ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಎಂ.ಬಿ ಪಾಟೀಲ್, ಜಿ ಪರಮೇಶ್ವರ್, ಕೆ.ಜೆ ಜಾರ್ಜ್, ರಾಮಲಿಂಗ ರೆಡ್ಡಿ ಸೇರಿ ಜಂಟಿಯಾಗಿ ಇಂದು ಬೆಂಗಳೂರಿನ ರಾಜ್ಯ ಕಾಂಗ್ರೆಸ್ನಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಬಿಬಿಎಂಪಿ ವ್ಯಾಪ್ತಿಯ ಮತದಾರರ ಮಾಹಿತಿಯನ್ನ ರಾಜ್ಯ ಸರ್ಕಾರ ಕಳವು ಮಾಡುತ್ತಿರೋ ಬಗ್ಗೆ ಸಿದ್ದರಾಮಯ್ಯ ಅವರು ಆರೋಪಿಸಿ, ಬಿಬಿಎಂಪಿ, ಚುನಾವಣಾ ಅಧಿಕಾರಿಗಳು, ಬೆಂಗಳೂರು ಉಸ್ತುವಾರಿ ಸೇರಿ ಎಲ್ಲಾ ಮಾಡಿರೋ ಸಂಚು ಇದು. ಮತದಾರರ ಪಟ್ಟಿ ಪರಿಷ್ಕರಣೆ ಮಾಡ್ತಿವಿ ಅಂತ ಒಂದು ಸಂಸ್ಥೆ ಹೇಳುತ್ತದೆ. ಅಗಸ್ಟ್ 20 2022 ಕ್ಕೆ ಬಿಬಿಎಂಪಿ ಆದೇಶ ಕೊಡುತ್ತದೆ. ಪತ್ರಿಕೆ ಜಾಹೀರಾತು ಕೊಡದೇ ಖಾಸಗಿ ವ್ಯಕ್ತಿಗಳಿಗೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಅನುಮತಿ ಕೊಡುತ್ತದೆ. ಬಿಬಿಎಂಪಿಯಿಂದ ಖಾಸಗಿ ವ್ಯಕ್ತಿಗಳಿಗೆ ಬಿಎಲ್ಓ ಗೆ ಅಂತ ಐಡಿ ಕೊಡಲಾಗುತ್ತದೆ. ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರರು ಅಲ್ಲದಿದ್ರೆ ಅವರಿಗೆ ಬಿಎಲ್ಓ ಆಗಲು ಆಗಲ್ಲ
ಆದ್ರೆ ಇಲ್ಲಿ ಈ ನಿಯಮವನ್ನು ಮೀರಲಾಗಿದೆ ಎಂದರು.
ಬಿಬಿಎಂಪಿ ವ್ಯಾಪ್ತಿಯ ಚಿಲುಮೆ ಇನ್ಸಿಟಿಟ್ಯೂಷನ್ ಡಾಟಾ ಸಂಗ್ರಹಿಸಿದೆ. ಕೃಷ್ಣಪ್ಪ, ರವಿಕುಮಾರ್ ಇದರ ಕಿಂಗ್ ಪಿನ್ಸ್ ಬಿಬಿಎಂಪಿ, ಎಲ್ಲರೂ ಸೇರಿ ಮಾಡಿರುವ ಸಂಚು ಇದೆ. ಮತದಾರರ ಜಾಗೃತಿ ಮಾಡ್ತೇವೆಂದು ಮತದಾರರ ಅರ್ಜಿ ಮಾಡುತ್ತಿದೆ. ಚಿಲುಮೆ ಸಂಸ್ಥೆ ಫ್ರೀ ಆಫ್ ಕಾಸ್ಟ್ ನಲ್ಲಿ ಮಾಡ್ತೇವೆಂದು