ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಎಂ.ಬಿ ಪಾಟೀಲ್, ಜಿ ಪರಮೇಶ್ವರ್, ಕೆ.ಜೆ ಜಾರ್ಜ್, ರಾಮಲಿಂಗ ರೆಡ್ಡಿ ಸೇರಿ ಜಂಟಿಯಾಗಿ ಇಂದು ಬೆಂಗಳೂರಿನ ರಾಜ್ಯ ಕಾಂಗ್ರೆಸ್ನಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಈ ವೇಳೆ ಮಾತನಾಡಿದ ರಣದೀಪ್ ಸುರ್ಜೇವಾಲ, ಓಟರ್ ಮಾಹಿತಿ ಕದಿಯುವ ಕೆಲಸವನ್ನು ಬಿಬಿಎಂಪಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಮಾಡಿದೆ. ಇದಕ್ಕೆ ಹಲವು ದಾಖಲೆಗಳೂ ಇವೆ. ಬಿಬಿಎಂಪಿಗೆ ಸಿಎಂ ಬೊಮ್ಮಾಯಿ ಉಸ್ತುವಾರಿ, ತುಷಾರ್ ಗಿರಿನಾಥ್ ಬಿಬಿಎಂಪಿ ಚುನಾವಣಾಧಿಕಾರಿಯೂ ಆಗಿರ್ತಾರೆ. ಚಿಲುಮೆ ಎನ್ಜಿಓಗೆ ಮಹದೇವಪುರದಲ್ಲಿ ಜಾಗೃತಿ ಮೂಡಿಸಲು ಅನುಮತಿ ನೀಡಲಾಗಿರುತ್ತದೆ. ಅನುಭವವೇ ಇಲ್ಲದೇ ಚಿಲುಮೆ ಎನ್.ಜಿ.ಓ ಮನೆಮನೆಗೆ ಹೋಗಿ ಜಾಗೃತಿ ಮೂಡಿಸುತ್ತೇವೆ ಎನ್ನುತ್ತದೆ. ಹೊಂಬಾಳೆ ಪ್ರೈವೇಟ್ ಲಿಮಿಟೆಡ್ ಹಾಗೂ ಚಿಲುಮೆ ಎನ್ಜಿಓದ ಪದಾಧಿಕಾರಿಗಳು ಎಲ್ಲರೂ ಒಂದೇ ಸಂಸ್ಥೆಗೆ ಸೇರಿದವರು ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಬಿಬಿಎಂಪಿ ಈ ಮಾಹಿತಿ ಕಲೆ ಹಾಕಲು ಅನುಮತಿ ನೀಡಿದೆ. ಚಿಲುಮೆ ಎಂಟರ್ ಪ್ರೈಸಸ್, ಡಿಎಪಿ ಹೊಂಬಾಳೆ ಪ್ರೈವೇಟ್ ಲಿಮಿಟೆಡ್ ಈ ಎರಡು ಸಂಸ್ಥೆಗಳ ಎಂ. ಡಿ ಒಬ್ಬರೆ ಆಗಿದ್ದಾರೆ. ಈ ಎರಡು ಸಂಸ್ಥೆಗಳು ಮತದಾನ ನೀಡುವ ಇವಿಎಮ್ ಪ್ರಿಪರೇಷನ್ ಅನ್ನು ಮಾಡುತ್ತದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ 40% ಕಮೀಷನ್ ಸರ್ಕಾರ ಜನರನ್ನ ಲೂಟಿ ಹೊಡೆದಿದೆ. ಇದೀಗ ಮತದಾರರ ಮಾಹಿತಿಯನ್ನು ಕದಿಯುತ್ತಿದೆ. ಬೊಮ್ಮಾಯಿ ಅಕ್ರಮವನ್ನು ನಾವು ದಾಖಲೆ ಸಮೇತ ಬಯಲು ಮಾಡುತ್ತಿದ್ದೆವೆ. ಮತದಾರರ ಮಾಹಿತಿಯನ್ನು ಸರ್ಕಾರಿ ಅಧಿಕಾರಿಗಳನ್ನು ಬಳಸಿ ಕದಿಯಲಾಗಿದೆ. ಸಿಎಂ ಬೊಮ್ಮಾಯಿ ಬಿಬಿಎಂಪಿಗೆ ಜಿಲ್ಲಾ ಉಸ್ತುವಾರಿ, ತುಷಾರ ಗಿರಿನಾಥ್ ಜಿಲ್ಲಾ ಮುಖ್ಯ ಚುನಾವಣಾ ಅಧಿಕಾರಿ ಯಾಗಿದ್ದಾರೆ. ಖಾಸಗಿ ಸಂಸ್ಥೆಗೆ ಮತದಾರ ಮಾಹಿತಿ ಕಲೆ ಹಾಕುವಂತೆ ಹೇಳಲಾಗಿದೆ. ಮಹದೇವಪುರ ಕ್ಷೇತ್ರದಲ್ಲಿ ಮೊದಲು ಈ ಸರ್ವೆ ಆಗಿದೆ, ಸರ್ಕಾರ ಈ ಮಾಹಿತಿ ಕಲೆ ಹಾಕಲು ಅನುಮತಿ ನೀಡಿದೆ. ಚಿಲುಮೆ ಮತ್ತು, ಡಿಎಪಿ ಹೊಂಬಾಳೆ ಸಂಸ್ಥೆಯ ಮೂಲಕ ಮಾಹಿತಿ ಕದಿಯಲಾಗಿದೆ. ಈ ಸಂಸ್ಥೆಗೆ ಚುನಾವಣಾ ಸಮೀಕ್ಷೆ ಯಾವುದೇ ಅನುಭವವಿಲ್ಲ ಎಂದು ಸುರ್ಜೇವಾಲ ಗಂಭೀರ ಆರೋಪ ಮಾಡಿ ದಾಖಲೆಗಳನ್ನ ಬಿಡುಗಡೆ ಮಾಡಿದರು.
ಸರ್ಕಾರದ ಅಧಿಕಾರಿಗಳು ಎಂದು ಮತದಾರರ ಗೌಪ್ಯ ಮಾಹಿತಿಯನ್ನ ರಾಜ್ಯ ಸರ್ಕಾರ ಈ ಮೂಲಕ ಸಂಗ್ರಹ ಮಾಡಿಸುತ್ತಿದೆ. ಬೂತ್ ಲೇವ್ಲ್ ಅಧಿಕಾರಿಗಳು ಎಂದು ಮಾಹಿತಿ ಸಂಗ್ರಹ ಮಾಡಲಾಗುತ್ತಿದ್ದು, ಈಗಲೇ ಸಿಎಂ ಅವರನ್ನ ಬಂಧಿಸಬೇಕು. ಅಕ್ರಮದ ಉದ್ದೇಶಕ್ಕಾಗಿ ಮಾಹಿತಿ ಕಲೆಹಾಕಲಾಗುತ್ತಿದೆ.