Monday, November 25, 2024

ಬಿಬಿಎಂಪಿ ಮತದಾರರ ಡೇಟಾ ಕಳವು ಆರೋಪಕ್ಕೂ ಹೊಂಬಾಳೆ ಸಂಸ್ಥೆಗೂ ಸಂಬಂಧ ಇಲ್ಲ

ಬೆಂಗಳೂರು: ಇಂದು ರಾಜ್ಯ ಕಾಂಗ್ರೆಸ್​ ನಾಯಕರು ಜಂಟಿಯಾಗಿ ಪ್ರತಿಕಾಗೋಷ್ಠಿ ನಡೆಸಿ ರಾಜ್ಯ ಸರ್ಕಾರ ಹಾಗೂ ಸಚಿವ ಅಶ್ವಥ್ ನಾರಾಯಣ್​ ವಿರುದ್ಧ ರಾಜ್ಯ ಕಾಂಗ್ರೆಸ್​ ಕಿಡಿಕಾರಿ, ಖಾಸಗಿ ಸಂಸ್ಥೆಯಾದ ಹೊಂಬಾಳೆ-ಚಿಲುಮೆ ಸಂಸ್ಥೆ ಮೂಲಕ ರಾಜ್ಯ ಸರ್ಕಾರ ಬಿಬಿಎಂಪಿ ವ್ಯಾಪ್ತಿಯ ಮತದಾರರ ಗೌಪ್ಯ ಮಾಹಿತಿಯನ್ನ ಸಂಗ್ರಹ ಮಾಡಿದೆ ಎಂದು ಆರೋಪಿಸಿದ್ದರು.

ಇದಕ್ಕೆ ಪ್ರತ್ಯುತ್ತರವಾಗಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್​, ಇಂತಹ ನಿರಾಧಾರವಾದ ಆಪಾದನೆಗೆ ಖಂಡಿಸುತ್ತೇನೆ. ಚುನಾವಣೆ ಆಯೋಗದ ಹಿನ್ನೆಲೆಯಲ್ಲಿ ಅದು ನಡೆದಿರುತ್ತದೆ. ಆಯೋಗದ ಅಡಿಯಲ್ಲಿ ಇದು ನಡೆಯುತ್ತದೆ. ಪಕ್ಷ-ಸರ್ಕಾರದಿಂದ ಇದು ಆಗೋದಿಲ್ಲ ಎಂದರು.

ಕಳ್ಳನ ಮನಸ್ಸು ಹುಳ್ಳು ಅನ್ನೋ ಹಾಗೆ ಕಾಂಗ್ರೆಸ್ ನವರ ಸುದ್ದಿಗೋಷ್ಠಿ ಮಾಡಲಾಗಿದೆ. ಆರೋಪಕ್ಕೂ ನನ್ನ ಸಹೋದರ ಸಂಸ್ಥೆಯಾದ ಹೊಂಬಾಳೆ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ. ನಮ್ಮ ನಾಡಿಗೆ ಗೌರವ ತರುವ ಸಂಸ್ಥೆ ನಮ್ಮದು. ಈ ರೀತಿಯ ಮಾಹಿತಿ ಕಳವು ಮಾಡುವ ಸಂಸ್ಥೆಯಲ್ಲ. ಕಾಂಗ್ರೆಸ್ ಅವರಂತೆ ನಾಡಿಗೆ ಅಗೌರವ ತರುವವರು‌ ಅಲ್ಲ. ಕಾಂಗ್ರೆಸ್ ಅವರಿಗೆ ಒಂದು ಎರಡು ಇಲ್ಲ ಎಂದು ತಿಳಿಸಿದರು.

