Monday, December 23, 2024

ಕಾಮಕ್ರಿಮಿ ಶಿವಮೂರ್ತಿ ಮಹಾತಂತ್ರಿ ಬಯಲು

ಚಿತ್ರದುರ್ಗ:  ಕಾಮಕ್ರಿಮಿ ಶಿವಮೂರ್ತಿ ವಿರುದ್ಧದ ಪೋಕ್ಸೊ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲುಪಾಲಾಗಿರುವ ಕಾಮಾಂಧ ಕಾನೂನು ಕುಣಿಕೆಯಿಂದ ಪಾರಾಗಲು ಅಡ್ಡದಾರಿ ಹಿಡಿದ್ರಾ ಅನ್ನೋ ಅನುಮಾನಗಳು ದಟ್ಟವಾಗಿವೆ. ತನ್ನ ಮೇಲಿನ ಗುರುತರ ಆರೋಪದಿಂದ ಪಾರಾಗಲು ಕಾನೂನು ಹೋರಾಟ ಮಾಡಲಾಗದೆ ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಕಾಮುಕ ಶಿವಮೂರ್ತಿ ಮಹಾಸಂಚು ರೂಪಿಸಿದ್ದು, ಕೇಸ್ ವಾಪಸ್ ತೆಗೆದುಕೊಳ್ಳಲು ಸಂತ್ರಸ್ತ ಬಾಲಕಿಯರಿಗೆ ಶಿವಮೂರ್ತಿ ಹಣದ ಆಮಿಷ ಒಡ್ಡಿದ್ದನೆಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಕೇಸ್ ಹಿಂಪಡೆಯಲು ಸಂತ್ರಸ್ತ ಬಾಲಕಿಯೊಬ್ಬಳಿಗೆ ಆರೋಪಿ ಶಿವಮೂರ್ತಿ 3 ಲಕ್ಷ ರೂಪಾಯಿ ಕೊಟ್ಟಿದ್ದನೆಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಪುಷ್ಠಿ ಎಂಬಂತೆ ಶಿವಮೂರ್ತಿಯಿಂದ ದೌರ್ಜನ್ಯಕ್ಕೊಳಗಾದ ಬಾಲಕಿಯೊಬ್ಬಳ ತಾಯಿ ಬಳಿ 3 ಲಕ್ಷ ರೂಪಾಯಿ ಇತ್ತೆಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹೊಸದೊಂದು ಬಾಂಬ್‌ ಸ್ಫೋಟಿಸಿದ್ದಾರೆ.

ಸಂತ್ರಸ್ತ ಬಾಲಕಿ ತಾಯಿ ಬಳಿ ಸಿಕ್ಕ 3 ಲಕ್ಷ ಹಣ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ಇದರ ನಡುವೆಯೇ ಚಿತ್ರದುರ್ಗದ ಬಾಲ ಮಂದಿರದಲ್ಲಿ ಮತ್ತೊಬ್ಬಳು ಸಂತ್ರಸ್ತ ಬಾಲಕಿ ಇದ್ದ ವೇಳೆ ಶಿವಮೂರ್ತಿ ಹಣ ಕೊಟ್ಟಿದ್ದಾರೆ. ಕೇಸ್ ವಾಪಸ್ ಪಡೆದು ನಮ್ಮೊಂದಿಗೆ ಮನೆಗೆ ಬಾ ಎಂದು ಕರೆದಿದ್ದಾನೆ ಎನ್ನಲಾಗಿದೆ. ಆದರೆ, ಇದೆಲ್ಲವೂ ಸೂಕ್ತ ತನಿಖೆಯಿಂದಷ್ಟೇ ಹೊರಬರಬೇಕಿದೆ.

RELATED ARTICLES

Related Articles

TRENDING ARTICLES