Sunday, December 22, 2024

‘ಅಮರಾವತಿ ಪೊಲೀಸ್ ಸ್ಟೇಷನ್’​ನಲ್ಲಿ ಜಗ್ಗೇಶ್ ಪುತ್ರ ಗುರು

ನವರಸನಾಯಕ ಜಗ್ಗೇಶ್​ ಘನತೆ, ಗೌರವಕ್ಕೆ ತಕ್ಕನಾಗಿ ಮಕ್ಕಳ ಏಳಿಗೆ ಆಗ್ತಿಲ್ಲ. ಚಿತ್ರರಂಗದಲ್ಲಿ ನೆಲೆಯೂರೋಕೆ ಸಿಕ್ಕಾಪಟ್ಟೆ ಕಷ್ಟಪಟ್ಟರೂ ಅದೃಷ್ಟ ಕೈಹಿಡಿಯುತ್ತಿಲ್ಲ. ಅದ್ರ ಮಧ್ಯೆ ಸಾಲದು ಅಂತ ಕಾಂಟ್ರವರ್ಸಿಗಳು ಬೇರೆ. ಸದ್ಯ ಜಗ್ಗಣ್ಣನ ಪುತ್ರ ಗುರು, ಅಮರಾವತಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಅರೇ ಮತ್ತೆ ಏನ್ ಎಡವಟ್ ಆಯ್ತಪ್ಪಾ ಅಂತ ಹುಬ್ಬೇರಿಸೋಕು ಮುನ್ನ ಈ ಮ್ಯಾಟರ್ ನೋಡ್ಬಿಡಿ.

  • ಸೆಟ್ಟೇರಿದ ಖಾಕಿ ಖಬರ್​​ ಸಿನಿಮಾ.. ಸಸ್ಪೆನ್ಸ್​ ಥ್ರಿಲ್ಲರ್​​​ ಹೈಲೈಟ್​​​

ಒಂದೇ ವಾರದಲ್ಲಿ ಜಗ್ಗೇಶ್​ ಫ್ಯಾಮಿಲಿ ಕಡೆಯಿಂದ ಗುಡ್​ನ್ಯೂಸ್​​​​ ಮೇಲೆ ಗುಸ್​​ನ್ಯೂಸ್​​ ಸಿಗ್ತಿದೆ. ನಟ ಕೋಮಲ್​ ಲಾಂಗ್​ ಗ್ಯಾಪ್​ ಬಳಿಕ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಡ್ತಿದ್ದಾರೆ. ನಟ ಕಮ್ ಹಾಸ್ಯನಟನಾಗಿ ಎಲ್ಲರನ್ನು ಕುಂತಲ್ಲೇ ಕುಪ್ಪಳಿಸಿ ನಗುವಂತೆ ಮಾಡಿದ್ದ ನಟ ಕೋಮಲ್.​​ ಇದೀಗ, ಕಾಲಾಯ ನಮಃ ಚಿತ್ರದ ಮೂಲಕ ಕಂಬ್ಯಾಕ್​​ ಆಗಿದ್ದಾರೆ. ಈ ಸರ್​ಪ್ರೈಸಿಂಗ್​​ ಸುದ್ದಿಯ ಜೊತೆಗೆ ಜಗ್ಗೇಶ್​​ ಮಗ ಗುರುರಾಜ್​​ ಸಿನಿಮಾ ಕೂಡ ಸೆಟ್ಟೇರಿದೆ.

ಕಂಠೀರವ ಸ್ಟೂಡಿಯೋದಲ್ಲಿ ನೆರವೇರಿದ ಈ ಸರಳ ಮುಹೂರ್ತ ಸಮಾರಂಭದಲ್ಲಿ ಜಗ್ಗೇಶ್​​, ಪರಮಳ ಜಗ್ಗೇಶ್​​​, ಗೋಲ್ಡನ್​ ಸ್ಟಾರ್​ ಗಣೇಶ್​​​, ಸಾಧುಕೋಕಿಲ, ಅಶ್ವಥ್​​​​, ಅಭಿಜಿತ್​ ಸೇರಿದಂತೆ ಇಡೀ  ಚಿತ್ರತಂಡ ಹಾಜರಿತ್ತು. ಜತೆಗೆ ಮಗನ ಚಿತ್ರಕ್ಕೆ ಕ್ಲಾಪ್​ ಮಾಡಿ ಮಾತನಾಡಿದ ಜಗ್ಗೇಶ್​​ ಸಿನಿಮಾಗೆ ಶುಭ ಕೋರಿದ್ರು. ಉತ್ಸಾಹಿ ತಂಡಕ್ಕೆ ಎಲ್ಲರ ಸಹಕಾರ ಕೋರಿದ ನವರಸನಾಯಕ ಮೋಷನ್​ ಪೋಸ್ಟರ್​ ರಿಲೀಸ್​ ಕೂಡ ಮಾಡಿದ್ರು.