ಕೃಷ್ಣಪ್ಪ ಅವರ ಫೋಟೋ ರಿಲೀಸ್ ವಿಚಾರವಾಗಿ ಮಾತನಾಡಿದ ಅಶ್ವಥ್ ನಾರಾಯಣ್​, ಕೃಷ್ಣಪ್ಪ ಯಾರು ಅಂತ ಗೊತ್ತು. ಸಾಮಾಜಿಕ ಕಾರ್ಯಕ್ರಮದಲ್ಲಿ ಕರೆದಾಗ ಹೋಗಿದ್ದೆ. ಕಾಂಗ್ರೆಸ್ ಅವರನ್ನ ಕೇಳಿ ಹೋಗಬೇಕಾ? ಕಾರ್ಯಕ್ರಮಕ್ಕೆ ಕರೆದಿದ್ದರು ಹೀಗಾಗಿ ಭಾಗವಹಿಸಿದ್ದೇನೆ. ಆ ಕಾರ್ಯಕ್ರಮಕ್ಕೆ ಹೋಗಿರೋದು ತಪ್ಪಾ? ಕಾಂಗ್ರೆಸ್ ಅವರು ದೂರು ನೀಡಲಿ. ಈ ಬಗ್ಗೆ ಚುನಾವಣೆ ಆಯೋಗ ತನಿಖೆ ಮಾಡುತ್ತದೆ ಎಂದರು.

ಕಾಂಗ್ರೆಸ್ ಗೆ ಮಾಹಿತಿ ಕೊರತೆ, ಆಧಾರದ‌ ಕೊರತೆ ಇದೆ. ಕಾಂಗ್ರೆಸ್ ಅವರು ಮಸಿ ಬಳದುಕೊಂಡು ಇದ್ದಾರೆ. ಕಾಂಗ್ರೆಸ್ ಕಾನೂನು ಉಲ್ಲಂಘನೆ ‌ಮಾಡಿರೋದು. ಡಿಕೆ, ಸಿದ್ದರಾಮಯ್ಯ, ಸುರ್ಜೇವಾಲ ಕಾನೂನು ವಿರುದ್ಧ‌ ಕೆಲಸ ಮಾಡ್ತಿದ್ದಾರೆ. ಆಧಾರ ಇಟ್ಟು ಮಾತಾಡಬೇಕು. ಇದರಲ್ಲಿ ನಾನು ಭಾಗಿಯಾಗಿಲ್ಲ. ನನಗೆ ಮಸಿ ಬಳಿಸೋಕೆ ಹೀಗೆ ಮಾಡ್ತಾರೆ. ರವಿ ಅನ್ನೋನು ನನಗೆ ಗೊತ್ತು. ಯಾರ್ ಆರೋಪ ಮಾಡಿದ್ದಾರೆ ಆಧಾರ ಇದ್ದರೆ ದೂರು ಚುನಾವಣೆ ಆಯೋಗಕ್ಕೆ ನೀಡಲಿ.

ಯಾರೋ ಏನೋ ಆರೋಪ ಮಾಡಿದ್ರೂ ನನಗೇನು ಸಂಬಂಧವಿಲ್ಲ. ನಾನು ಎಲೆಕ್ಷನ್ ಕಮಿಷನರ್ ಅಲ್ಲ. ಕಾಂಗ್ರೆಸ್ ಅವರಿಗೆ ನನ್ನನ್ನ ನೋಡಿದ್ರೆ ಭಯ. ಟಾರ್ಗೆಟ್ ಅಶ್ವಥ್ ನಾರಾಯಣ ಆಗಿದೆ. ನಮ್ಮಲ್ಲಿ ಯಾರು ಸಂಚು ಮಾಡ್ತಿಲ್ಲ ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಇದು ಕುಟುಂಬದ ಪಕ್ಷ ಅಲ್ಲ. ನಮ್ಮದು ಪ್ರೈವೆಟ್ ಲಿಮಿಟೆಡ್ ಅಷ್ಟೆ. ಇದು ಗಾಳಿ ಸುದ್ದಿ ಅಷ್ಟೆ. ನಾನು ಯಾರನ್ನು ಡಿಪೆಂಡ್ ಮಾಡಲ್ಲ. ಇಂತಹ ಚುನಾವಣೆ ವಿಚಾರ ಬಂದರೆ ಆಯೋಗ ನೋಡುತ್ತದೆ ಅವರಿಗೆ ದೂರು ನೀಡಲಿ ಎಂದು ಅಶ್ವಥ್ ನಾರಾಯಣ್​ ಅವರು ಹೇಳಿದರು.

RELATED ARTICLES

Related Articles

TRENDING ARTICLES