ಅರ್ಜಿ, ಆಗಸ್ಟ್ 20 ರಂದು ಅರ್ಜಿಸಲ್ಲಿಸಿದೆ. ನೊಟಿಫಿಕೇಶನ್ ಇಲ್ಲದೆ ಇವರು ಕೊಟ್ಟಿದ್ದೇಕೆ. ಮತದಾರರ ಡಾಟಾ ಸಂಗ್ರಹ ಕೊಟ್ಟಿದ್ದೇಕೆ. ಬಿಬಿಎಂಪಿಯಿಂದ ಐಡೆಂಟಿಟಿ ಕಾರ್ಡ್ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಬೂತ್ ಲೆವೆಲ್ ಆಫೀಸರ್ ಎಂದು ಕೊಟ್ಟಿದ್ದಾರೆ. ಪೀಪಲ್ ಸಪರೆಂಟೇಶನ್ ಆ್ಯಕ್ಟ್ ಪ್ರಕಾರ ಬರಲ್ಲ. ಸರ್ಕಾರಿ ಅಧಿಕಾರಿಗಳು ಬಿಟ್ಟು ಬೇರೆಯವರು ಮಾಡುವಂತಿಲ್ಲ. ಡಾಟಾ ಸಂಗ್ರಹ ಯಾರು ಮಾಡುವಂತಿಲ್ಲ. ಖಾಸಗಿಯವರು ಮಾಡಲು ಬರುವುದಿಲ್ಲ. ಇದು ಐಪಿಸಿ ಪ್ರಕಾರ ಗಂಭೀರ ಅಪರಾಧ. ಖಾಸಗಿಯವರು ಮಾಹಿತಿ ಸಂಗ್ರಹಿಸಲು ಬರಲ್ಲ. ನವೆಂಬರ್ ತಿಂಗಳಲ್ಲಿ ನಿಮಗೆ ಕೊಟ್ಟಿರುವ ಅನುಮತಿ ನಿರಾಕರಿಸುತ್ತಿದ್ದೆವೆ ಅನ್ನುತ್ತಾರೆ. ಆದ್ರೆ ಯಾವ ಕಾರಣಕ್ಕೆ ಅಂತ ಹೇಳೊದಿಲ್ಲ. ಭ್ರಷ್ಟಾಚಾರ ಅನ್ನೊದು ಕೇವಲ ಗುತ್ತಿಗೆಯಲ್ಲಿ ನಡೆಯುತ್ತಿಲ್ಲ. ಚುನಾವಣಾ ಅಂಕಿಅಂಶಗಳನ್ನು ಸಂಗೃಹಿಸಿ ಅಕ್ರಮ ಎಸೆಯಲಾಗುತ್ತಿದೆ ಎಂದರು.
ಈ ರೀತಿ ಅಕ್ರಮ ನಡೆದಿರೋವಾಗಿ ಸಿಎಂ ಆಗಿ ಹೇಗೆ ಬೊಮ್ಮಾಯಿ ಸಿಎಂ ಆಗಿ ಮುಂದುವರಿಯಲು ಸಾಧ್ಯನಾ? ಈ ಕೂಡಲೇ ಪೊಲೀಸರು ಬೊಮ್ಮಾಯಿಯನ್ನು ಅರೆಸ್ಟ್ ಮಾಡಬೇಕು. ಕಾಂಗ್ರೆಸ್ ಅಕ್ರಮದ ವಿರುದ್ದ ದೂರು ನೀಡುತ್ತೆವೆ. ಎಫ್ಐಆರ್ ಆಗದಿದ್ರೆ ಹೋರಾಟವನ್ನು ಮಾಡುತ್ತೇವೆ. ಸಿಎಂ ಈ ಪ್ರಕರಣದಲ್ಲಿ ಅರೆಸ್ಟ್ ಆಗಲೇಬೆಕು. ಈ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಯಿಂದ ಅಕ್ರಮದ ಬಗ್ಗೆ ತನಿಖೆಯಾಗಬೇಕು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದರು.