Monday, December 23, 2024

ಶ್ರದ್ದಾ ಕೊಲೆ ಪ್ರಕರಣ : ಆರೋಪಿ ಅಪ್ತಾಬ್ 5 ದಿನ ಪೊಲೀಸ್​ ಕಸ್ಟಡಿಗೆ

ನವದೆಹಲಿ : ದೇಶದ ರಾಜದಾನಿಯಲ್ಲಿ ನಡೆದ ಭಯಂಕರ ಶ್ರದ್ದಾ ಕೊಲೆ ಪ್ರಕರಣದ ಆರೋಪಿಯನ್ನು 5 ದಿನ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ.

ಇಂದು ನವದೆಹಲಿಯ ವಿಡಿಯೋ ಕಾನ್ಪರೆನ್ಸ್​ ಮೂಲಕ ಸಾಕೇತ್​ ಕೋರ್ಟ್​ ಗೆ ಕೊಲೆ ಆರೋಪಿ ಅಪ್ತಾಬ್​ನನ್ನು, ಒಳಪಡಿಸಲಾಗಿತ್ತು. ಈ ವೇಳೆ ತೀರ್ಪು ನೀಡಿದ ಸಾಕೇತ್​ ಕೋರ್ಟ್​ ಆರೋಪಿಯಾದ ಅಪ್ತಾಬ್​ನನ್ನು, 5 ದಿನ ಮಂಪರು ಪರೀಕ್ಷೆಗೆ ಒಳಪಡಿಸಿ ಪೊಲೀಸ್​ ಕಷ್ಟಡಿಗೆ ನೀಡಲಾಗಿದೆ.

ಡೇಟಿಂಗ್​ ಆ್ಯಪ್​ ಮೂಲಕ ಪರಿಚಯವಾದ ಇವರು ಪರಸ್ಪರ ಪ್ರೀತಿಸತೊಡಗಿದರು. ಬಳಿಕ ಶ್ರದ್ದಾಳ ಮನೆಯಲ್ಲಿ ಒಪ್ಪದ ಕಾರಣ ಆಕೆ ತನ್ನ ಬಟ್ಟೆಗಳನ್ನು ತೆಗೆದುಕೊಂಡು ಅಪ್ತಾಬ್​ ಜೊತೆ ವಾಸಿಸಲು ಮನೆ ಬಿಟ್ಟು ಬಂದಳು ಆದರೆ ಆಕೆಯ ಈ ನಿರ್ಧಾರವೇ ಆಕೆಯ ಪ್ರಾಣವನ್ನು ಬಲಿ ಪಡೆದುಕೊಂಡಿತು.

RELATED ARTICLES

Related Articles

TRENDING ARTICLES