ್ಲ. ಇಷ್ಟಾದರೂ ಏನಾದರೂ ಲೋಪದೋಷ ಇದ್ದರೆ ಸರಿಪಡಿಸುವುದಾಗಿ ಸಿಎಂ ಹೇಳಿದ್ದಾರೆ.

ಇನ್ನು, ಸೂಕ್ತ ಸಾಕ್ಷ್ಯಾಧಾರ ಇದ್ದರೆ ಕೊಡಿ ತನಿಖೆ ಮಾಡಿಸೋಣ ಎಂದು ಸಿಎಂ ತಿಳಿಸಿದ್ದಾರೆ. ಕಾಂಗ್ರೆಸ್​​​ನವರಿಗೆ ಈಗಾಗಲೇ ಸೋಲು ಖಚಿತ ಎಂಬುದು ತಿಳಿದಿದೆ. ಸೋಲು ಖಚಿತ ಎಂಬ ನಿರ್ಧಾರದಿಂದ ಈ ರೀತಿ ಆರೋಪ ಮಾಡ್ತಿದ್ದಾರೆ. ನೂರಕ್ಕೆ ನೂರರಷ್ಟು ನಾವು ಸ್ಪಷ್ಟ ಬಹುಮತ ಪಡೆಯುತ್ತೇವೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರೋದು ನಿಶ್ಚಿತ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

RELATED ARTICLES

Related Articles

TRENDING ARTICLES