ಬೆಂಗಳೂರು: ಬಿಜೆಪಿಯ ಕಾರ್ಯಕರ್ತರಿಗೆ ಸರ್ಕಾರದಿಂದ ಬಿಬಿಎಂಪಿ(ಬೆಂಗಳೂರು ಮಹಾನಗರ ಪಾಲಿಕೆ) ಐಡಿ ಕಾರ್ಡ್ ಕೊಟ್ಟು ಬಿಬಿಎಂಪಿ ವ್ಯಾಪ್ತಿಯ ಮತದಾರರ ಮಾಹಿತಿ ಕಳವು ಮಾಡಲಾಗಿದೆ ಎಂದು ಡಿ.ಕೆ ಶಿವಕುಮಾರ್ ಅವರು ಆರೋಪಿಸಿದರು.
ಬೆಂಗಳೂರಿನ ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತವಾರಿ ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಇನ್ನೀತರ ನಾಯಕರು ಸೇರಿ ಇಂದು ಜಂಟಿಯಾಗಿ ಸುದ್ದಿಘೋಷ್ಠಿ ನಡೆಸಿದರು.
ಈ ವೇಳೆ ಮಾತನಾಡಿದ ಡಿಕೆಶಿ, ಕಳೆದ ಕೆಲವು ತಿಂಗಳಿನಿಂದ ಸರ್ಕಾರಿ ಅಧಿಕಾರಿಗಳ ಎಂದು ಬಿಬಿಎಂಪಿ ವ್ಯಾಪ್ತಿಯ ಮತದಾರರ ಮಾಹಿತಿ ಸಂಗ್ರಹಿಸಿ ಸಮೀಕ್ಷೆ ನಡೆಸಲಾಗಿದೆ. ಇದನ್ನ ಕಳೆದ ಎರಡು ತಿಂಗಳಿಂದ ಈ ಅಕ್ರಮದ ಬಗ್ಗೆ ಮಾಹಿತಿ ಕಲೆಹಾಕಿದ್ದೆವು. ಗುತ್ತಿಗೆಯಲ್ಲಿ ಅಕ್ರಮ ನೋಡಿದ್ದೆವು, ಆದ್ರೆ ಈ ರೀತಿಯ ಅಕ್ರಮ ನೋಡಿರಲಿಲ್ಲ ಎಂದರು.
ಮತದಾರರ ಮಾಹಿತಿ ಕಳವು ಮಾಡಲು 18 ಸಾವಿರ ಕಾರ್ಯಕರ್ತರನ್ನ ಬಳಸಲಾಗಿದೆ. ತಮ್ಮವರನ್ನ ಗೆಲ್ಲಿಸಲು ಈ ಪ್ರಯತ್ನ ಮಾಡಲಾಗಿದೆ. ಯಾವುದೋ ಒಬ್ಬ ಸಚಿವರ ಮಾತನ್ನ ಕೇಳಿ ಸಿಎಂ ಈ ಸಾಹಸಕ್ಕೆ ಕೈ ಹಾಕಿದ್ದಾರೆ. ನಿನ್ನೆ ಖಾಸಗಿ ಸಂಸ್ಥೆಗೆ ಕೊಟ್ಟಿರೋ ಆದೇಶವನ್ನು ವಾಪಾಸ್ಸ್ ಪಡೆದಿದ್ದಾರೆ. ಯಾಕೆ ವಾಪಾಸ್ಸು ಪಡೆದಿದ್ದಿರಿ? ಅಕ್ರಮ ಎಸೆಗಿದ್ರೆ ಎಫ್ ಐ ಆರ್ ಎಲ್ಲಿ ದಾಖಲಿಸಿದ್ದಿರಿ? ಮತದಾರರ ಮಾಹಿತಿಯನ್ನು ತಿದ್ದುಪಡಿ ಮಾಡಲಾಗಿದೆ. ಇನ್ನು ನಕಲಿ ಮತದಾರರನ್ನು ಸೇರಿಸಲಾಗಿದೆ. ದಲಿತರ, ಅಲ್ಪಸಂಖ್ಯಾತರ ಮತಗಳನ್ನು ಕಿತ್ತುಹಾಕಲಾಗಿದೆ ಎಂದು ಡಿಕೆಶಿ ಆರೋಪಿಸಿದರು.