  • ಮೂರು ವರ್ಷಗಳ ಸತತ ಪ್ರಯತ್ನಕ್ಕೆ ಸಿಕ್ಕ ಫಲವಿದು
  • ಶ್ರೀರಾಂಪುರ ಸ್ಟೇಷನ್ ಕಥೆ​​ ಹೇಳಿದ ಪರಿಮಳ ಜಗ್ಗೇಶ್

ಅಮರಾವತಿ ಪೊಲೀಸ್​ ಸ್ಟೇಷನ್​ ಪಕ್ಕಾ ಸಸ್ಪೆನ್ಸ್​ ಥ್ರಿಲ್ಲರ್​ ಕಥೆಯಾಗಿದ್ದು, ಅರಸಿಕೆರೆಯ ಪ್ರತಿಭಾನ್ವಿತ ನಿರ್ದೇಶಕ ಪುನೀತ್​ಅವ್ರ ಸತತ ಪ್ರಯತ್ನದ ಫಲವಾಗಿದೆ. ಸ್ಕ್ರೀಪ್ಟ್​ ಬಗ್ಗೆ ಸಖತ್ ವರ್ಕ್​ ಮಾಡಿ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಇದೇ ಸಮಯದಲ್ಲಿ ಪರಿಮಳ ಜಗ್ಗೇಶ್​ ಕೂಡ ಶ್ರೀರಾಂಪುರ ಸ್ಟೇಷನ್​ ಕಥೆಯನ್ನು ರಿವೀಲ್​ ಮಾಡಿದ್ದು ಇಂಟ್ರೆಸ್ಟಿಂಗ್​ ಆಗಿತ್ತು.

ಇತ್ತೀಚೆಗೆ ಕನ್ನಡ ಸಿನಿಮಾಗಳ ಪರ್ವಕಾಲ ಶುರುವಾಗಿದೆ. ಹಾಗಾಗಿ ಇಂದಿನ ಸಿನಿರಸಿಕರ ಮನಸ್ಸಿಗೆ ಮುದ ನೀಡುವ ಕಥೆಯೊಂದಿಗೆ ಗುರುರಾಜ್​ ಜಗ್ಗೇಶ್​ ಬರ್ತಿದ್ದಾರೆ. ಯಾಕೆ ಇಷ್ಟು ಲೇಟ್​ ಆಯ್ತು ಅನ್ನೋ ಪ್ರಶ್ನೆಗೆ ಅವರ ಮಾತಿನಲ್ಲೇ ಉತ್ತರ ಕೂಡ ಸಿಕ್ಕಿದೆ.

ರಾಜಕೀಯ, ರೈತರ ಕಷ್ಟ ಕಾರ್ಪಣ್ಯಗಳನ್ನು ಒಂದೇ ಸಿನಿಮಾದಲ್ಲಿ ತೋರಿಸಲು ಚಿತ್ರತಂಡ ಹೊರಟಿದೆ. ಜತೆಗೆ ಈ ಸಿನಿಮಾಗೆ ಹೆಚ್ಚು ಕಾಳಜಿ ವಹಿಸಿ ಬಂಡವಾಳ ಹೂಡಿರುವ ಅಂಜನ ರೆಡ್ಡಿ ಕೂಡ ಅಪ್ಪಟ ರೈತರು ಅನ್ನೋದು ವಿಶೇಷವಾಗಿದೆ.

ಯೆಸ್​​.. ಈಗೆಲ್ಲಾ ಸ್ಟಾರ್​ಗಿರಿ ಜಮಾನ ಹೋಗಿದೆ. ಸೂಪರ್​ ಸ್ಟಾರ್​ ಮುಖ ನೋಡಿ ಥಿಯೇಟರ್​ಗೆ ಬರೋ ಕಾಲವೂ ಹೀಗಿಲ್ಲ. ಈ ನಡುವೆ ಒಂದೊಳ್ಳೆ ಕಥೆಯೊಂದಿಗೆ ಸಿನಿರಿಸಿಕರ ಹೃದಯ ಗೆಲ್ಲೋಕೆ ಬರ್ತಿದೆ ಅಮರಾವತಿ ಪೊಲೀಸ್​ ಸ್ಟೇಷನ್​​​. ಎನಿವೇ ಈ ಚಿತ್ರಕ್ಕೆ ಆಲ್​ ದಿ ಬೆಸ್ಟ್​ ಹೇಳೋಣ.

ರಾಕೇಶ್​ ಆರುಂಡಿ, ಫಿಲ್ಮ್​​​ ಬ್ಯುರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES