Monday, December 23, 2024

ಅಣ್ಣನ ಮೇಲಿನ ದ್ವೇಷಕ್ಕೆ ತಂಗಿ ಟಾರ್ಗೆಟ್

ಬೆಂಗಳೂರು : ಅಣ್ಣನ ಮೇಲಿನ ದ್ವೇಷಕ್ಕೆ ತಂಗಿ ಟಾರ್ಗೆಟ್ ಮಾಡಿದಲ್ಲದೇ ಇನ್ಸ್ಟಾಗ್ರಾಂನಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಕಾಲ್ ಗರ್ಲ್ ಎಂದು ಪೊಟೋ ಅಪ್ಲೋಡ್ ಮಾಡಿದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ನಗರದಲ್ಲಿ ಪ್ರತಿ ನಿತ್ಯ ಯುವತಿಯ ನಂಬರ್ ಗೆ ಬರ್ತಿತ್ತು ನೂರಾರು ಕರೆಗಳು ಬರುತ್ತಿದ್ದು, ನಕಲಿ ಖಾತೆಯಲ್ಲಿ ಮಾರ್ಫ್ ಮಾಡಿದ ಯುವತಿಯ ಅಶ್ಲೀಲ ಫೋಟೋಗಳನ್ನು, ಯುವತಿಯ ಹೆಸರಲ್ಲೆ ಅಕೌಂಟ್ ಕ್ರಿಯೆಟ್ ಮಾಡಿ ಅವಳದ್ದೆ ಪೊಟೋ ಅಫ್ಲೋಡ್ ಮಾಡಿದ್ದಾನೆ.

ಬಿಕಾಂ ಓದುತ್ತಿದ್ದ ಯುವತಿಯೇ ಈ ರೀತಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದು ಬೆಳಕಿಗೆ ಬಂದಿದ್ದು, ಅದ್ರೆ ಯಾಕಾಗಿ ಹೀಗೆ ಮಾಡಿದ್ಲೂ ಅನ್ನೋದನ್ನ ಪೊಲೀಸರು ವಿಚಾರಿಸಿದಾಗ ಬಾಯಿಬಿಟ್ಟಿದ್ದಾಳೆ. ಆರೋಪಿಗೆ ಓರ್ವ ಹುಡುಗನ ಜೊತೆ ಪ್ರೇಮಾಂಕುರವಾಗಿತ್ತು. ದೂರುದಾರಳ ಅಣ್ಣ ತನ್ನ ಫ್ರೆಂಡ್ ಗೆ ಅವಳನ್ನ ಲವ್ ಮಾಡ ಬೇಡ ಸರಿ ಇಲ್ಲ ಅಂದಿದ್ನಂತೆ, ಇದನ್ನ ಆರೋಪಿಯ ಲವ್ವರ್ ಬಂದು ನನ್ನ ಸ್ನೇಹಿತ ನಿನ್ನ ಬಗ್ಗೆ ಹೀಗೆ ಹೇಳುತ್ತಿದ್ದ ಎಂದಿದ್ದ, ಇದಕ್ಕೆ ಅತನ ತಂಗಿಯ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ದ್ವೇಷ ತೀರಿಸಿಕೊಳ್ಳೋಕೆ ಯುವತಿ ಮುಂದಾಗಿದ್ದಾಳೆ. ಇನ್ನು,ಆರೋಪಿಯನ್ನ ಬಂಧಿಸಿರುವ ಈಶಾನ್ಯ ವಿಭಾಗ ಸೈಬರ್ ಠಾಣೆ ಪೊಲೀಸರು, ಈಶಾನ್ಯ ವಿಭಾಗ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES