Wednesday, January 22, 2025

ಬೊಂಬೆನಗರಿಯಲ್ಲಿ ದಳ, ಕಮಲ ಜಂಗೀಕುಸ್ತಿ

ರಾಮನಗರ : ಬೊಂಬೆನಗರಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮತ್ತೊಂದು ಕ್ರೆಡಿಟ್‌ವಾರ್ ಆರಂಭವಾಗಿದೆ. ಮಾಜಿ ಸಿಎಂ ಹೆಚ್ ಡಿಕೆ ಹಾಗೂ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ನಡುವೆ ಮತ್ತೊಂದು ಕದನ ಆರಂಭವಾಗಿದೆ.ಚನ್ನಪಟ್ಟಣ ತಾಲೂಕಿನ ವಸತಿರಹಿತರಿಗೆ ನೆರವಾಗುವ ಉದ್ದೇಶದಿಂದ ರಾಜೀವ್ ಗಾಂಧಿ ವಸತಿ ನಿಗಮದಿಂದ ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ಮೂರು ಸಾವಿರ ಮನೆ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದ್ದು, HDK CPY ಇದರ ಕ್ರೆಡಿಟ್ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ 2019 ರ ನವಂಬರ್‌ನಲ್ಲೇ ವಸತಿ ಸಚಿವರಿಗೆ ಪತ್ರ ಬರೆದು 3200 ಮನೆ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ವಸತಿ ಸಚಿವರು ಸ್ಪಂದಿಸಿದ್ದರು. ಆದರೆ, ಕೊರೋನಾದಿಂದಾಗಿ ಅದು ವಿಳಂಬವಾಗಿತ್ತು. ಇದೀಗ ಅದು ಮಂಜೂರಾಗಿದೆ ಎನ್ನುತ್ತಿದ್ದಾರೆ HDK ಬೆಂಬಲಿಗರು.

ಒಟ್ಟಾರೆ ಇಬ್ಬರು ಪ್ರಬಲ ನಾಯಕರ ಜಟಾಪಟಿಯಲ್ಲಿ ತಾಲೂಕಿಗೆ ಮಂಜೂರಾಗಿರುವ ಮನೆಗಳು ಮತ್ತೆಲ್ಲಿ ವಾಪಸ್ ಆಗುತ್ತವೋ ಎಂಬ ಆತಂಕದಲ್ಲಿ ಫಲಾನುಭವಿಗಳಿದ್ದಾರೆ.

ಪ್ರವೀಣ್ ಎಂ.ಹೆಚ್.ಪವರ್ ಟಿವಿ ರಾಮನಗರ

RELATED ARTICLES

Related Articles

TRENDING ARTICLES